Test series highlights – ಅಗ್ರ ಸ್ಥಾನಕ್ಕೆ ಏರಿ ದಾಖಲೆ ಬರೆದ ಟೀಮ್ ಇಂಡಿಯಾ…

ಭಾರತ ಕ್ರಿಕೆಟ್ ತಂಡ ತನ್ನ ಭರ್ಜರಿ ಫಾರ್ಮ್ ಮುಂದುವರಿಸಿದೆ. ಸತತ ಎಳನೇ ಟೆಸ್ಟ್‌ ಸರಣಿ ಜಯ ಸಾಧಿಸಿದ ಟೀಮ್ ಇಂಡಿಯಾ ದಾಖಲೆ ನಿರ್ಮಿಸಿದೆ. ವಿರಾಟ್ ಕೊಹ್ಲಿ ಈ ಮೂಲಕ ಸತತ ಹೆಚ್ಚು ಟೆಸ್ಟ್‌ ಸರಣಿಯನ್ನು ಗೆದ್ದು ಕೊಂಡ ಭಾರತದ ನಾಯಕ ಎಂಬ ಕೀರ್ತಿಗೆ ಬಾಜನರಾಗಿದ್ದಾರೆ.
ಶ್ರೀಲಂಕಾ, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್, ನ್ಯೂಜಿಲೆಂಡ್, ಬಾಂಗ್ಲಾದೇಶ, ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಸತತ ಸರಣಿ ಜಯ ಸಾಧಿಸಿರುವ ಭಾರತ ಐಸಿಸಿ ಟೆಸ್ಟ್‌ನಲ್ಲಿ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ.
ತವರಿನಲ್ಲಿ ಆಡಿದ ಸತತ ೧3 ಟೆಸ್ಟ್‌ ಪಂದ್ಯಗಳಲ್ಲಿ ಭಾರತ 3-0 ಯಿಂದ ನ್ಯೂಜಿಲೆಂಡ್ ವಿರುದ್ಧ,1-0 ಯಿಂದ ಬಾಂಗ್ಲಾ ವಿರುದ್ಧ, 4-0 ಯಿಂದ ಇಂಗ್ಲೆಂಡ್ ವಿರುದ್ಧ, 2-1 ರಿಂದ ಆಸೀಸ್ ವಿರುದ್ಧ ಜಯ ಸಾಧಿಸಿದೆ. ಆಡಿದ ೧೩ ಪಂದ್ಯಗಳಲ್ಲಿ ಭಾರತ 10 ರಲ್ಲಿ ಜಯ, 2ರಲ್ಲಿ ಡ್ರಾ, 1 ಸೋಲು ಕಂಡಿದೆ.


ಹಲವು ಪ್ರಥಮಗಳಿಗೆ ಸಾಕ್ಷಿಯಾದ ವಿರಾಟ್ ಕೊಹ್ಲಿ ಪಡೆ ಸತತ 19 ಪಂದ್ಯಗಳಲ್ಲಿ ಸೋಲನ್ನೇ ಕಾಣದೆ ಇತಿಹಾಸ ನಿರ್ಮಿಸಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ ಆರಂಭವಾದ ಸರಣಿ, ಆಸೀಸ್ ವರೆಗೂ ಸಾಗಿದ ರೀತಿ ಅಮೋಘ. ಆಫ್ರಿಕಾ ವಿರುದ್ಧ ಸರಣಿ ಜಯ ಸಾಧಿಸಿದ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಬೆಳಿಸಿತು. ಈ ವೇಳೆ ವಿದೇಶದಲ್ಲಿ ಸರಣಿ ಗೆಲುವು ದಾಖಲಿಸಿತು. ಮತ್ತೇ ತವರಿನಲ್ಲಿ ಟೆಸ್ಟ್ ಸರಣಿಗಳನ್ನು ಆಡಿದ ಭಾರತ ಉತ್ತಮ ಪ್ರದರ್ಶನ ನೀಡಿ ನಂಬರ1 ಸ್ಥಾನವನ್ನು ಉಳಿಸಿಕೊಂಡಿದೆ.

ಅಶ್ವಿನ್ ಕಮಾಲ್

ಭಾರತ ತಂಡದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು ತಮ್ಮ ತಾಕತ್ತಿನ ಪ್ರದರ್ಶನ ನೀಡಿದ್ದಾರೆ. ಯಾವುದೇ ತಂಡವಿರಲಿ ವಿಕೆಟ್ ಬೇಟೆಯಲ್ಲಿ ಅಶ್ವಿನ್ ಮುಂದೆ. ಅಲ್ಲದೆ ಬಿಷನ್ ಸಿಂಗ್ ಬೇಡಿ ಬಳಿಕ ನಂಬರ್ 1 ಸ್ಥಾನ ಪಡೆದ ಭಾರತದ ಎರಡನೇ ಬೌಲರ್ ಎಂಬ ಕೀರ್ತಿಗೆ ಇವರು ಭಾಜನರಾಗಿದ್ದಾರೆ. ಅಶ್ವಿನ್ 250 ವಿಕೆಟ್‌ಗಳನ್ನು ವೇಗವಾಗಿ ಪಡೆದ ವಿಶ್ವದ 2ನೇ ಬೌಲರ್. ಅಲ್ಲದೆ ಒಂದೇ ವರ್ಷದಲ್ಲಿ 81 ವಿಕೆಟ್‌ಗಳನ್ನು ಕಬಳಿಸಿ, ಡೇಲ್ ಸ್ಟೇನ್ ದಾಖಲೆ ಅಳಿಸಿಹಾಕಿದ್ದಾರೆ.

ಜಡೇಜಾ
ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ದೇಶಿಯ ಟೂರ್ನಿಗಳಲ್ಲಿ ಮಿಂಚಿ, ತಂಡದಲ್ಲಿ ಸ್ಥಾನ ಪಡೆದು ಜಡೇಜಾ ಪ್ರದರ್ಶನ ಅವರ ಆಟಕ್ಕೆ ಹಿಡಿದ ಕೈ ಗನ್ನಡಿ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುವು ಜಡೇಜಾ ವಿಶ್ವದ ಉತ್ತಮ ಆಲ್‌ರೌಂಡರ್. ಜಡೇಜಾ ಪ್ರಸಕ್ತ ಸರಣಿಯಲ್ಲಿ 25 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಅಲ್ಲದೆ 127 ರನ್ ಕಲೆ ಹಾಕಿದ್ದಾರೆ.

ಚೇತೇಶ್ವರ್ ಪೂಜಾರ, ರಾಹುಲ್
ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ ಹಾಗೂ ಕನ್ನಡಿಗ ರಾಹುಲ್ ಆಸೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ನೀಡಿದ ಪ್ರದರ್ಶನ ಅಮೋಘ. ಪೂಜಾರ ರಾಂಚಿಯಲ್ಲಿ ಅತಿ ಹೆಚ್ಚು ಎಸೆತ ಎದುರಿಸಿ, ದ್ವಿಶತಕ ಬಾರಿಸಿದರು. ಇವರು ಈ ಸರಣಿಯಲ್ಲಿ 1 ಶತಕ, 2 ಅರ್ಧಶತಕದ ನೆರವಿನಿಂದ 405 ರನ್ ಕಲೆ ಹಾಕಿದ್ದಾರೆ. ಇನ್ನು ಕರ್ನಾಟಕದ ರಾಹುಲ್ ಈ ಸರಣಿಯಲ್ಲಿ 6 ಅರ್ಧಶತಕದ ನೆರವಿನಿಂದ 393 ರನ್ ಜೋಡಿಸಿದ್ದಾರೆ.

 

ಸ್ಮಿತ್ ಕಮಾಲ್
ಪ್ರವಾಸಿ ತಂಡದ ನಾಯ ಸ್ಟೀವನ್ ಸ್ಮಿತ್ ಭರ್ಜರಿ ಬ್ಯಾಟಿಂಗ್ ನಡೆಸಿದರು. ಇವರು ಪುಣೆ, ರಾಂಚಿ, ಧರ್ಮಶಾಲಾ ಟೆಸ್ಟ್‌ಗಳಲ್ಲಿ ಶತಕ ಬಾರಿಸಿ ಭಾರತದಲ್ಲಿ ನಾಯಕನಾಗಿ ಮೂರು ಶತಕ ಬಾರಿಸಿದ ದಾಖಲೆಯನ್ನು ಬರೆದರು. ಸ್ಮಿತ್ ಈ ಸರಣಿಯಲ್ಲಿ 499 ರನ್ ಜಮಾಯಿಸಿದ್ದಾರೆ.

ಉಮೇಶ್ ಭರವಸೆ
ವೇಗಿ ಉಮೇಶ್ ಯಾದವ್ ತಂಡದ ಭರವಸೆಗೆ ತಕ್ಕ ಬೌಲಿಂಗ್ ನಡೆಸಿದ್ದಾರೆ. ಅವರು 4 ಟೆಸ್ಟ್‌ಗಳ ಸರಣಿಯಲ್ಲಿ17 ವಿಕೆಟ್ ಪಡೆದು ಮಿಂಚಿದ್ದಾರೆ. ವೇಗದ ಬೌಲಿಂಗ ಪ್ರದರ್ಶನ ಟೀಮ್ ಇಂಡಿಯಾದ ಶಕ್ತಿಯಾಗಿದೆ.

Comments are closed.

Social Media Auto Publish Powered By : XYZScripts.com