Ind vs Aus test – ಗುಡ್ಡ ಬೆಟ್ಟಗಳು ಧರ್ಮಶಾಲಾದಲ್ಲಿ ಟೆಸ್ಟ್ ಕ್ರಿಕೆಟ್ ರಂಗು…

ಹಿಮಾಚಾಲ ಪ್ರದೇಶ.. ಅತಿ ಸುಂದರ ರಾಜ್ಯ.. ಹಸಿರು.. ಗುಡ್ಡು ಬೆಟ್ಟಗಳು.. ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಇದೀಗ ಹಿಮಾಚಾಲದಲ್ಲಿ ಕ್ರಿಕೆಟ್ ರಂಗು ಆರಂಭವಾಗಲಿದೆ. ದೇಶದ 27 ನೇ ಟೆಸ್ಟ್ ಅಂಗಳ ಎಂಬ ಖ್ಯಾತಿ ಪಡೆದ ಧರ್ಮಶಾಲಾದಲ್ಲಿ  ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕನೇ ಟೆಸ್ಟ್ ನಡೆಯಲಿದ್ದು, ಕುತೂಹಲ ಮೂಡಿಸಿದೆ.
ಶನಿವಾರದಿಂದ ಈ ಅಂಗಳದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿಯ ನಿರ್ಣಾಯಕ ನಾಲ್ಕನೇ ಟೆಸ್ಟ್ ಪಂದ್ಯ ನಡೆಯಲಿದ್ದು, ಕುತೂಹಲ ಮೂಡಿಸಿದೆ. ಪುಣೆ ಪಂದ್ಯದಲ್ಲಿ ಆಸೀಸ್ ೩೩೩ ರನ್‌ಗಳಿಂದ ಗೆದ್ದರೆ, ಬೆಂಗಳೂರು ಟೆಸ್ಟ್ ಪಂದ್ಯವನ್ನು ಭಾರತ ೭೫ ರನ್‌ಗಳಿಂದ ಗೆದ್ದು ಕೊಂಡಿತ್ತು. ಇನ್ನು ಮೂರನೇ ಪಂದ್ಯ ಡ್ರಾದಲ್ಲಿ ಅಂತ್ಯವಾಗಿದ್ದರಿಂದ ಸರಣಿ ಸಮಬಲದಲ್ಲಿ ಸಾಗುತ್ತಿದೆ.

ಧರ್ಮಶಾಲಾ ಅಂಗಳದ ವಿಹಂಗಮ ನೋಟ.

ಟೀಮ್ ಇಂಡಿಯಾ ೮೧ ಸ್ಥಳಗಳಲ್ಲಿ ಟೆಸ್ಟ್ ಪಂದ್ಯವನ್ನು ಆಡಿದೆ. ಧರ್ಮಾಶಾಲಾ ಇಂಡಿಯಾ ತಂಡ ಆಡುವ ೮೨ನೇ ಸೇರ್ಪಡೆ ಆಗಲಿದೆ. ಆಸ್ಟ್ರೇಲಿಯಾ ಪಾಲಿಗೆ ಇದು ೭೨ನೇ ಟೆಸ್ಟ್ ಆಡುವ ಅಂಗಳ ಎಂಬ ಹೆಮ್ಮೆ ತನ್ನದಾಗಿಸಿಕೊಳ್ಳಲಿದೆ. ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಿಗೆ ಆತಿಥ್ಯ ನೀಡಿದ ಕೀರ್ತಿ ಕೊಲ್ಕತ್ತದ ಈಡನ್ ಗಾರ್ಡನ್‌ಗೆ ಲಭಿಸುತ್ತದೆ. ಈ ಅಂಗಳದಲ್ಲಿ ೪೦ ಟೆಸ್ಟ್ ಆಡಲಿಗಿದೆ. ವಿಶ್ವ ಮಟ್ಟದಲ್ಲಿ ಲಾರ್ಡ್ಸ್ ಅಂಗಳ ಹೆಚ್ಚು ಪಂದ್ಯಕ್ಕೆ ಸಾಕ್ಷಿಯಾಗಿದೆ.
೨೦೧೬ರಲ್ಲಿ ಇಂದೋರ್, ರಾಜಕೋಟ್, ವಿಶಾಖಾಪಟ್ಟಣಂ, ಪುಣೆ, ರಾಂಚಿ ಮೈದಾನಗಳಿಗೆ ಈ ಅವಕಾಶ ಲಭಿಸಿತ್ತು. ಈಗ ಈ ಸರದಿ ಧರ‍್ಮಶಾಲಾದ್ದಾಗಿದೆ.

Comments are closed.

Social Media Auto Publish Powered By : XYZScripts.com