Cricket NZ vs SA : ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್ ಜಯದತ್ತ ನ್ಯೂಜಿಲೆಂಡ್..

ಹ್ಯಾಮಿಲ್ಟನ್: ನಾಯಕ ಕೇನ್ ವಿಲಿಯಮ್ಸನ್ ಶತಕ ಹಾಗೂ ಬೌಲರ್‍ಗಳ ಅಮೋಘ ಪ್ರದರ್ಶನದಿಂದ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನಿಂಗ್ಸ್ ಗೆಲುವಿನ ಕನಸು ಕಾಣುತ್ತಿದೆ.

ಪಂದ್ಯದ ನಾಲ್ಕನೇ ದಿನವಾದ ಮಂಗಳವಾರ 4 ವಿಕೆಟ್‍ಗೆ 321 ರನ್‍ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ನ್ಯೂಜಿಲೆಂಡ್ 489 ರನ್‍ಗಳಿಗೆ ಆಲೌಟಾಯಿತು. 175 ರನ್‍ಗಳ ಭಾರೀ ಹಿನ್ನಡೆಯೊಂದಿಗೆ 2ನೇ ಇನಿಂಗ್ಸ್ ಆರಂಭಿಸಿದ ದ. ಆಫ್ರಿಕಾ 85 ರನ್‍ಗೆ 5 ವಿಕೆಟ್ ಕಳೆದುಕೊಂಡಿದೆ. ಮುನ್ನಡೆ ಗಳಿಸಬೇಕಾದರೆ ಇನ್ನೂ 95 ರನ್ ಗಳಿಸಬೇಕಾದ ಸಂಕಷ್ಟದಲ್ಲಿ ಇದೆ.

ಸಂಕ್ಷಿಪ್ತ ಸ್ಕೋರ್

ದ. ಆಫ್ರಿಕಾ 314 ಮತ್ತು 2ನೇ ಇನಿಂಗ್ಸ್ 5 ವಿಕೆಟ್‍ಗೆ 85 (ಆಮ್ಲಾ 19, ಜೀತನ್ 22/2).

ನ್ಯೂಜಿಲೆಂಡ್ ಮೊದಲ ಇನಿಂಗ್ಸ್ 489 (ವಿಲಿಯಮ್ಸನ್ 176, ಗ್ರಾಂಡ್ ಹೋಮ್ 57,ಸ್ಯಾಂಟ್ನರ್ 41, ರಬಡ 118/4, ಮಹರಾಜ್ 118/2).

Comments are closed.

Social Media Auto Publish Powered By : XYZScripts.com