23 ದಿನಗಳ ಬಳಿಕ ಕಾಣಿಸಿಕೊಂಡ ಉತ್ತರ ಕೋರಿಯಾದ ದೊರೆ…. !

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಕುರಿತು ಇದ್ದ ಎದ್ದಿದ್ದ ಎಲ್ಲಾ ಊಹಾಪೋಹಗಳಿಗೆ ತೆರೆ ಬಿದ್ದಿದೆ. ಸತತ 23 ದಿನಗಳ ಬಳಿಕ ಜನರ ಕಣ್ಣೆದುರು ಬಂದು ನಿಂತಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವ ಕಿಮ್ ಜಾಂಗ್, ಇಂದು ಉತ್ತರ ಕೊರಿಯಾದ ಕೆಸಿಎನ್​ಎ ಫರ್ಟಿಲೈಸರ್ ಫ್ಯಾಕ್ಟರಿಯನ್ನು ಉದ್ಘಾಟನೆ ಮಾಡಿದ್ದಾರೆ. ಕಳೆದ 1 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಇದೀಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

ಏ. 11ರಂದು ವರ್ಕರ್ಸ್​ ಪಾರ್ಟಿ ಸಭೆಯೊಂದರಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಎಲ್ಲೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಕೊರಿಯಾದ ಬೃಹತ್ ಸಮಾರಂಭವೊಂದರಲ್ಲಿ ಕಿಮ್ ಜಾಂಗ್ ಅತಿಥಿಯಾಗಿ ಆಗಮಿಸಿ, ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಅವರ ಯಾವುದೇ ಫೋಟೋ ಅಥವಾ ವಿಡಿಯೋ ಬಿಡುಗಡೆಯಾಗಿಲ್ಲ ಎಂದು ಸಿಯೋಲ್ ಮೂಲದ ಯೋನ್ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳು, ಅವರ ಸಹೋದರಿ ಯೋ ಕೂಡ ಪಾಲ್ಗೊಂಡಿದ್ದರು ಎಂದು ಹೇಳಲಾಗಿದ್ದು, ಫೋಟೊವನ್ನು ರಿಲೀಸ್ ಮಾಡಲು ಒಪ್ಪಲಿಲ್ಲ. ಉತ್ತರ ಕೊರಿಯಾ ರಾಷ್ಟ್ರ ನಿರ್ಮಾತೃ ಹಾಗೂ ಕಿಮ್ ಜಾಂಗ್ ಉನ್ ಅವರ ತಾತ ದಿವಂಗತ ಕಿಮ್ ಇಲ್ ಸುಂಗ್ ಅವರ 108ನೇ ಜನ್ಮದಿನದ ಸ್ಮರಣೆ ಕಾರ್ಯಕ್ರಮಕ್ಕೂ ಗೈರು ಹಾಜರಾದ ಹಿನ್ನೆಲೆಯಲ್ಲಿ ಕಿಮ್ ಆವರ ಆರೋಗ್ಯದ ಬಗ್ಗೆ ಊಹಾಪೋಹಗಳು ಎದ್ದಿವೆ.

2011ರಲ್ಲಿ ಕಿಂಗ್ ಜಾನ್ ಉನ್ ಅಧಿಕಾರಕ್ಕೆ ಬಂದಾಗಿನಿಂದಲೂ ಏಪ್ರಿಲ್ 15 ರಂದು ನಡೆಯುವ ವಾರ್ಷಿಕೋತ್ಸವ ಸಮಾರಂಭಕ್ಕೆ ಗೈರು ಹಾಜರು ಆಗಿರಲಿಲ್ಲ. ಶಸ್ತ್ರ ಚಿಕಿತ್ಸೆಯ ನಂತರ ಕಿಮ್ ಜಾಂಗ್ ಉನ್ ತೀವ್ರ ಅಪಾಯದ ಸ್ಥಿತಿಯಲ್ಲಿದ್ದಾರೆ ಎಂಬುದು ಗುಪ್ತಚರ ಮಾಹಿತಿಯಿಂದ ತಿಳಿದುಬಂದ ವಿಚಾರವಾಗಿತ್ತು.ಸಿಎನ್ ಎನ್ ಕಳೆದ ವಾರ ವರದಿ ಭಿತ್ತರಿಸಿದ ಬಳಿಕ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡವು. ಕಿಮ್ ಜಾಂಗ್ ಉನ್ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿರುವುದು ಅಪರೂಪವಲ್ಲ, 2014 ಸೆಪ್ಟೆಂಬರ್ ನಲ್ಲಿ ಕೂಡಾ 40 ದಿನಗಳ ಕಾಲ ಸಾರ್ವಜನಿಕ ಜೀವನದಿಂದ ಕಣ್ಮರೆಯಾಗಿ ಮತ್ತೆ ಕಾಣಿಸಿಕೊಂಡಿದ್ದರು. ಕಿಮ್ ಜಾನ್ ಉನ್ ಅವರ ಕಾಲಿನಿಂದ ಉಣ್ಣನ್ನು ತೆಗೆಯಲಾಯಿತು ಎಂದು ಎಷ್ಟೋ ದಿನದ ನಂತರ ಸಿಯೋಲ್ ಗುಪ್ತಚರ ಸಂಸ್ಥೆಗಳು ಹೇಳಿಕೆ ನೀಡಿದ್ದವು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights