ಇಲ್ಲಿದೆ ವೀಕೆಂಡ್ ವಿತ್ ರಮೇಶ್ – 3ನೇ ಸೀಜನ್‌ನ ಗೆಸ್ಟ್ ಲಿಸ್ಟ್…!

ವಿಕೇಂಡ್ ವಿತ್ ರಮೇಶ್… ಕಾರ್ಯಕ್ರಮದ ಮೂರನೇ ಆವೃತ್ತಿ ಶನಿವಾರದಿಂದ ಆರಂಭವಾಗಲಿದೆ. ಈ ಸೀಜನ್‌ನಲ್ಲಿ ಯಾರು ಯಾರು ಮಹನಿಯರು ಸಾಧಕರ ಸೀಟ್ ಮೇಲೆ ಕುಳಿತುಕೊಳ್ಳುತ್ತಾರೆ ಎಂಬ ಪ್ರಶ್ನೆಗೂ ತಕ್ಕ ಮಟ್ಟಿಗೆ ಉತ್ತರ ಸಿಕ್ಕಿದೆ. ಆದರೆ ಯಾವ ಯಾವ ಯಾರೂ ಯಾರೂ ಎಂಬ ಪ್ರಶ್ನೆ ಪ್ರಶ್ನೆಯಾಗೇ ಉಳಿದಿದೆ. ಇದಕ್ಕೇ ಆಯೋಜಕರು ಕಾಯ್ದು ನೋಡಿ ಎಂದು ಉತ್ತರಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಕ್ಷಕರು ಸಮಾನ್ಯ ಜನರ ಸಾಧನೆಯನ್ನು ತೋರಿಸುವಂತೆ ಕೇಳಿಕೊಂಡಿತ್ತು. ಇದಕ್ಕೆ ಈ ಬಾರಿ ಮಣಿದ ತಂಡ ಸಾಮಾನ್ಯರಲ್ಲಿ ಅದ್ಭುತ ಸಾಧನೆಯನ್ನು ಮಾಡಿರುವ ಮಹನಿಯರನ್ನು ಕರೆದು ಕೆಂಪು ಸೀಟಿನಲ್ಲಿ ಕೂರಿಸಿದೆ.
ಈ ವಾರ ನಿಮ್ಮ ಮನೆಯ ಗೋಡೆಯ ಮೇಲೆ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಅವರ ಜೀವನವನ್ನು ನಿರೂಪಕ ರಮೇಶ್ ಅರವಿಂದ್ ಎಳೆ ಎಳೆಯಾಗಿ ನಿಮ್ಮ ಮುಂದೆ ಇಡಲಿದ್ದಾರೆ. ಇದೇ ಮೊದಲ ಬಾರಿಗೆ ಬಾಲಿವುಡ್ ನಟ ಸ್ಟಿವನ್ ಸ್ಟೀಲ್‌ಬರ್ಗ್ ಭಾರತೀಯ ನಟನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಇದು ಭಾರತದ ದೃಶ್ಯ ಮಾಧ್ಯದ ಇತಿಹಾಸದಲ್ಲೇ ದೊಡ್ಡ ಮೈಲುಗಲ್ಲು ಎಂದರೆ ತಪ್ಪಾಗಲಾರದು.
ಮುಂದಿನ ಭಾಗದಲ್ಲಿ ಜಗ್ಗೇಶ್, ಅರ್ಜುನ್ ಜನ್ಯಾ, ಜಯಂತ್ ಕಾಯ್ಕಿಣಿ, ಧರ್ಮಸ್ಥಳದ ವಿರೇಂದ್ರ ಹೆಗ್ಡೆ, ಮೈಸೂರಿನ ಎಸ್.ಪಿ ರವಿ, ಗಂಗವಾತಿ ಪ್ರಾಣೇಶ್ ಮೊದಲ ಹಂತದಲ್ಲಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇನ್ನು ಎಲ್ಲಾ ಅಂದುಕೊಂಡಂತೆ ನಡೆದರೆ ಅನಿಲ್ ಕುಂಬ್ಳೆ ಹಾಗೂ ಜಾವಗಲ್ ಶ್ರೀನಾಥ್, ದಿವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಅವರ ಜೊತೆಗೂ ಮಾತುಕತೆ ನಡೆದಿದೆ. ಕ್ರಿಕೆಟ್ ಆಟಗಾರ ಜೀವನ ಚರಿತ್ರೆ, ಅವರು ಈ ಹಂತಕ್ಕೆ ಬರಲು ಪಟ್ಟ ಕಷ್ಟ.. ಅವರ ಸಾಧನೆಯ ಹಿಂದಿನ ಮುಖಗಳ ಬಗ್ಗೆಯೂ ಜನರಿಗೆ ಪರಿಚಯವಾಗಲಿದೆ.

Comments are closed.