ಪರಿಮಳಾ ನಾಗಪ್ಪ ಷರತ್ತು ರಹಿತರಾಗಿ ಬಿಜೆಪಿ ಸೇರಿದರೆ ನನ್ನ ಅಭ್ಯಂತರವಿಲ್ಲ : ವಿ.ಸೋಮಣ್ಣ

ಮೈಸೂರು: ಮಾಜಿ ಶಾಸಕಿ ಪರಿಮಳಾನಾಗಪ್ಪ ಯಾವುದೇ ಷರತ್ತು ವಿಧಿಸದೇ ಬಿಜೆಪಿ ಸೇರ್ಪಡೆಯಾದರೆ ತನ್ನ ಅಭ್ಯಂತರವೇನೂ ಇಲ್ಲ ಎಂದು ಬಿಜೆಪಿ ನಾಯಕ ಮಾಜಿ ಸಚಿವ ಸೋಮಣ್ಣ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ಪರಿಮಳಾನಾಗಪ್ಪರಂತಹ ನೂರಾರು ಮಂದಿ ಬಿಜೆಪಿ ಗೆ ಬರ್ತಾರೆ ಹೋಗ್ತಾರೆ.


ಆದರೆ ಬಿಜೆಪಿ ಪಕ್ಷ ಸೇರ್ಪಡೆಯಾದರೆ ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಬೇಡಿಕೆ ಮುಂದಿಡುವುದು ಸರಿಯಲ್ಲ ಎಂದರು.
ನಾನು ಹನೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಈ ಮೊದಲೇ ತೀರ್ಮಾನ ಮಾಡಿದ್ದೇನೆ. ಹೀಗಾಗಿ ಪರಿಮಳ ನಾಗಪ್ಪ ಹನೂರು ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಡದೇ ಬಿಜೆಪಿ ಗೆ ಸೇರ್ಪಡೆಯಾಗುವುದಾದರೆ ಆಗಲಿ ಎಂದು ಸೋಮಣ್ಣ ಹೇಳಿಕೆ ನೀಡಿದ್ದಾರೆ.

ಸದ್ಯ ಜೆಡಿಎಸ್‌ ಪಕ್ಷದ ಸದಸ್ಯೆಯಾಗಿರುವ ಪರಿಮಳಾ ನಾಗಪ್ಪ, ಹನೂರು ಕ್ಷೇತ್ರದಿಂದ ತಮಗೆ ಬಿಜೆಪಿಯಿಂದ ಟಿಕೆಟ್‌ ನೀಡುವುದು ಖಾತ್ರಿಯಾದರೆ ತಾವು ಬಿಜೆಪಿ ಸೇರಲು ಸಿದ್ಧನಿದ್ದೇನೆ ಎಂಬ ಬೇಡಿಕೆ ಇಟ್ಟಿದ್ದಾರೆ. ಆದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ತಾವು ಹನೂರಿನಿಂದ ಸ್ಪರ್ಧಿಸಬೇಕು ಎಂಬ ಆಸೆ ಇಟ್ಟುಕೊಂಡಿರುವ ಸೋಮಣ್ಣ ಪರಿಮಳಾ ನಾಗಪ್ಪ ಕುರಿತು ಈ ರೀತಿಯ ಅಸಮಾಧಾನ ವ್ಯಕ್ತಿಪಡಿಸಿದ್ದಾರೆ. BJP ಯಲ್ಲಿನ ಆಂತರಿಕ ಕಚ್ಚಾಟ ನಿದಾನವಾಗಿ ಹೊರಬಿಳುತ್ತಿದೆ.

Comments are closed.