KSRTC ಕಂಡಕ್ಟರ್‌, ಡ್ರೈವರ್‌ಗಳ ಪ್ರತಿಭಟನೆ: PUC ವಿದ್ಯಾರ್ಥಿಗಳ ಪರದಾಟ…

ದೊಡ್ಡಬಳ್ಳಾಪುರ:ವಿನಾಕಾರಣ ಕಂಡಕ್ಟರ್ ಮೇಲೆ ಪ್ರಕರಣ ದಾಖಲಿಸಿದ ಮೇಲಧಿಕಾರಿಗಳ ಕ್ರಮವನ್ನು ಖಂಡಿಸಿ ಕಂಡಕ್ಟರ್ ಹಾಗೂ ಚಾಲಕರಿಂದ ದೊಡ್ಡಬಳ್ಳಾಪುರ ಡಿಪೋ ಮುಂದೆ ಪ್ರತಿಭಟನೆ ನಡೆಯುತ್ತಿದೆ. ನ್ಯಾಯ ಕೇಳಿ ಪ್ರಶ್ನೆ ಮಾಡಿದರೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದ ಪ್ರತಿಭಟನಾಕಾರರು ಕೆಲಸಕ್ಕೆ ಹಾಜರಾಗದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪರಿಣಾಮ ದೊಡ್ಡಬಳ್ಳಾಪುರ ಬಸ್ ಡಿಪೋದಿಂದ ಯಾವುದೇ ಬಸ್‌ಗಳು ಸಂಚಾರ ಆರಂಭಿಸಿಲ್ಲ.

ಡಿಪೋ ಮುಂದೆ ಪ್ರತಿಭಟನೆ ನಡೆಯುತ್ತಿದ್ದು , ಬಿಗುವಿನ ವಾತಾವರಣ ಉಂಟಾಗಿದೆ. ಇದರಿಂದ ಪರೀಕ್ಷ ಬರೆಯಲು ತೆರಳಬೇರಿದ್ದ PUC ವಿದ್ಯಾರ್ಥಿಗಳು ಪರದಾಡುವಂತಾಯಿತು.
ಪ್ರತಿಭಟನಾನಿರತರನ್ನು ನಿಯಂತ್ರಿಸಲು ಬಂದಿದ್ದ ಪೊಲೀಸರು ಅವರನ್ನ ನಿಂದಿಸಿದ್ದಾರೆ ಎಂಬ ಕಾರಣಕ್ಕೆ ಡಿಪೋ ಬಳಿ ಬಿಗುವಿನ ವಾತಾವರಣ ಏರ್ಪಟ್ಟಿದ್ದು, ಬೆಂಗಳೂರು ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಹೊರಡಬೇಕಾದ ಬಸ್ ಗಳು ಇಂದು ಸಂಚಾರ ಸ್ಥಗಿತಗೊಳಿಸಿವೆ.  ಪರಿಣಾಮ  ಪ್ರಯಾಣಿಕರು ಪರದಾಡುವಂತಾಗಿದೆ.

Comments are closed.

Social Media Auto Publish Powered By : XYZScripts.com