ಬಜೆಟ್ 2017: ಕೃಷಿ ಕ್ಷೇತ್ರಕ್ಕೆಷ್ಟು ಪೂರಕ ?

ಸಿ.ಎಂ. ಸಿದ್ಧರಾಮಯ್ಯ ಮಂಡಿಸಿರುವ ಆಯವ್ಯಯ ಮಂಡಿನೆಯಲ್ಲಿ ಕೃಷಿ ಕ್ಷೇತ್ರದಲ್ಲೂ ತಕ್ಕಮಟ್ಟಿಗೆ ಪ್ರಯೋಜನಾಗಿದೆ. ಕೆಲವು ರೈತರ ಪರವಾದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಇದರ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

  • “ಕೃಷಿ ಭಾಗ್ಯ” ಯೋಜನೆ – ಕರಾವಳಿ ಮತ್ತು ಮಲೆನಾಡು ಪ್ರದೇಶಗಳ (ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿ) ಎಲ್ಲ
    ತಾಲ್ಲೂಕುಗಳಿಗೆ ವಿಸ್ತರಣೆಗಾಗಿ  600 ಕೋಟಿ ರೂ. ಮೀಸಲು.
  •   “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ”ಗೆ 31.5 ಲಕ್ಷ ಹೆಕ್ಟೇರ್ ಪ್ರದೇಶ ಸೇರ್ಪಡೆ. ಕೇಂದ್ರದ ನೆರವಿನ ಜೊತೆಗೆ ರಾಜ್ಯ ಸರ್ಕಾರದ ಸಂಪನ್ಮೂಲಗಳಿಂದ 845 ಕೋಟಿ ರೂ. ನೆರವು.
  • ನೀರಿನ ವಿವೇಕಯುತ ಮತ್ತು ದಕ್ಷ ಬಳಕೆಗೆ 1.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ, 2 ಹೆಕ್ಟೇರ್ ವರೆಗೆ ಶೇ.90 ರಷ್ಟು ಹಾಗೂ 5 ಹೆಕ್ಟೇರ್ ವರೆಗೆ ಶೇ. 50ರಷ್ಟು ಸಹಾಯಧನದಲ್ಲಿ, ಹನಿ ಮತ್ತು ತುಂತುರು ನೀರಾವರಿ ಘಟಕ ಸ್ಥಾಪನೆ. ಇದಕ್ಕಾಗಿ 375 ಕೋಟಿ ರೂ. ಮೀಸಲು.
  • “ಕೃಷಿ ಯಂತ್ರಧಾರೆ ಕಾರ್ಯಕ್ರಮ”ದಡಿ ಹೋಬಳಿಗಳಲ್ಲಿ 250 ಹೆಚ್ಚು ಕೇಂದ್ರಗಳ ಸ್ಥಾಪನೆಗೆ 122 ಕೋಟಿ ರೂ. ನೆರವು.
  • ಬೇಸಾಯದ ವೆಚ್ಚದ ಕಡಿತ, ಸುಧಾರಿತ ತಾಂತ್ರಿಕತೆ ಅಳವಡಿಕೆಯನ್ನು ಉತ್ತೇಜಿಸಲು, ಭತ್ತ, ದ್ವಿದಳ ಧಾನ್ಯಗಳು ಮತ್ತು ಎಣ್ಣೆ ಬೀಜಗಳ ಉತ್ಪಾದನೆ ಹೆಚ್ಚಳಕ್ಕೆ ರೈತರ ಖಾತೆಗೆ ನೇರವಾಗಿ ಪ್ರೋತ್ಸಾಹಧನ. ಇದಕ್ಕಾಗಿ ಸುಮಾರು  100 ಕೋಟಿ ರೂ. ಮೀಸಲು.
  • ¨ಪ್ರತಿ ತಾಲ್ಲೂಕು ಕೇಂದ್ರದಲ್ಲಿ ಒಂದರಂತೆ 174 “ಗ್ರಾಮೀಣ ಕೃಷಿ ಯಂತ್ರೋಪಕರಣ/ ಸೇವಾ ಕೇಂದ್ರಗಳ” ಸ್ಥಾಪನೆ; ಪ್ರತಿ ಕೇಂದ್ರ ಸ್ಥಾಪನೆಗೆ ಬ್ಯಾಂಕ್ ಲಿಂಕ್ ನೊಂದಿಗೆ 5 ಲಕ್ಷ ರೂ. ಅಥವಾ ಗರಿಷ್ಟ ಶೇ. 50 ಸಹಾಯಧನ; ಪರಿಶಿಷ್ಟ ಜಾತಿ/ಪಂಗಡದವರಿಗೆ ಗರಿಷ್ಟ ಶೇ. 75 ರ/ ಸಹಾಯಧನ ಹಾಗು 10 ಕೋಟಿ ರೂ.  ನೆರವು.

Comments are closed.

Social Media Auto Publish Powered By : XYZScripts.com