ಅಪ್ಪು ಹುಟ್ಟುಹಬ್ಬಕ್ಕೆ ಅಪ್ಪಿಕೊಂಡರು ಅಭಿಮಾನಿಗಳು

ಇಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 42ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ್ರು. ತಮ್ಮ ನೆಚ್ಚಿನ ನಟನನ್ನ ನೋಡುವುದಕ್ಕೆ ರಾಜ್ಯದ ನಾನಾ ಕಡೆಯಿಂದ ಪುನೀತ್ ಫ್ಯಾನ್ಸ್ ಬಂದಿದ್ರು. ಈ ಬರ್ತ್ ಡೇ ಅಪ್ಪುಗಷ್ಟೇ ಅಲ್ಲ. ಪವರ್ ಫ್ಯಾನ್ಸ್ ಗೂ ಅಷ್ಟೇ ವಿಶೇಷವಾಗಿತ್ತು.

ರಾಜ್ಯದ ನಾನಾ ಕಡೆಯಿಂದ ಬಂದಿದ್ದ ಅಭಿಮಾನಿಗಳು ವಿಧವಿಧವಾದ ಕೇಕ್ ಗಳನ್ನ ತಂದು ಸಂಭ್ರಮಿಸಿದ್ರು. ಅದ್ರಲ್ಲಿ ‘ರಾಜಕುಮಾರ’ ಚಿತ್ರ ಇಮೇಜ್ ಬಳಸಿ ಮಾಡಿದ ಕೇಕ್ ಗಳೆ ಹೆಚ್ಚಿದ್ದವು. ಇದ್ರೊಂದಿಗೆ ತಮ್ಮ ಫೆವರೇಟ್ ನಟನಿಗಾಗಿ ವಿಭಿನ್ನವಾದ ಗಿಫ್ಟ್ ಗಳನ್ನ ತಂದಿದ್ರು. ಒಬ್ಬ ಅಭಿಮಾನಿ ಸೈಕಲ್ ಕೊಟ್ರೆ, ಮತ್ತೊಬ್ಬರು ಪಾರಿವಾಳವನ್ನೇ ಉಡುಗೊರೆಯಾಗಿ ನೀಡಿದ್ರು.

 

ಪವರ್ ಸ್ಟಾರ್ ಕೂಡ ಅಭಿಮಾನಿಗಳು ತಂದ ಕೇಕ್ ಅನ್ನ ಕತ್ತರಿಸಿ, ಅವರೊಂದಿಗೆ ಇಡೀ ದಿನ ಹುಟ್ಟುಹಬ್ಬ ಆಚರಿಸಿಕೊಂಡ್ರು. ಇದ್ರೊಂದಿಗೆ ಮನೆಮುಂದೆ ನೆರೆದಿದ್ದ ಅಪ್ಪು ಫ್ಯಾನ್ಸ್ ಅನ್ನ ರಾಘವೇಂದ್ರ ರಾಜ್ ಕುಮಾರ್ ನೋಡಿ ಖುಷಿ ಪಟ್ರು. ಅಭಿಮಾನಿಗಳಿಂದಲೇ ನಾವು.. ಅವರಿಲ್ಲ ಅಂದರೆ ನಾವೆಲ್ಲಿ.. ಅಪ್ಪಾಜಿ ಯಾವಾಗಲೂ ಇದನ್ನೇ ಹೇಳ್ತಿದ್ರು ಅಂತ ಡಾ.ರಾಜ್ ಕುಮಾರ್ ಅವ್ರನ್ನ ನೆನಪಿಸಿಕೊಂಡ್ರು.

ಇದಲ್ಲದೆ ಪುನೀತ್ ಫ್ಯಾನ್ಸ್ ಗೆ ಈ ವಾರ ಹುಟ್ಟುಹಬ್ಬದ ಸಂಭ್ರಮವಾದ್ರೆ, ಮುಂದಿನ ವಾರ ರಾಜಕುಮಾರ ತೆರೆಗಪ್ಪಳಿಸಲಿದೆ. ಹೀಗಾಗಿ ಎರಡು ವಾರಗಳಲ್ಲಿ  ಎರಡೆರಡು ಬಾರಿ ಸಂಭ್ರಮಿಸಿದಂತಾಗುತ್ತದೆ. ಇದೆಲ್ಲ ಏನೇ ಇದ್ರೂ ಇಂದು ತಮ್ಮ ಮನೆಯ ಹಬ್ಬದಂತೆ ಪುನೀತ್ ಬರ್ತ್ ಡೇಯನ್ನ ಅಭಿಮಾನಿಗಳು ಆಚರಿಸಿದ್ದು ಮಾತ್ರ ಸುಳ್ಳಲ್ಲ..

 

Comments are closed.

Social Media Auto Publish Powered By : XYZScripts.com