ಕಾಂಗ್ರೆಸ್‌ ಶಾಸಕಾಂಗ ಸಭೆ – ನಮ್ಮ ಕ್ಯಾಂಟೀನ್‌ ಈಗ ಇಂದಿರಾಗಾಂಧಿ ಕ್ಯಾಂಟೀನ್‌…?

ಬೆಂಗಳೂರು: ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ನಮ್ಮ ಕ್ಯಾಂಟೀನ್‌ಗೆ ‘ನಮ್ಮ ಇಂದಿರಾಗಾಂಧಿ ಕ್ಯಾಂಟೀನ್‌’ ಎಂಧು ಹೆಸರಿಡುವಂತೆ ಶಾಸಕಾಂಗ ಸಭೆಯಯಲ್ಲಿ ಕಾಂಗ್ರೆಸ್‌ ಶಾಸಕರು ಪ್ರಸ್ತಾಪಿಸಿದ್ದಾರೆ. ಬುಧವಾರ ನಡೆದ ಶಾಸಕಾಂಗ ಸಭೆಯಲ್ಲಿ, ಈ ವಿಷಯವನ್ನ ಪ್ರಸ್ತಾಪಿಸಿರುವ ಯಶವಂತಪುರ ಶಾಸಕ ಎಸ್‌.ಡಿ ಸೋಮಶೇಖರ್‌, ನಮ್ಮ ಕ್ಯಾಂಟೀನ್‌ಗೆ ಇಂದಿರಾಗಾಂಧಿಯವರ ಹೆಸರಿಡುವಂತೆ ಒತ್ತಾಯಿಸಿದ್ದಾರೆ.  ಮೂಲಗಳ ಪ್ರಕಾರ ಈ ಪ್ರಸ್ತಾಪಕ್ಕೆ ಮುಖ್ಯಮಂತ್ರಿಗಳೂ ಕೂಡ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ.
ಇನ್ನು, ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆಯೂ ಪ್ರಸ್ತಾಪ ಮಾಡಿರುವ ಕಾಂಗ್ರೆಸ್‌ ಶಾಸಕರು, ಬಿಜೆಪಿಯವರು ಈ ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ. ಅದಕ್ಕೆ ಅವಕಾಶ ಕೊಡಬಾರದು ಎಂದು ಕಾಂಗ್ರೆಸ್ ಶಾಸಕರು ಸಿ.ಎಂ ಸಿದ್ದರಾಮಯ್ಯನವರನ್ನು ಒತ್ತಾಯಿಸಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಕಾಂಗ್ರೆಸ್ ಸರ್ಕಾರ ನೀಡಿರುವ ಸೌಲಭ್ಯಗಳ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಸಲಹೆ ನೀಡಿದ್ದಾರೆ.

3 thoughts on “ಕಾಂಗ್ರೆಸ್‌ ಶಾಸಕಾಂಗ ಸಭೆ – ನಮ್ಮ ಕ್ಯಾಂಟೀನ್‌ ಈಗ ಇಂದಿರಾಗಾಂಧಿ ಕ್ಯಾಂಟೀನ್‌…?

Comments are closed.

Social Media Auto Publish Powered By : XYZScripts.com