HOt hot ಐಟಿ ಸಿಟಿಯನ್ನು ತಂಪಾಗಿಸಲು ಬಂದಿದೆ ವರ್ಟಿಕಲ್ ಗಾರ್ಡನ್ ….

ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಹಸಿರಿಗೆ ಬರ ಎನ್ನುವಂತಾಗಿದೆ. ದಿನೇ ದಿನೇ ಕ್ಷೀಣಿಸುತ್ತಿರುವ ಹಸಿರನ್ನು ಉಳಿಸಿ ಬೆಳೆಸಲು ಅನೇಕರು ಶ್ರಮಿಸುತ್ತಿದ್ದಾರೆ. ಹಸಿರನ್ನು ಉಳಿಸುವ ಪ್ರಯತ್ನದಲ್ಲಿ ಹೊಸ ಮಾರ್ಗ ವರ್ಟಿಕಲ್ ಗಾರ್ಡನ್.
ಈಗಾಗಲೇ ಪಂಚತಾರಾ ಹೋಟೆಲುಗಳಲ್ಲಿ, ಐಶಾರಾಮಿ ಕಟ್ಟಡಗಳಲ್ಲಿ, ಅಪಾರ್ಟಮೆಂಟುಗಳಲ್ಲಿ ಅಲಂಕಾರಿಕ ವಸ್ತುವಾಗಿ ಪ್ರಸಿದ್ಧವಾಗಿರುವ ವರ್ಟಿಕಲ್ ಗಾರ್ಡನ್ ನ್ನು ಬೆಂಗಳೂರಿನ ಫ್ಲೈಓವರ್ ಗಳ ಕಂಬಳ ಮೇಲೆ ಪರಿಚಯಿಸಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಮತ್ತು ಮಡಿವಾಳವನ್ನು ಕನೆಕ್ಟ್ ಮಾಡುವ ಎಲವೇಟೆಡ್ ಎಕ್ಸ್ ಪ್ರೆಸ್ ವೇ ವರ್ಟಿಕಲ್ ಗಾರ್ಡನ್ ಪಡೆದ ಬೆಂಗಳೂರಿನ ಮೊದಲ ದಾರಿಯಾಗಿದೆ.

ಏನಿದು ವರ್ಟಿಕಲ್ ಗಾರ್ಡನ್?

ಮನೆಯೆದುರಿನ ಅಂಗಳದಲ್ಲಿ, ಬಾಲ್ಕನಿಯಲ್ಲಿ, ಟೆರೇಸ್ ನಲ್ಲಿ ಗಿಡಗಳನ್ನು ನೆಟ್ಟು ಬೆಳೆಸುವುದು ಎಲ್ಲರಿಗೂ ತಿಳಿದಿರುವ ವಿಚಾರ.  ಆದ್ರೆ ಕಾಂಕ್ರೀಟ್ ಕಾಡಿನಲ್ಲಿ ಅಂಗಳ ಎನ್ನುವುದು ಅಪರಿಚಿತ ಪದದಂತೆ ಕಾಣುತ್ತದೆ. ಹಾಗಾಗಿ ಮನೆಯಲ್ಲಿ ಹೂದೋಟ ಬೇಕು ಎನ್ನುವವರು ಮನೆಯ ಉದ್ದಕ್ಕೆ ಗೋಡೆಗೆ ಅಂಟಿಕೊಂಡಂತೆ ಚಿಕ್ಕ ಚಿಕ್ಕ ಕುಂಡಗಳಲ್ಲಿ ಗಿಡಗಳನ್ನು ಶಿಸ್ತಿನಿಂದ ಬೆಳೆಸಬಹುದು. ಇದೇ ವರ್ಟಿಕಲ್ ಗಾರ್ಡನ್.
ಸದ್ಯ ಪ್ರಾಯೋಗಿಕವಾಗಿ ಒಂದು ಕಂಬದ ಮೇಲೆ ವರ್ಟಿಕಲ್ ಗಾರ್ಡನ್ ನಿರ್ಮಿಸಲಾಗಿದ್ದು ಇದು ನೋಡಲು ಸುಂದರ ಮಾತ್ರವಲ್ಲದೆ ಬೆಂಗಳೂರನ್ನು ಬಹುವಾಗಿ ಕಾಡುತ್ತಿರುವ ವಾಯುಮಾಲಿನ್ಯದ ಸಮಸ್ಯೆಗೂ ಒಂದು ಉತ್ತಮ ಪರಿಹಾರ ಮಾರ್ಗವಾಗಬಲ್ಲದು ಎನ್ನಲಾಗಿದೆ.
10 ಕ್ಕೂ ಹೆಚ್ಚು ಪ್ರಭೇದಗಳ ಸುಮಾರು 3500 ಗಿಡಗಳನ್ನು ಮೊದಲ ಹಂತದಲ್ಲಿ ನೆಡಲಾಗಿದೆ. ಆಟೊಮ್ಯಾಟಿಕ್ ಹನಿ ನೀರಾವರಿ ವಿಧಾನದಿಂದ ಈ ಗಿಡಗಳಿಗೆ ನೀರುಣಿಸಲಾಗುತ್ತಿದೆ. ಕಂಬದ ಎಲ್ಲಾ ಕಡೆಗಳಲ್ಲೂ ವಿಭಿನ್ನವಾಗಿ ಗಿಡಗಳನ್ನು ಜೋಡಿಸಲಾಗಿದ್ದು ಇದರಿಂದಾಗಿ ಇಡೀ ಕಂಬವೇ ಒಂದು ಕಲಾಕೃತಿಯಂತೆ ಕಾಣುತ್ತಿದೆ.
SayTrees ಎನ್ನುವ ಸಂಸ್ಥೆ ವರ್ಟಿಕಲ್ ಗಾರ್ಡನ್ ನಿರ್ಮಾಣಕ್ಕೆ ಕೈಜೋಡಿಸಿದೆ. ಮುಂದಿನ ದಿನಗಳಲ್ಲಿ ಸುಮಾರು 9 ಕಿ.ಮೀ ಉದ್ದದ ಮೇಲ್ಸೇತುವೆಯ ಎಲ್ಲಾ ಕಂಬಗಳ ಮೇಲೂ ವರ್ಟಿಕಲ್ ಗಾರ್ಡನ್ ನಿರ್ಮಿಸುವ ಯೋಜನೆ ಈ ಸಂಸ್ಥೆಗಿದೆ.
ಶುದ್ಧ ಗಾಳಿ, ಕಡಿಮೆಯಾದ ಮಾಲಿನ್ಯ, ಕಟ್ಟಡದಲ್ಲಿ ಉಷ್ಣಾಂಶ ನಿಯಂತ್ರಣ ಇವೆಲ್ಲವೂ ವರ್ಟಿಕಲ್ ಗಾರ್ಡನ್ ಗಳಿಂದ ಸಾಧ್ಯ. ಮುಂಬರುವ ದಿನಗಳಲ್ಲಿ ಹೆಚ್ಚೆಚ್ಚು ಕಡೆ ಈ ರೀತಿಯಲ್ಲಾದರೂ ಹಸಿರನ್ನು ಕಾಣುವ ತವಕ ಬೆಂಗಳೂರಿನ ಜನರಿಗಿದೆ.

3 thoughts on “HOt hot ಐಟಿ ಸಿಟಿಯನ್ನು ತಂಪಾಗಿಸಲು ಬಂದಿದೆ ವರ್ಟಿಕಲ್ ಗಾರ್ಡನ್ ….

 • October 18, 2017 at 4:04 PM
  Permalink

  I got this site from my buddy who told me regarding this website
  and at the moment this time I am browsing this web page and reading very informative content at this time.

 • October 20, 2017 at 7:46 PM
  Permalink

  Howdy just wanted to give you a quick heads up and let you know a few of the pictures aren’t loading correctly. I’m not sure why but I think its a linking issue. I’ve tried it in two different browsers and both show the same outcome.|

 • October 21, 2017 at 1:59 AM
  Permalink

  Hey there this is kind of of off topic but I was wanting to know if blogs use WYSIWYG editors or if you have to manually code with HTML.
  I’m starting a blog soon but have no coding experience so I wanted to get guidance from someone with experience.
  Any help would be greatly appreciated!

Comments are closed.

Social Media Auto Publish Powered By : XYZScripts.com