‘ಬಾಹುಬಲಿ’ ಟ್ರೇಲರ್ ದಾಖಲೆ ಹಿಂದಿದ್ದಾರಾ ಮುಕೇಶ್ ಅಂಬಾನಿ..?

ಬಾಹುಬಲಿ ದಿ ಕನ್‍ಕ್ಲೂಷನ್ ಸಿನಿಮಾ ಟ್ರೇಲರ್ ಸಾಮಾಜಿಕ ಜಾಲತಾಣದಲ್ಲಿ ಸುನಾಮಿ ಸೃಷಿಸಿರೋದು ಗೊತ್ತಿರೋ ಸಂಗತಿ. ಎಸ್.ಎಸ್ ರಾಜಮೌಳಿಯ ಕನಸ್ಸಿನ ಪ್ರಾಜೆಕ್ಟ್ ಆಗಿರೋ ಬಾಹುಬಲಿ ಪಾರ್ಟ್ ಏಪ್ರಿಲ್ 28ಕ್ಕೆ ತೆರೆಗಪ್ಪಳಿಸಲಿದೆ. ಇತ್ತೀಚೆಗೆ ರಿಲೀಸ್ ಆಗಿರೋ ಚಿತ್ರದ ಟ್ರೇಲರ್‍ಗೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದೂ, ಯೂಟ್ಯೂಬ್‍ನಲ್ಲಿ ಎಲ್ಲಾ ಸಿನಿಮಾ ಟ್ರೇಲರ್‍ಗಳ ದಾಖಲೆಯನ್ನ ನಾಲ್ಕೇ ದಿನದಲ್ಲಿ ಈ ಟ್ರೇಲರ್ ಅಳಿಸಿ ಹಾಕಿದೆ. ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿರೋದೇನೋ ನಿಜ. ಅದೇ ಕಾರಣಕ್ಕೆ ನೆಟ್ಟಿಗರು ಪದೇ ಪದೇ ಟ್ರೇಲರ್ ಅನ್ನ ವೀಕ್ಷಿಸಿದ್ದಾರೆ. ವೀಕ್ಷಿಸುತ್ತಲೇ ಇದ್ದಾರೆ. ಆದ್ರೆ ಹೀಗೆ ಪದೇ ಪದೇ ವೀಕ್ಷಿಸೋದ್ರ ಹಿಂದೆ ಮುಕೇಶ್ ಅಂಬಾನಿಯ ಜಿಯೋ ಸಿಮ್ ಕೆಲಸ ಅಂತ ಹೇಳಲಾಗ್ತಿದೆ.

ಕೇವಲ ಎರಡೇ ದಿನದಲ್ಲಿ ಬಾಹುಬಲಿ ದಿ ಕನ್‍ಕ್ಲೂಷನ್ ಅಫೀಷಿಯಲ್ ಟ್ರೇಲರ್ ಅನ್ನ 6.5ಕೋಟಿ ಮಂದಿ ವೀಕ್ಷಿಸಿದ್ದಾರೆ. ಈ ಟ್ರೇಲರ್ ಯೂಟ್ಯೂಬ್‍ನಲ್ಲಿ ಹಾಲಿವುಡ್ ಟ್ರೇಲರ್‍ಗಳಿಗೆ ಪೈಪೋಟಿ ಕೊಡ್ತಿದೆ. ವಿಷ್ಯುವಲಿ ಟ್ರೇಲರ್ ಸೂಪರ್ರಾಗಿದೆ. ಕಥೆಯ ಸುಳಿವು ಕೊಡದೇ ರಾಜಮೌಳಿ ತುಂಬಾ ಜಾಗ್ರತೆ ವಹಿಸಿ ಟ್ರೇಲರ್ ವಿಡಿಯೋ ಕಟ್ ಮಾಡಿದ್ದಾರೆ. ಪ್ರಭಾಸ್, ಅನುಷ್ಕಾ ಶೆಟ್ಟಿ, ರಾಣಾ, ರಮ್ಯಾಕೃಷ್ಣ, ಸತ್ಯರಾಜ್ ಪರ್ಫಾರ್ಮನ್ಸ್ ಕೂಡ ಎಕ್ಸಲೆಂಟ್ ಅನ್ಬೋದು. ವಿಎಫ್‍ಎಕ್ಸ್ ವರ್ಕ್ ಕೂಡ ಬೊಂಬಾಟಾಗಿದೆ. ಆದ್ದರಿಂದಲೇ ಬಾಹುಬಲಿ ಅಭಿಮಾನಿಗಳು ಟ್ರೇಲರ್ ವೀಕ್ಷಣೆಗೆ ಮುಗಿ ಬಿದ್ದಿದ್ದಾರೆ. ಅದೆಲ್ಲಾ ಏನೇ ಇದ್ರೂ, ಈ ಸಕ್ಸಸ್‍ನಲ್ಲಿ ಜಿಯೋ ಮೊಬೈಲ್ ಸಿಮ್ ನೆಟ್ ವರ್ಕ್ ಪಾಲೂ ಇದೆ ಅಂತ ಕೆಲವರು ಮಾತನಾಡುತ್ತಿದ್ದಾರೆ. ಮೊಬೈಲ್ ಹೊಂದಿರುವ ಬಹುತೇಕ ಮಂದಿ ಮುಖೇಶ್ ಅಂಬಾನಿ ಕೊಡ್ತಿರೋ ಫ್ರೀ ಡೆಟಾ ಆಫರ್‍ನಿಂದಲೇ ಬಾಹುಬಲಿ-2 ಟ್ರೇಲರ್ ಅನ್ನ ವೀಕ್ಷಿಸಿದ್ದಾರೆ ಅನ್ನಲಾಗ್ತಿದೆ.

ಕಳೆದ ಮೂರ್ನಾಲ್ಕು ತಿಂಗಳಿನಿಂದ ಜಿಯೋ ಉಚಿತ ಸಿಮ್ ಕಾರ್ಡ್ ಕೊಟ್ಟು ಫ್ರೀ ಡೇಟಾ ಫ್ಯಾಕ್ ಕೊಟ್ಟಿದೆ. ಹಾಗಾಗಿನೇ ಮೊಬೈಲ್ ಹ್ರಹಕರು ಹೆಚ್ಚು ಹೆಚ್ಚು ಅಂತರ್ಜಾಲದಲ್ಲಿ ಸಕ್ರಿಯರಾಗಿದ್ದಾರೆ. ಅದೇ ಕಾರಣಕ್ಕೆ ಸಿನಿಮಾ ಟ್ರೇಲರ್‍ಗಳು, ಸಾಂಗ್ಸ್‍ಗಳು ದಾಖಲೆ ವೀವ್ಸ್ ಪಡೆದುಕೊಳ್ತಿವೆ. ಇದಕ್ಕೆ ಕನ್ನಡ ಸಿನಿಮಾ ವಿಡಿಯೋಗಳು ಹೊರತಲ್ಲ. ಇನ್ನೂ ಮಾರ್ಚ್ 31ಕ್ಕೆ ಜಿಯೋ ಫ್ರೀ ಸೇವೆಗಳು ಅಂತ್ಯಗೊಳ್ಳಲಿದ್ದು, ಆ ನಂತ್ರ ಜಿಯೋ ಸಿಮ್ ಬಳಸುವವರು ರೀಚಾರ್ಜ್ ಮಾಡಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಇದೇ ಕಾರಣಕ್ಕೆ ಕೆಲವರು ಮಾರ್ಚ್ 31ರೊಳಗೆ ಟ್ರೇಲರ್, ಸಾಂಗ್ಸ್ ರಿಲೀಸ್ ಮಾಡಿ ಭರ್ಜರಿ ವೀವ್ಸ್ ಪಡೆದುಕೊಂಡು ಚಿತ್ರಕ್ಕೆ ಪ್ರಚಾರ ಗಿಟ್ಟಿಸಿಕೊಳ್ಳೊ ಆಲೋಚನೆಯಲ್ಲಿದ್ದಾರೆ.

5 thoughts on “‘ಬಾಹುಬಲಿ’ ಟ್ರೇಲರ್ ದಾಖಲೆ ಹಿಂದಿದ್ದಾರಾ ಮುಕೇಶ್ ಅಂಬಾನಿ..?

 • October 20, 2017 at 6:50 PM
  Permalink

  wonderful submit, very informative. I’m wondering why the opposite
  specialists of this sector do not realize this. You should continue your writing.
  I’m confident, you have a huge readers’ base already!

 • October 20, 2017 at 6:54 PM
  Permalink

  Asking questions are actually pleasant thing if you are not understanding something fully, but this piece of writing gives nice understanding yet.|

 • October 21, 2017 at 1:30 AM
  Permalink

  Hi i am kavin, its my first occasion to commenting anywhere, when i read this post
  i thought i could also create comment due to this brilliant article.

 • October 21, 2017 at 2:59 AM
  Permalink

  It’s actually very complicated in this active life to listen news on Television, thus I simply use internet for that purpose, and obtain the most recent news.|

 • October 24, 2017 at 1:22 PM
  Permalink

  I read this piece of writing fully on the topic of
  the difference of most up-to-date and preceding technologies, it’s
  remarkable article.

Comments are closed.

Social Media Auto Publish Powered By : XYZScripts.com