ರಿಯಾಲಿಟಿ ಶೋನಲ್ಲಿ ಅತ್ಯಾಚಾರ ಮತ್ತು ಕೊಲೆಗೆ ಅವಕಾಶವಿದೆ !

 

ರಿಯಾಲಿಟಿ ಶೋಗಳು ಅಂದ್ರೆ ಅಲ್ಲೆಲ್ಲೋ ರಿಯಲ್ ಆಗಿ ನಡೆಯುತ್ತಿರುವುದನ್ನು ನಾವಿಲ್ಲಿ ಟಿವಿ ಪರದೆಯ ಮೇಲೆ ನೋಡೋದು ಅಂತ. ಈಗಂತೂ ಎಲ್ಲೆಲ್ಲೂ ರಿಯಾಲಿಟಿ ಶೋಗಳದ್ದೇ ಹಾವಳಿ ಬಿಡಿ.

ಅಡುಗೆ ಮಾಡೋದು, ಸುಮ್ನೆ ಮನೆಯಲ್ಲಿರೋದು, ಆಟ ಆಡೋದು, ಡ್ಯಾನ್ಸ್ ಮಾಡೋದು…ಹೀಗೆ ಥರಾವರಿ ಬಗೆಯ ರಿಯಾಲಿಟಿ ಶೋಗಳು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಜನರನ್ನು ಸೆಳೆಯುತ್ತಿವೆ. ಆದ್ರೆ ಈ ಎಲ್ಲಾ ರಿಯಾಲಿಟಿ ಶೋಗಳ ಅಪ್ಪನಂಥದ್ದೊಂದು ರಷ್ಯಾದಲ್ಲ ಶುರುವಾಗುತ್ತಿದೆ.

ಇದರ ಹೆಸರು ‘ಗೇಮ್ 2: ವಿಂಟರ್’ ಈ ಹೊಸ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳು ಬದುಕುವುದಕ್ಕಾಗಿ ಏನು ಬೇಕಾದ್ರೂ ಮಾಡಬಹುದಂತೆ. ರೇಪ್ ಮತ್ತು ಮರ್ಡರ್ ಕೂಡಾ ಮಾಡಬಹುದು ಎಂದಿದೆ ಶೋನ ನಿರ್ಮಾಣ ಸಂಸ್ಥೆ. ಅಷ್ಟೇ ಅಲ್ಲ, ಸ್ಪರ್ಧಿಗಳು ತಮ್ಮತಮ್ಮಲ್ಲೇ ಯಾರ ಜೊತೆ ಬೇಕಾದ್ರೂ ಸಂಬಂಧ ಬೆಳೆಸಿಕೊಳ್ಳಬಹುದು ಮತ್ತು ಲೈಂಗಿಕ ಸಂಪರ್ಕ ಹೊಂದಬಹುದು ಎಂದೂ ಹೇಳಲಾಗಿದೆ.

ಶೋ ಸಂದರ್ಭದಲ್ಲಿ ನಡೆಯುವ ಯಾವುದೇ ಅಹಿತಕರ ಘಟನೆಗೆ ತಾನು ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ ಎಂದು ವಾಹಿನಿ ಮತ್ತು ನಿರ್ಮಾಣ ಸಂಸ್ಥೆ ಹೇಳಿವೆ. ಎಲ್ಲೆಡೆ ವ್ಯಾಪಕ ಚರ್ಚೆಯಾಗ್ತಿರೋ ಈ ರಿಯಾಲಿಟಿ ಶೋನಲ್ಲಿ ಭಾಗವಹಿಸೋಕೆ ಈಗಾಗ್ಲೇ ವಿಶ್ವದ ಮೂಲೆಮೂಲೆಗಳಿಂದ 30 ಸ್ಪರ್ಧಿಗಳು ಮುಂದೆ ಬಂದಿದ್ದಾರೆ. ಇವರಲ್ಲಿ ಒಬ್ಬ ಮಾಜಿ ಯೋಧ, ಒಬ್ಬ ವಿದ್ಯಾರ್ಥಿ ಸೇರಿದಂತೆ ಇಷ್ಟು ಜನ ಆಸಕ್ತಿ ತೋರಿಸಿ ಎಲ್ಲಾ ಶರತ್ತುಗಳಿಗೂ ಒಪ್ಪಿಗೆಯ ಸಹಿ ಹಾಕಿರೋದು ಅನೇಕರ ಹುಬ್ಬೇರಿಸಿದೆ.

ಅಂದ್ಹಾಗೆ  ರಿಯಾಲಿಟಿ ಶೋ ಸೈಬೀರಿಯಾದ ಓಬಿ ನದಿಯಲ್ಲಿರುವ ಚಿಕ್ಕ ದ್ವೀಪವೊಂದರಲ್ಲಿ ನಡೆಯಲಿದೆ. ಇಂಟರ್ ನೆಟ್ ಮೂಲಕ ವಿಶ್ವದ ಮೂಲೆಮೂಲೆಗೆ ಇದನ್ನು ಬಿತ್ತರಿಸಲಾಗುತ್ತದೆ. ಈ ವರ್ಷ ಜುಲೈಗೆ ಶುರುವಾಗಲಿರುವ ಈ ಆಟದಲ್ಲಿ ಮುಂದಿನ ವರ್ಷ ಏಪ್ರಿಲ್ 1ರವರಗೆ ಬದುಕಿರಬೇಕು ಎನ್ನುವುದೇ ನಿಯಮ. ಆ ಬದುಕಿನ ಹೋರಾಟಕ್ಕಾಗಿ ಸ್ಪರ್ಧಿಗಳು ಏನೆಲ್ಲಾ ಮಾಡ್ತಾರೆ ಎನ್ನುವ ಕುತೂಹಲ ಎಲ್ಲೆಡೆ ಜೋರಾಗಿದೆ.

ಆದ್ರೆ ತನ್ನ ಉಳಿವಿಗಾಗಿ ಸ್ಪರ್ಧಿಗಳು ಹೊಡೆದಾಟ, ಅತ್ಯಾಚಾರ ಮತ್ತು ಕೊಲೆಯನ್ನೂ ಮಾಡಬಹುದು ಎನ್ನುವ ನಿಯಮ ವ್ಯಾಪಕ ಟೀಕೆಗೆ ಗುರಿಯಾಗಿದೆ.

 

 

Comments are closed.

Social Media Auto Publish Powered By : XYZScripts.com