ಈ ವರ್ಷ ಅತಿವೃಷ್ಠಿಯಾಗಲಿದೆ : ಕೋಡಿಮಠದ ಶ್ರೀಗಳ ಭವಿಷ್ಯ…ಸಮೃದ್ದಿ ಮಳೇ ಸುರಿಯಲಿದೆ..

ಧಾರವಾಡ :  ಕೋಡಿಮಠದ ಶ್ರೀ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಯುಗಾದಿಯ ದಿನ ವರ್ಷ್ ಭವಿಷ್ಯವನ್ನ ಹೇಳಿದ್ದು, ಈ ಬಾರಿ ರಾಜ್ಯದಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದಿದ್ದಾರೆ. ಕಳೆದ ಬಾರಿ ಅನಾವೃಷ್ಠಿಯಿಂದ ರೈತನ ಭವಿಷ್ಯ ಕೆಟ್ಟಿತ್ತು, ಈ ಬಾರಿ ಅತಿವೃಷ್ಠಿಯಿಂದ ಕೆಡಲಿದೆ ಎಂಬ ಭವಿಷ್ಯ ನುಡಿದಿದ್ದಾರೆ.
ರಾಜ್ಯ ರಾಜಕಾರಣ ಹಾಗೂ ದೆಶದ ರಾಜಕೀಯ, ಬಗ್ಗೆ ಮಾತನಾಡಲು ಇಚ್ಛಿಸಿದ ಸ್ವಾಮೀಜಿ, ಈ ವರ್ಷ ಶಾಂತಿ ಸುಖ ನೆಮ್ಮದಿ ಸಮೃದ್ದಿ ಮಳೇ ಆಗುತ್ತದೆ ಎಂದಷ್ಟೇ ಹೇಳಿದ್ದಾರೆ.  ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರಿಗೆ, ಈ ಬಾರಿ ಹೆಚ್ಚು ಮಳೆಯಾಗಲಿದೆ ಎಂಬ ಭವಿಷ್ಯವಾಣಿ ಸ್ವಲ್ಪ ನೆಮ್ಮದಿ ತಂದಿದೆ. ಅತಿವೃಷ್ಠಿಯಿಂದ ಪರಿಸ್ಥಿತಿ ಕೆಡಲಿದೆ ಎಂದಿರುವ ಶ್ರೀಗಳ ಭವಿಷ್ಯವಾಣಿ ನಿಜವಾಗಲಿದೆಯೋ ಇಲ್ಲವೋ ಕಾದು ನೋಡಬೇಕಷ್ಟೆ.

Comments are closed.

Social Media Auto Publish Powered By : XYZScripts.com