By election -ನಂಜನಗೂಡು: ಕೊನೆಯ ದಿನ 8 ಮಂದಿ ಪಕ್ಷೇತರರಿಂದ ನಾಮಪತ್ರ ಸಲ್ಲಿಕೆ…

ಮೈಸೂರು:ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರ ಸಲ್ಲಿಕೆಗೆ ನೀಡಲಾದ ಕಡೆಯ ದಿನವಾದ ಮಂಗಳವಾರ 8 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಈ 8 ಮಂದಿ ಅಭ್ಯರ್ಥಿಗಳೂ ಪಕ್ಷೇತರ ಅಭ್ಯರ್ಥಿಗಳಾಗಿದ್ದು, ಈ ಕ್ಷೇತ್ರದಲ್ಲಿ ಒಟ್ಟೂ ೧೪ ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮಾರ್ಚ್‌22 ಬುಧವಾರ ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆಯಲಿದೆ.   ವಿಶೇಷವೇನು ಅಂದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳನ್ನ ಬಿಟ್ಟು ಉಳಿದೆಲ್ಲರೂ ಪಕ್ಷೇತರ ಅಭ್ಯರ್ಥಿಗಳೇ ಆಗಿದ್ದಾರೆ.  ಮಾರ್ಚ್‌ 24 ನಾಮಪತ್ರ ಹಿಂತೆಗೆದುಕೊಳ್ಳುವುದಕ್ಕೆ ಕಡೆಯ ದಿನವಾಗಿದ್ದು, ಯಾರ‍್ಯಾರು ನಾಮಪತ್ರ ಹಿಂತೆಗೆದುಕೊಳ್ಳಲಿದ್ದಾರೆ ಎಂಬುದು ನಂಜನಗೂಡು ಕ್ಷೇತ್ರದ ಜನರ ಕುತೂಹಲ.
ಮತದಾನದ ದಿನ ಹತ್ತಿರವಾಗುತ್ತಿದಂತೆ ಅಭ್ಯರ್ಥಿಗಳ ಪರ ಪ್ರಚಾರ ಚುರುಕುಗೊಂಡಿದೆ. ಬಿಜೆಪಿ  ಪರ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶೋಭಾ , ಸೋಮಣ್ಣ ಬಿರುಸಿನ ಪ್ರಚಾರ ನಡಿಸಿದರೆ, ಕಾಂಗ್ರೆಸ್‌  ಪರ ಅರ್ಧ ಡಜನ್ ಸಚಿವರು ಪ್ರಚಾಎ ನಡೆಸಿದರು…

Comments are closed.