ತುಮಕೂರು : ಗರ್ಭಪಾತದ ಮಾತ್ರೆ ಸೇವನೆ: ಗರ್ಭಿಣಿ ಸಾವು, ನರ್ಸ್ ಮಂಜುಳಾ ನಾಪತ್ತೆ…

ತುಮಕೂರು :  ಗರ್ಭಪಾತವಾಗುವ ಮಾತ್ರೆ ಸೇವಿಸಿ ಗರ್ಭಿಣಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ಭಾನುವಾರ ನಡೆದಿದೆ. ಕೊರಟಗೆರೆ ನಿವಾಸಿ ರಾಧಾಮಣಿ ಮೃತ ದುರ್ದೈವಿ.   ಕೊರಟಗೆರೆ ಪಟ್ಟಣದ ರವಿ ಕ್ಲೀನಿಕ್‌ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಮಂಜುಳಾ ಗರ್ಭಿಣಿಯ ಸಾವಿಗೆ ಕಾರಣಳಾಗಿದ್ದು, ಆಕೆ ಮೃತಪಟ್ಟಿದ್ದು ತಿಳಿಯುತ್ತಿದ್ದಂತೆ ನರ್ಸ್ ಮಂಜುಳಾ ಕಾಣೆಯಾಗಿದ್ದಾಳೆ.
ಆರೋಪಿ ಮಂಜುಳಾ ಗರ್ಭಿಣಿಗೆ ಗರ್ಭಪಾತವಾಗುವ ಮಾತ್ರೆ ನೀಡಿ ಹೊಟ್ಟೆಯಲ್ಲಿರುವ ಮಗುವನ್ನು ಹೊರತೆಗೆದಿದ್ದಳು, ಗರ್ಭಪಾತದ ನಂತರ ರಕ್ತಸ್ರಾವವನ್ನು ಹೆಚ್ಚಾಗಿತ್ತು ಎಂದು ತಿಳಿದುಬಂದಿದೆ.    ರಕ್ತಸ್ರಾವ ಉಲ್ಬಣವಾದಾಗ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಗರ್ಭಿಣಿ ರಾಧಾಮಣಿಯ್ನ ಉಳಿಸಿಕೊಳ್ಳಲಾಗಲಿಲ್ಲ. ಈಗಾಗಲೇ ರಾಧಾಮಣಿಗೆ ಮೂವರು ಹೆಣ್ಣುಮಕ್ಕಳಿದ್ದು, ಆಕೆಯ ಸಾವಿನಿಂದ ಮಕ್ಕಳು ಅನಾಥರಾಗಿದ್ದಾರೆ. ಕೊರಟಗೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ಆರೋಪಿ ಮಂಜುಳಾಗಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

Comments are closed.

Social Media Auto Publish Powered By : XYZScripts.com