By election :ವಿವಾದಾತ್ಮಕ ಹೇಳಿಕೆ ವಿಚಾರ : ಕೊನೆಗು ತಪ್ಪೊಪ್ಪಿಕೊಂಡ : ಪ್ರತಾಪ ಸಿಂಹ…

ಮೈಸೂರು: ಗುಂಡ್ಲುಪೇಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ಹಿನ್ನೆಲೆ,  ಭಾನುವಾರ ತನ್ನ ಹೇಳಿಕೆಯನ್ನ ಹಿಂಪಡೆದ ಸಂಸದ ಪ್ರತಾಪ್‌ಸಿಂಹ ವಿಷಾದ ವ್ಯಕ್ತಪಡಿಸಿದ್ದಾರೆ.  ಮತ್ತು ಗೀತಾ ಮಹದೇವಪ್ರಸಾದ್ ಬಗ್ಗೆ ನಾನು ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ, ಆದರೂ ತನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ, ಕ್ಷಮೆ ಕೇಳುತ್ತೇನೆ ಎಂದು ಪ್ರತಾಪ್‌ಸಿಂಹ ಹೇಳಿದ್ದಾರೆ. ಗೀತಾ ಅವರಿಗೆ ಪತಿ ಸಾವಿನ ನೋವಿನ ಜತೆಯಲ್ಲಿ ಅಧಿಕಾರದ ಆಸೆಯೂ ಇತ್ತು ಎಂದು ಹೇಳಿದ್ದು ನಿಜ ಎಂದು ಒಪ್ಪಿಕೊಂಡ ಪ್ರತಾಪ ಸಿಂಹ, ತನ್ನ ಹೇಳಿಕೆಯಿಂದ ಅವರಿಗೆ ನೋವಾಗಿದ್ದರೆ, ಕ್ಷಮೆ ಕೇಳುತ್ತೇನೆ ಎಂದಿದ್ದಾರೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿ ತನ್ನ ಹೇಳಿಕೆಯನ್ನ ಹಿಂಪಡೆಯುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಗುಂಡ್ಲು ಪೇಟೆ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಅವರ ಬಗ್ಗೆ, ಪ್ರತಾಪ ಸಿಂಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಸಾಮಾನ್ಯವಾಗಿ ಯಾರಾದರೂ ಜನಪ್ರತಿನಿಧಿ ನಿಧನರಾದರೆ ಪಕ್ಷಗಳೇ ಕುಟುಂಬಸ್ಥರನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡುತ್ತವೆ. ಆದರೆ ಮಹದೇವಪ್ರಸಾದ್ ನಿಧನವಾದ ಮೂರೇ ಮೂರು ದಿನಕ್ಕೆ ತಾನೇ ಅಭ್ಯರ್ಥಿ ಎಂದು ಸ್ವತಃ ಗೀತಾ ಅವರೇ ಹೇಳಿದ್ದಾರೆ ಎಂದಿದ್ದರು

One thought on “By election :ವಿವಾದಾತ್ಮಕ ಹೇಳಿಕೆ ವಿಚಾರ : ಕೊನೆಗು ತಪ್ಪೊಪ್ಪಿಕೊಂಡ : ಪ್ರತಾಪ ಸಿಂಹ…

 • October 21, 2017 at 4:13 AM
  Permalink

  Heya just wanted to give you a quick heads up and let you know a few
  of the pictures aren’t loading correctly. I’m not sure why
  but I think its a linking issue. I’ve tried it in two different browsers and both show the
  same results.

Comments are closed.

Social Media Auto Publish Powered By : XYZScripts.com