PUC Exam – ಮತ್ತೆ ಪ್ರಶ್ನೆ ಪತ್ರಿಕೆ ಲೀಕ್, ರಾಯಚೂರುನಲ್ಲಿ ವಾಣಿಜ್ಯ ಪೇಪರ್ ಔಟ್…?

ರಾಯಚೂರು: ಪಿ.ಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಹಸಿಯಿರುವಾಗಲೇ ಮತ್ತೊಮ್ಮೆ ಪಿಯು ಪ್ರಶ್ನೆ ಪತ್ರಿಕೆ ಲೀಕ್ ಆದ ವರದಿ ಬಂದಿದೆ.  ರಾಯಚೂರಿನ   ಗಾಂಧಿ ಮೆಮೋರಿಯಲ್ ಪಿ.ಯು ಕಾಲಜೇನಿಲ್ಲಿ ಘಟನೆ ನಡೆದಿದ್ದು. ವಾಣಿಜ್ಯ ವಿಭಾಗದ ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ ವಾಟ್ಸ್ ಆ್ಯಪ್ ಮೂಲಕ ಸೋರಿಕೆಯಾಗಿದೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ದೌಡಾಯಿಸಿದ್ದು, ಅಕೌಂಟೆನ್ಸಿ ಪ್ರಶ್ನೆ ಪತ್ರಿಕೆ  ಔಟ್ ಆದ ಬಗ್ಗೆ  ಪರಿಶೀಲನೆ ನಡೆಸಿದ್ದಾರೆ.  ಕಷ್ಟ ಪಟ್ಟು ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಮತ್ತೆ ಕೊಡಲಿ ಪೆಟ್ಟು ಬಿದ್ದಿದೆ. ವಾಣಿಜ್ಯ ವಿಭಾಗದ ಅಕೌಂಟೆನ್ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವದನ್ನು ಶಿಕ್ಷಣ ಇಲಾಖೆ ದ್ರಡಪಡಿಸಬೇಕಿದೆ. ಜೊತೆಗೆ ಕೇಚಲ ರಾಯಚೂರಿಲ್ಲಿ ಪ್ರಶ್ನೆ ಪತ್ರಿಕೆ  ಔಟ್ ಆದ ಮಾಹಿತಿ ಬಂದಿದೆಯೋ ಇಲ್ಲಾ ಇತರ ಸ್ಥಳಗಳಲ್ಲಿ ವರದಿ ಯಾಗಿರುವ ಬಗ್ಗೆ ಶಿಕ್ಷಣ ಇಲಾಖೆ ತನಿಖೆ ನಡೆಸುತ್ತಿದೆ.

Comments are closed.

Social Media Auto Publish Powered By : XYZScripts.com