೨೦೧೯ರ ಲೋಕ ಸಭಾ ಚುನಾವಣೆಯಲ್ಲೂ ಮೋದಿ ಹವಾ: ಅಮೆರಿಕ ವಿಶ್ಲೇಷಣೆ…..

ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ಎರಡೂ ರಾಜ್ಯದಲ್ಲೂ ಅಧಿಕಾರ ಚುಕ್ಕಾಣಿ ಹಿಡಿದು, ಇನ್ನೇರಡರಲ್ಲಿ ಗದ್ದುಗೆ ಸರ್ಕಸ್ ನಡೆಸುತ್ತಿರುವ ಬಿಜೆಪಿಗೆ ಮತ್ತೊಂದು ಸಿಹಿ ಸುದ್ದಿಯನ್ನು ಅಮೆರಿಕ ರಾಜಕೀಯ ತಜ್ಞರು ನೀಡಿದ್ದಾರೆ. ಇದರಿಂದ ಬಿಜೆಪಿ ಮತ್ತಷ್ಟು ಎದೆ ಉಬ್ಬಿಸಿಕೊಂಡು ನಡೆದಾಡುವಂತಾಗಿದೆ.
ಸಂಘಟಿತ ಪಕ್ಷ ಒಂದು, ಓರ್ವ ನಾಯಕನನ್ನು ಮುಂದಿಟ್ಟುಕೊಂಡು ಈ ರೀತಿ ಯಶ ಕಾಣುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಮೋದಿ ಮೋಡಿಗೆ ರಾಷ್ಟ್ರದ ಜನ ಮನಸೋತಿದ್ದಾರೆ. ಕಳೆದ ಲೋಕ ಸಭಾ ಚುನಾವಣೆಯಲ್ಲಿ ಎಲ್ಲರ ನಿರೀಕ್ಷೆಗೂ ಮೀರಿ ಪಕ್ಷ ಮುನ್ನಡೆಸಿದ್ದ ಮೋದಿ, ೨೦೧೯ರ ಲೋಕಸಭಾ ಚುನಾವಣೆಯಲ್ಲೂ ಇದೇ ಛಾರ್ಮ ಮುಂದುವರೆಸಿಕೊಳ್ಳಲಿದ್ದಾರೆ ಎಂದು ಅಮೆರಿಕ ರಾಜಕೀಯ ತಜ್ಞರು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲೂ ಮೋದಿ ಗೆದ್ದು, ಗದ್ದುಗೆ ಏರಲಿದ್ದಾರೆ ಎಂದು ವಾಷಿಂಗ್ಟನ್ ಯೂನಿವರ್ಸಿಟಿಯ ವಿದೇಶಾಂಗ ವ್ಯವಹಾರಗಳ ಪ್ರೊಫೆಸರ್ ಆಡಮ್ ಜೇಗ್ ಫೀಲ್ಡ್ ಒಬ್ಬರು ತರ್ಕ ಹಚ್ಚಿದ್ದಾರೆ.
ಉತ್ತರ ಪ್ರದೇಶದಲ್ಲಿನ ಭರ್ಜರಿ ಜಯ ಮೋದಿ ಅವರ ಬಲವನ್ನು ಹೆಚ್ಚಿಸಿದೆ. ಮುಂದಿನ ಲೋಕಸಭಾ ಚುನಾವಣೆವರೆಗೂ ಮೋದಿ ಇದೇ ಪ್ರಭಾವ ಉಳಿಸಿಕೊಳ್ಳಲಿದ್ದಾರೆ ಎಂದು ವಿಶ್ಲೇಶಿಸಲಾಗುತ್ತಿದೆ.
ಕಳೆದ ಲೋಕಸಭಾ ಚುನಾವಣೆ ಹಾಗೂ ಪಂಚ ರಾಜ್ಯಗಳ ಚುನಾವಣೆಗೂ ಮುನ್ನ ಆಡಮ್ ಜೇಗ್ ಮೋದಿ ಇಸ್ ಫ್ರಂಟ್ ರನ್ನರ್ ಎಂದು ತಿಳಿಸಿದ್ದರು.

Comments are closed.

Social Media Auto Publish Powered By : XYZScripts.com