ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂಧಾನ ಯಶಸ್ವಿ, ಪಟ್ಟು ಬಿಡದ ವರಲಕ್ಷ್ಮಿ,,,

ಬೆಂಗಳೂರು:  ಪ್ರತಿಭಟನಾ ನಿರತ ಅಂಗನವಾಡಿ ಸಂಘಟನೆಗಳೊಂದಿಗೆ ಸಿ.ಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. 6 ಸಂಘಟನೆಗಳ ಪೈಕಿ 4 ಸಂಘಟನೆಗಳ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗದ್ದು, ಸಂಧಾನಕ್ಕೆ ಒಪ್ಪಿಕೊಂಡಿದ್ದಾರೆ. ಆದರೆ, ವರಲಕ್ಷ್ಮಿ ನೇತೃತ್ವದ ಅಂಗನವಾಡಿ ಕಾರ್ಯಕರ್ತೆಯರ ಸಂಘಟನೆ ಸಭೆಗೆ  ಹಾಜಾರಾಗಿರಲಿಲ್ಲ. ಸಂಘಟನೆಗಳ ನಡುವೆ ಎಲ್ಲವೂ ಸರಿ ಇಲ್ಲದ ಕಾರಣ, ವರಲಕ್ಷ್ಮಿ ನೇತೃತ್ವದ ಅ.ಕಾರ್ಯಕರ್ತೆಯರ ತಂಡ ಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗಿಯಾಗಲಿಲ್ಲ ಎಂದು ತಿಳಿದುಬಂದಿದೆ.
ಏ.19 ರಂದು ಸಿ.ಎಂ‌ ಚರ್ಚೆ ನಡೆಸೋದಾಗಿ ಈಗಾಗಲೇ ಭರವಸೆ ನೀಡಿದ್ದಾರೆ. ಮತ್ತು ಕೆಲಸದ ಅವಧಿ ಬದಲಾವಣೆಗೆ ತಕ್ಷಣ ಒಪ್ಪಿಗೆ ಸೂಚಿಸಿದ್ದಾರೆ. ಕನಿಷ್ಠ ವೇತನ ನಿಗದಿಗೆ ಏ. 19 ರ ಮುಹೂರ್ತ ನಿಗದಿಯಾಗಿದೆ. ಹೀಗಾಗಿ ಸಿ.ಎಂ ಭರವಸೆಗೆ ಬೆಲೆಕೊಟ್ಟು ಅ.ಕಾರ್ಯಕರ್ತೆಯರ ನಾಲ್ಕು ಸಂಘಟನೆಗಳು ಮುಷ್ಕರವನ್ನ ವಾಪಾಸ್‌ ಪಡೆದಿವೆ.
ಆದರೆ, ಕನಿಷ್ಠ ವೇತನ ನಿಗದಿಯಾದಂತೂ ಮುಷ್ಕರ ನಿಲ್ಲಿಸಲಾರೆವು ಎಂದು ಪಟ್ಟು ಹಿಡಿದು ಕುಳಿತಿರುವ ವರಲಕ್ಷ್ಮಿ ನೇತೃತ್ವದ ಅ.ಕಾರ್ಯಕರ್ತೆಯ ತಂಡ ಇನ್ನೂ ರಸ್ತೆಯಲ್ಲಿಯೇ ಇದೆ. ನಮ್ಮ ಹೋರಾಟವನ್ನ ಯಾವುದೇ ಕಾರಣಕ್ಕೂ ಹಿಂಪಡೆಯೋದಿಲ್ಲ. ಕಳೆದ ಎರಡು ಬಾರಿ ಪ್ರತಿಭಟನೆ ನಡೆಸಿದಾಗ ಆಶ್ವಾಸನೆ ಕೊಟ್ಟು ಸರ್ಕಾರಗಳು ಕೈಕೊಟ್ಟಿವೆ. ನಾವು ನ್ಯಾಯಯುತವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟವನ್ನ ಮುಂದುವರೆಸುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘಟನಾಧ್ಯಕ್ಷೆ ವರಲಕ್ಷ್ಮಿ ಹೇಳಿದ್ದಾರೆ.  ತಮ್ಮ ಹೋರಾಟದ ಕುರಿತು ಮಾತನಾಡಿದ ವರಲಕ್ಷ್ಮಿ, 1.50 ಲಕ್ಷ ಕೋಟಿಗೂ ಹೆಚ್ಚಿರುವ ರಾಜ್ಯ ಬಜೆಟ್ ನಲ್ಲಿ ಅಂಗವಾಡಿ ಕಾರ್ಯಕರ್ತರಿಗಾಗಿ 612 ಕೋಟಿ ಅಲೋಕೇಟ್ ಮಾಡೋಡು ರಾಜ್ಯ ಸರ್ಕಾರಕ್ಕೆ ಕಷ್ಟವಾಗಿದೆ. ನಾವುಕೂಡ ರಾಜ್ಯದ ಮತದಾರರು ನಮಗೂ ಕೂಡ ಕೇಳೋದಕ್ಕೆ ಹಕ್ಕಿದೆ ಎಂದರು.

ಈ ಹಿಂದೆ ಕೇಂದ್ರ ಸರ್ಕಾರಕ್ಕೂ ಮನವಿ ಸಲ್ಲಿಸಿದ್ದೆವು, ಆದರೆ ಯಾವುದೇ ಪ್ರಯೋಜನವಾಗಿಲ್ಲ. ವಿಧಾನ ಸೌದಕ್ಕೆ ಮುತ್ತಿಗೆ ಹಾಕಲು ಹೆಚ್ಚು ಸಮಯ ಬೇಕಿಲ್ಲ ಕೇವಲ 45 ನಿಮಿಷ ಸಾಕು. ನಮಗೆ ಯಾರಾದ್ರೂ 600 ಕೋಟಿ ಕೊಡ್ತೀವಿ  ಭರವಸೆ ಕೊಟ್ರೆ ಪ್ರತಿಭಟನೆ ಕೈಬಿಡುತ್ತೀವಿ ಎಂದು ವರಲಕ್ಷ್ಮಿ ಪಟ್ಟು ಬಿಗಿಗೊಳಿಸಿದ್ದಾರೆ. ಮುಂದಿನ ಯುಗಾದಿ ಹಬ್ಬವನ್ನೂ ಲೆಕ್ಕಿಸದೆ ನಮ್ಮ ಹೋರಾಟವನ್ನ ಮುಂದುವರೆಸುತ್ತೇವೆ. ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಳ್ಳುವವರೆಗೂ ಹೋರಾಟ ಕೈಬಿಡೋದಿಲ್ಲ ಎಂದಿರುವ ವರಲಕ್ಷ್ಮಿ, ತಮ್ಮ ತಂಡದೊಂದಿಗೆ ಇನ್ನೂ ರಸ್ತೆಯಲ್ಲಿಯೇ ಇದ್ದಾರೆ.

One thought on “ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಸಂಧಾನ ಯಶಸ್ವಿ, ಪಟ್ಟು ಬಿಡದ ವರಲಕ್ಷ್ಮಿ,,,

Comments are closed.