ಹೊಸ ದಾಖಲೆಯತ್ತ ಬಾಹುಬಲಿ 2: ಬಾಹುಬಲಿಗಾಗಿ ಕಾದಿವೆಯಾ 6500 ಚಿತ್ರಮಂದಿರಗಳು ?

ನವದೆಹಲಿ: ಎಸ್‌ ಎಸ್‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ಬಾಹುಬಲಿ-2 ಚಿತ್ರ ಹಿಂದಿನ ಎಲ್ಲ ದಾಖಲೆಗಳನ್ನ ಮೀರಿ ಅತಿಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳಲಿದೆ. ಬಲ್ಲ ಮೂಲಗಳ ಪ್ರಕಾರ, ಬಾಹುಬಲಿ 2 ಜಗತ್ತಿನಾದ್ಯಂತ 6500 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ ಯೂಟ್ಯೂಬ್‌ನಲ್ಲಿ 10ಕೋಟಿ ವೀಕ್ಷಣೆಗೆ ಅತೀ ಹತ್ತಿರದಲ್ಲಿದೆ.  ತೆಲುಗು, ಹಿಂದಿ, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್‌ ಈಗಾಗಲೇ ಜನಮೆಚ್ಚುಗೆ ಪಡೆದುಕೊಂಡಿದೆ.
2 ಬಿಲಿಯನ್‌ ಬಂಡವಾಳದಲ್ಲಿ ತಯಾರಾದ ಬಾಹುಬಲಿ 2 ಚಿತ್ರ ಜನರಲ್ಲಿ ಬಹಳ ನಿರಿಕ್ಷೆಯನ್ನ ಹುಟ್ಟುಹಾಕಿದ್ದು, ಬರುವ ಏಪ್ರಿಲ್‌ 28ಕ್ಕೆ ತೆರೆಕಾಣಲಿದೆ. 6500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಬಾಹುಬಲಿ ಈ ಹಿಂದಿನ ಎಲ್ಲ ದಾಖಲೆಯನ್ನೂ ಮುರಿಯಲಿದೆ. ಈ ಹಿಂದೆ ಸಲ್ಮಾನ್‌ ಖಾನ್‌ ಅಭಿನಯದ ‘ಸುಲ್ತಾನ್‌’ 4,350 ಚಿತ್ರಮಂದಿರಗಳಲ್ಲಿ  ಹಾಗೂ ಆಮಿರ್‌ ಖಾನ್‌ ಅಭಿನಯದ ‘ದಂಗಲ್‌’ ಸಿನಿಮಾ 4300 ಚಿತ್ರಮಂದಿಗಳಲ್ಲಿ ಬಿಡುಗಡೆಯಾಗಿ ದಾಖಲೆ ಬರೆದಿತ್ತು.

Comments are closed.

Social Media Auto Publish Powered By : XYZScripts.com