Cricket deodhar trophy – ಭಾರತ ‘ಎ’ ಮಣಿಸಿ ಫೈನಲ್ ತಲುಪಿದ ತಮಿಳುನಾಡು ….

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ದಿನೇಶ್ ಕಾರ್ತಿಕ್ ಅವರ ಜವಾಬ್ದಾರಿಯುತ ಆಟದ ಫಲದಿಂದ ತಮಿಳುನಾಡು ತಂಡ ದೇವಧರ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಎ ತಂಡವನ್ನು ಮಣಿಸಿತು.
ಸೋಮವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ತಮಿಳುನಾಡು ೫೦ ಓವರ್‌ಗಳಲ್ಲಿ ೬ ವಿಕೆಟ್‌ಗೆ ೩೦೩ ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಹಿಂಬಾಲಿಸಿದ ಭಾರತ ಎ ತಂಡ ೪೪.೪ ಓವರ್‌ಗಳಲ್ಲಿ ೨೩೦ ರನ್ ಕಲೆ ಹಾಕಿ ಸೋಲು ಕಂಡಿತು.
೫೧ ರನ್‌ಗಳಿಗೆ ೨ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಮಿಳುನಾಡು ತಂಡಕ್ಕೆ ದಿನೇಶ್ ಕಾರ್ತಿಕ್ ಹಾಗೂ ನಾರಯಣ್ ಆಸರೆಯದಾರು.  ಈ ಜೋಡಿ ೨೮.೧ ಓವರ್‌ಗಳಲ್ಲಿ ೧೫೯ ರನ್ ಕಾಣಿಕೆ ನೀಡಿತು. ನಾರಾಯಣ್ ೭೧ ಹಾಗೂ ದಿನೇಶ್ ಕಾರ್ತಿಕ್ ೯೦ ರನ್ ಬಾರಿಸಿದರು. ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕಲಿಲ್ಲ.
ಮಂದೀಪ್ ಸಿಂಗ್ ಏಕಾಂಗಿ ಹೋರಾಟ ನಡೆಸಿದರು. ೧೧೪ ಎಸೆತಗಳಲ್ಲಿ ೬ ಬೌಂಡರಿ ಹಾಗೂ ೩ ಸಿಕ್ಸರ್ ನೆರವಿನಿಂದ ೯೭ರನ್ ಕಲೆ ಹಾಕಿದರು.
ಉಳಿದ ಬ್ಯಾಟ್ಸ್‌ಮನ್‌ಗಳು ರನ್ ಕಲೆ ಹಾಕದ ಪರಿಣಾಮ ಪಂದ್ಯವನ್ನು ಕೈ ಚೆಲ್ಲಬೇಕಾಯಿತು. ತಮಿಳುನಾಡು ಪರ ರಾಹುಲ್ ಶಾ, ರವಿಶ್ರೀನಿವಾಸ್ ತಲಾ ಮೂರು ವಿಕೆಟ್ ಪಡೆದರು.

Comments are closed.

Social Media Auto Publish Powered By : XYZScripts.com