ಹೆಣ್ಮಕ್ಕಳಿಗೆ ತೊಂದರೆಯಾದ್ರೆ ಫೈರ್ ಮಾಡ್ತಾರೆ ಪ್ರಿಯಾಂಕಾ

ಎಂಎನ್‍ಸಿ ಸಂಸ್ಥೆಯಲ್ಲಿ ಮಹಿಳೆಯ ರಕ್ಷಣೆಗೆ ಹಾಗು ಅವರ ಸಮಸ್ಯೆಗಳನ್ನ ಆಲಿಸೋಕೆ ಅಂತ ಕಮಿಟಿ ಇರುತ್ತೆ. ಆದ್ರೆ ಚಿತ್ರರಂಗದಲ್ಲಿ ಇಂತಹದೊಂದು ವಿಂಗ್ ಇದ್ದಿದ್ದು ಕೇಳಿದ್ದೀರಾ..? ಹೌದು ಕನ್ನಡ ಚಿತ್ರರಂಗದಲ್ಲಿ ಇಂತಹದ್ದೊಂದು ಸಂಸ್ಥೆ ಸದ್ಯದಲ್ಲೇ ತಲೆ ಎತ್ತಲಿದೆ. ಇದೇ ಮೊದಲ ಬಾರಿಗೆ ಸಿನಿಮಾಗಳಲ್ಲಿ ಕೆಲಸ ಮಾಡೋ ಮಹಿಳೆಯ ರಕ್ಷಣೆಗೊಂದು ತಂಡ ಅಸ್ಥಿತ್ವಕ್ಕೆ ಬರಲಿದೆ.

ಅಷ್ಟಕ್ಕೂ ಸಿನಿಮಾದಲ್ಲಿ ಕೆಲಸ ಮಾಡೋ ಹೆಣ್ಮಕ್ಕಳಿಗಾಗಿ ಇಂತಹದ್ದೊಂದು ತಂಡ ಇದ್ರೆ ಉತ್ತಮ ಅಂತ ಅನಿಸಿದ್ದು ‘ಆ ದಿನಗಳು’ ಚಿತ್ರದ ನಾಯಕ ಚೇತನ್‍ಗೆ. ಈ ಇಂಡಸ್ಟ್ರಿಯಲ್ಲಿ  ನಾನಾ ವಿಭಾಗಗಳಲ್ಲಿ ಕೆಲಸ ಮಾಡೋ ಸಾಕಷ್ಟು ಮಹಿಳೆಯರಿದ್ದಾರೆ. ಇವ್ರ ಕುಂದು ಕೊರತೆಗಳನ್ನ ನೀಗಿಸಲು, ಎಂಎನ್‍ಸಿ ಕಂಪನಿಗಳಲ್ಲಿರುವಂತೆ ಒಂದು ಪ್ರತ್ಯೇಕ ಸಂಸ್ಥೆ ಬರಬೇಕು ಅಂತ ಅನಿಸಿತ್ತು. ಅದಕ್ಕಾಗೇ ಸ್ಯಾಂಡಲ್‍ವುಡ್‍ನಲ್ಲಿ ಫೈರ್ ಶುರುವಾಗಿದೆ. ಈ ಪರಿಕಲ್ಪನೆ ನಾಯಕ ನಟ ಚೇತನ್ ಅವರದ್ದು.

ಸುಮಾರು 3 ತಿಂಗಳಿನಿಂದ ಸಂಶೋಧನೆಯಲ್ಲಿ ನಿರತರಾಗಿದ್ದ ತಂಡದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಮಹತ್ವದ ಪಾತ್ರವಿದೆ. ಇವರೊಂದಿಗೆ ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾರಾಣಿ, ಕವಿತಾ ಲಂಕೇಶ್, ವೀಣಾ ಸುಂದರ್ ಹೀಗೆ ಕನ್ನಡ ಚಿತ್ರರಂಗದ ಮಹಿಳಾ ಮಣಿಯರು ಸೇರಿಕೊಂಡಿದ್ದಾರೆ. ಈ ಸಂಸ್ಥೆಗೆ ಈಗಾಗ್ಲೇ ಫೈರ್ ಅಂತ ಹೆಸರು ಕೂಡ ನಿಗಧಿಯಾಗಿದೆ. ಅಲ್ಲದೆ ಇದರೊಳಗೊಂದು ಇಂಟರ್‍ನಲ್ ಕಂಪ್ಲೇಂಟ್ ಕಮಿಟಿ ಕೂಡ ಇರುತ್ತೆ. 11 ಮಂದಿ ಸದಸ್ಯರು ಮಹಿಳೆಯ ಸಮಸ್ಯೆಗಳನ್ನ ತನಿಖೆ ಮಾಡುತ್ತಾರೆ. ಅದ್ರಲ್ಲೂ ಲೈಂಗಿಕ ದೌರ್ಜನ್ಯವಾದರೆ, ಇಲ್ಲಾ ಮತ್ಯಾವುದಾದರೂ ಸಮಸ್ಯೆ ಎದುರಾದರೆ ಈ ತಂಡ ಅವರ ನೆರವಿಗೆ ಬರುತ್ತೆ.

ಈ ಪ್ರಯತ್ನಕ್ಕೆ ಈಗಾಗ್ಲೇ ಕಲಾವಿದರ ಸಂಘ, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ಬಹುತೇಕ ಎಲ್ಲಾ ಸಂಘಗಳು ಅಸ್ತು ಅಂದಿವೆ. ಹೀಗಾಗಿ ಇನ್ನೊಂದು ತಿಂಗಳಲ್ಲಿ ಈ ಸಂಸ್ಥೆ ಅಸ್ಥಿತ್ವಕ್ಕೆ ಬರಲಿದೆ. ಯಾರಾದ್ರೂ ಚಿತ್ರರಂಗದಲ್ಲಿ ಹೆಣ್ಣುಮಕ್ಕಳ ಲೈಂಗಿಕ ಶೋಷಣೆಗೆ ಒಳಪಡಿಸಿದ್ರೆ ಈ ಸಂಘದಿಂದ ಫೈರ್ ಗ್ಯಾರಂಟಿ.

Comments are closed.

Social Media Auto Publish Powered By : XYZScripts.com