ಇವ್ರಿಬ್ಬರ ಭಿನಾಭಿಪ್ರಾಯವನ್ನ ರೆಬಲ್ ಸ್ಟಾರ್ ಶಮನ ಮಾಡಬಹುದಿತ್ತೇ ?

ಕಿಚ್ಚ ಸುದೀಪ್ ಹಾಗು ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಬ್ಬರೂ ಯಾವುದೋ ಕಾರಣ ಮುನಿಸಿಕೊಂಡಿದ್ದಾರೆ. ಇದನ್ನ ಈಗಾಗಲೇ ದರ್ಶನ್ ಟ್ವಿಟರ್ ಮೂಲಕ ವ್ಯಕ್ತಪಡಿಸಿದ್ದೂ ಆಗಿದೆ. ಈ ಕಾರಣಕ್ಕೆ ಇಬ್ಬರ ಅಭಿಮಾನಿಗಳಲ್ಲೂ ದೊಡ್ಡ ಮಟ್ಟದಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಅದರ ಹಿಂದೆನೇ ಮತ್ತಿನ್ನೆಂದೂ ಇಬ್ಬರೂ ಒಂದಾಗುವುದಿಲ್ಲ ಅನ್ನುವ ಮಟ್ಟಿಗೆ ವಾತಾವರಣವಿದೆ.

ಇದೇ ಕಾರಣಕ್ಕೆ ಇಬ್ಬರನ್ನೂ ಇಷ್ಟ ಪಡುವ ಅಭಿಮಾನಿಯೊಬ್ಬ ಇವರನ್ನ ಒಂದು ಮಾಡೋಕೆ ಮುಂದಾಗಿದ್ದರು.. ಅದಕ್ಕೆ ತನ್ನ ಟ್ವಿಟರ್ ಅಕೌಂಟ್ ನಿಂದ ರೆಬಲ್ ಸ್ಟಾರ್ ಅಂಬರೀಷ್ ಅವರ ಪತ್ನಿ ಸುಮಲತಾ ಅಂಬರೀಷ್ ಅವರಿಗೆ ಟ್ವೀಟ್ ಮಾಡಿದ್ದರು.. ಇದರಲ್ಲಿ ಕಿಚ್ಚ ಹಾಗು ದಚ್ಚು ಇಬ್ಬರ ನಡುವಿನ ಭಿನ್ನಾಭಿಪ್ರಾಯವನ್ನ ಶಮನ ಮಾಡುವಂತೆ ಕೇಳಿಕೊಂಡಿದ್ದರು..

 

 

 

 

 

 

 

ಇಬ್ಬರೂ ರೆಬಲ್ ಸ್ಟಾರ್ ಮಾತನ್ನ ಕೇಳ್ತಾರೆ ಅನ್ನೋ ಸಂಗತಿ ಗೊತ್ತಿದ್ದರಿಂದ ಈ ಪ್ರಯತ್ನಕ್ಕೆ ಮುಂದಾಗಿದ್ದರು. ಆದ್ರೆ ಅದಕ್ಕೆ ಸುಮಲತಾ ಅವರು ಇಬ್ಬರೂ ನಟರೂ ಪ್ರಬುದ್ಧರಿದ್ದಾರೆ.  ತಿಳಿದವರು.. ಹೀಗಾಗಿ ಅವರವರ ಸಮಸ್ಯೆಗಳನ್ನ ಅವರೇ ಬಗಹರಿಸಿಕೊಳ್ಳುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇಲ್ಲಿಗೆ ಸುಮಲತಾ ಕೂಡ ಇವರಿಬ್ಬರ ಮುನಿಸು  ತಮ್ಮ ಕೈ ಮೀರಿ ಹೋಗಿದೆ ಅನ್ನೋದನ್ನ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಆದರೆ ರೆಬಲ್ ಸ್ಟಾರ್ ಅಂಬರೀಷ್ ಒಂದು ಮಾತು ಹೇಳಿದ್ರೆ ಇಬ್ಬರು ನಟರು ಬಹುಶ: ಇಲ್ಲ ಅಂತ ಹೇಳೋಲ್ಲ ಅನಿಸುತ್ತೆ.

4 thoughts on “ಇವ್ರಿಬ್ಬರ ಭಿನಾಭಿಪ್ರಾಯವನ್ನ ರೆಬಲ್ ಸ್ಟಾರ್ ಶಮನ ಮಾಡಬಹುದಿತ್ತೇ ?

  • October 18, 2017 at 3:15 PM
    Permalink

    Hello There. I found your blog using msn. This is a very well written article. I’ll be sure to bookmark it and come back to read more of your useful information. Thanks for the post. I’ll definitely return.

  • October 24, 2017 at 7:18 PM
    Permalink

    Hi there! Quick question that’s completely off topic. Do you know how to make your site mobile friendly? My website looks weird when viewing from my iphone4. I’m trying to find a theme or plugin that might be able to correct this issue. If you have any suggestions, please share. Cheers!

Comments are closed.

Social Media Auto Publish Powered By : XYZScripts.com