ಬಹುಸಂಖ್ಯಾತರ ದ್ರುವೀಕರಣದಲ್ಲಿ ಅರಳಿದ ಕಮಲ!

ಬಹು ನೀರಿಕ್ಷೆ ಹುಟ್ಟಿಸಿದ್ದ ಉತ್ತರಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಭಾರೀ ಅಚ್ಚರಿ ನೀಡಿದೆ. ಬಿಜೆಪಿಯ ಪರ ಬೀಸಿದ ಅಲೆಯ ಹೊಡೆತಕ್ಕೆ ಸಿಕ್ಕ ಸಮಾಜವಾದಿ, ಕಾಂಗ್ರೆಸ್ ಹಾಗೂ ಬಿಎಸ್ ಪಿ ಪಕ್ಷಗಳು ಧೂಳಿಪಟವಾಗಿವೆ. ಅನಿರೀಕ್ಷಿತ ಫಲಿತಾಂಶ ನೀಡಿದ ಯುಪಿ ಮತ್ತೇ ಮೋದಿ ಮೊಗದಲ್ಲಿ ನಗುವಿನ ನಗೆ ಬೀರಿಸಿದೆ.

ಹಾಗೇ ನೋಡಿದ್ರೆ ಈ ಬಾರಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಪರೋಕ್ಷವಾಗಿ ಎಸ್ ಪಿ ಹಾಗೂ ಕಾಂಗ್ರೆಸ್ ಕಾರಣವೆಂದ್ರೆ ತಪ್ಪಾಗದು. ಕಳೆದ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಎಲ್ಲ ಪಕ್ಷಗಳು ಕೊಚ್ಚಿಕೊಂಡಿ ಹೋಗಿದ್ದವು. ಆದ್ರೆ ಆ ಚುನಾವಣೆ ಕಳೆದು ಮೂರು ವರ್ಷಗಳಾಗುತ್ತಾ ಬಂತು. ಹೀಗಾಗಿ ಬಿಜೆಪಿಗೆ ಅದೇ ಫಲಿತಾಶ ದೊರಕುತ್ತೆ ಅಂತ ಅಂದುಕೊಳ್ಳುವ ಹಾಗಿರಲಿಲ್ಲ. ಅದರಲ್ಲಿಯೂ ಬಿಹಾರದಲ್ಲಿ ನೆಲ ಕಚ್ಚಿದ್ದ ಬಿಜೆಪಿಗೆ ವಿಧಾನಸಭಾ ಚುನಾವಣೆಯಲ್ಲಿ ಅಂಥಹ ಭರ್ಜರಿ ಗೆಲುವು ದೊರಕುತ್ತೆ ಅಂತ ಭಾವಿಸುವುದು ಕಷ್ಟವಾಗಿತ್ತು. ಯಾಕಂದ್ರೆ 2012ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ದಕ್ಕಿದ್ದು ಕೇವಲ 47 ಸೀಟುಗಳು ಮಾತ್ರ. ಆದ್ರೆ ಆಡಳಿತದ ಚುಕ್ಕಾಣಿ ಹಿಡಿದಿದ್ದ ಎಸ್ ಪಿ 224 ಸೀಟು, ಬಿಎಸ್ ಪಿ 80 ಸೀಟುಗಳನ್ನ ಬುಟ್ಟಿಗೆ ಹಾಕಿಕೊಂಡಿದ್ದವು.  ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ರಚಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದ್ರೆ ಈಗ ಅದು ಸಾಧ್ಯವಾಗಿದೆಯೆಂದ್ರೆ ಅದಕ್ಕೆ ಕಾರಣ ಎಸ್ ಪಿ ತಾನೇ ಮಾಡಿಕೊಂಡ  ಎಡವಟ್ಟು.

ಯಾವಾಗ ವಿಧಾನಸಭಾ ಚುನಾವಣೆ ಸಮೀಪಿಸಲಾರಂಭಿಸಿತೋ ಆಗಲೇ ಎಸ್ ಪಿ ತನ್ನ ಸೋಲಿಗೆ ಒಂದೊಂದೆ ಮೊಳೆ ಹೊಡೆದುಕೊಳ್ಳಲಾರಂಭಿಸಿತು. ಮೊದಲಿಗೆ ಅಪ್ಪ ಮಗನ ನಡುವೆ ಶುರುವಾದ ಅಸಮಾಧಾನ ಪಕ್ಷದಲ್ಲಿ ಭಾರೀ ಒಡಕು ಮೂಡಲು ಕಾರಣವಾಯ್ತು. ಉಚ್ಛಾಟನೆಯ ಪರ್ವ ಆರಂಭವಾಯ್ತು. ಅಖಿಲೇಶ್ ಪಾರ್ಟಿ ಹೈಜಾಕ್ ಮಾಡಲು ಪ್ರಯತ್ನಿಸಿದ್ರೆ ಅಪ್ಪ ಮುಲಾಯಂ ಮುಖ್ಯಮಂತ್ರಿಯನ್ನೇ ಪಕ್ಷದಿಂದ ಗೆಟ್ ಔಟ್ ಅಂದುಬಿಟ್ರು. ಒಂದು ರೀತಿಯಲ್ಲಿ ಈ ಮನೆ ಜಗಳ ನಿಧಾನವಾಗಿ ಯಾದವೀ ಕಲಹದ ರೂಪ ಪಡೆದುಕೊಂಡಿತು. ಪಕ್ಷ ಒಗ್ಗಟ್ಟಿನಿಂದ ಬರುವ ಚುನಾವಣೆಗೆ ರಣತಂತ್ರ ರೂಪಿಸಿಬೇಕಾದ ಸಮಯದಲ್ಲಿ ಗೋಡೆಯೇ ಕುಸಿದು ಬೀಳುವಂತಹ ಬಿರುಕು ಮುಚ್ಚಲಾಗದೆ ಅತಂತ್ರ ಸ್ಥಿತಿ ತಲುಪಿತ್ತು. ಒಂದು ರೀತಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾರ ಜೊತೆಗೆ ನಡೆಯಬೇಕೆಂಬುದು ತಿಳಿಯದೆ ಗೊಂದಲದ ಗೂಡಾಗಿತ್ತು ಎಸ್ ಪಿ.

ಈ ಒಂದು ಪ್ರಮಾದ ಸಮಾಜವಾದಿ ಪಕ್ಷ ಇಲ್ಲಿಯವರೆಗೂ ಕಾಯ್ದುಕೊಂಡು ಬಂದಿದ್ದ ಹಿಡಿತವನ್ನ ಒಂದೇ ಬಾರಿಗೆ ಸೂತ್ರ ಹರಿದ ಗಾಳಿಪಟದಂತೆ ಮಾಡಿಬಿಡ್ತು. ಹೀಗಾಗಿ ಪಕ್ಷದ ಪರವಾಗಿದ್ದ ಮತದಾರರಿಗೆಲ್ಲ ಅಪ್ಪ ಮಗನ ಈ ಹುಚ್ಚಾಟ ರೇಜಿಗೆ ಹುಟ್ಟಿಸಿಬಿಡ್ತು. ಒಗ್ಗಟ್ಟಿಲ್ಲದ ಪಕ್ಷವನ್ನ ಗೆಲ್ಲಿಸಿದ್ರೆ ಬರುವ ದಿನಗಳಲ್ಲಿ ರಾಜ್ಯಕ್ಕೆ ಅಪಾಯ ಗ್ಯಾರಂಟಿ ಎಂಬ ಸಂದೇಶವನ್ನ ಅಪ್ಪ ಮಗನ ಕಿತ್ತಾಟ ರವಾನಿಸಿಬಿಡ್ತು. ಈ ಕಾರಣಕ್ಕೆ ಇಂದು ಪಕ್ಷ ಮೂರಂಕಿ ಸನಿಹಕ್ಕೂ ಸುಳಿಯದೆ ಮುಗ್ಗರಿಬೇಕಾಯ್ತು. ಜೊತೆಗೆ ಕಾಂಗ್ರೆಸ್ ದಿನದಿಂದ ದಿನಕ್ಕೆ ರಾಷ್ಟ್ರಮಟ್ಟದಲ್ಲಿ ಹಿಡಿತ ಕಳೆದುಕೊಳ್ಳುತ್ತಿದೆ. ಇಂಥಹ ಸನ್ನಿವೇಶದಲ್ಲಿ ಆ ಪಕ್ಷದ ಜೊತೆಗಿನ ಮೈತ್ರಿ ಮೂರು ಕಾಸಿಗೂ ಲಾಭವಾಗಲಿಕ್ಕಿಲ್ಲ ಎನ್ನುವ ಯೋಚನೆ ಮಾಡದಿರುವುದು ಕೂಡಾ ಈ ಸೋಲಿಗೆ ಕಾರಣವಾಗಿರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಡುತ್ತಿದ್ದಾರೆ.

ಇನ್ನೂ ಬಿಎಸ್ ಪಿಯ ಮಾಯಾವತಿ ರಾಜ್ಯದಲ್ಲಿ ತಮ್ಮ ಹಿಂದಿನ ವರ್ಚಸ್ಸನ್ನು ಸಧ್ಯ ಉಳಿಸಿಕೊಮಡಿಲ್ಲ ಎನ್ನುವುದು ಅವರ ಚುನಾವಣಾ ಪ್ರಚಾರದ ವೇಳೆಯೇ ಕಂಡುಬರುತ್ತಿತ್ತು. ಜೊತೆಗೆ ಸಂಘಟಿತವಾಗಿ ಹೋರಾಟ ರೂಪಿಸುವಲ್ಲಿ ಮಾಯಾವತಿ ಸತತವಾಗಿ ವಿಫಲವಾಗಿದ್ದು ಕೂಡಾ ಮತದಾರರ ವಿಶ್ವಾಸ ಕಳೆದುಕೊಳ್ಳುವದಕ್ಕೆ ಕಾರಣವಾಯ್ತು ಎನ್ನಬಹುದು. ಹೀಗಾಗಿ ಈ ಬಾರಿ ಬಿಎಸ್ ಪಿ ಇಪ್ಪತ್ತರ ಆಸುಪಾಸು ಬರುವಷ್ಟರಲ್ಲಿ ಆಯಾಸಗೊಂಡಿದೆ.

ಇದೆಲ್ಲದರ ನಡುವೆ ಬಿಜೆಪಿಯ ಅಮೋಘ ಜಯಭೇರಿ ಕಾರಣವಾಗಿದ್ದು ಮತ್ತೊಮ್ಮೆ ಮೋದಿ ಮತ್ತು ಶಾ ಅವರ ರಣತಂತ್ರ. ಬಿಹಾರ ಚುನಾವಣೆಯಲ್ಲಿ ಕಂಡ ಸೋಲಿನಿಂದ ಪಾಠ ಕಲಿತಿದ್ದ ಈ ಇಬ್ಬರೂ ನಾಯಕರು  ಉತ್ತರ ಪ್ರದೇಶಕ್ಕೆ ಬೇರೇಯೇ ರಣನೀತಿ ರೂಪಿಸಿದ್ರು. ಪ್ರಧಾನಿ ಮೋದಿ ರಾಜ್ಯದ ಮೂಲೆ, ಮೂಲೆಗೂ ಸಂಚರಿಸಿ ಪಕ್ಷದ ಪರ ಪ್ರಚಾರ ಮಾಡಿದ್ರು. ಮುಸ್ಲಿಂ ಪ್ರಾಬಲ್ಯವಿರುವ ಯುಪಿ ಬಿಜೆಪಿ ಪರ ನಿಲ್ಲುವುದು ಅಸಾಧ್ಯವೆಂದೆ ವಿರೋಧ ಪಕ್ಷಗಳು ಎಣಿಸಿದ್ದವು. ಆದ್ರೆ ಮೋದಿ ಅದೇನು ಮೋಡಿ ಮಾಡಿದ್ರೋ ಅವರು ಹೋದಲ್ಲೆಲ್ಲಾ ಜನಸ್ತೋಮ ಸೇರುತ್ತಿತ್ತು. ಅವರ ಮಾತಿನ ಮಾಂತ್ರಿಕತೆಗೆ ಮಾರು ಹೋದ ಮತದಾರ ಮರು ಮಾತನಾಡದೆ ಬಿಜೆಪಿಯನ್ನ ಹೆಗಲ ಮೇಲೆ ಹೊತ್ತು ಜಯದ ಹೊಸ್ತಿಲು ತಲುಪಿಸಿಯೇ ಬಿಟ್ಟ. ಿದು ಕೇವಲ ಬಿಜೆಪಿ ಪಕ್ಷದ ಅಭಿಪ್ರಾಯ ಮಾತ್ರವಲ್ಲ ಈ ಜಯದ ರೂವಾರಿ ಮೋದಿ ಎನ್ನುವುದು ನಿಸ್ಸಂಶಯ.

ಉತ್ತರ ಪ್ರದೇಶದಂತಹ ವಿಶಾಲ ರಾಜ್ಯದಲ್ಲಿ ವಿಜಯ ಪತಾಕೆ ನೆಡುವ ಮೂಲಕ ಮೋದಿ ತಾವಿನ್ನೂ ಎಂತಹ ಮ್ಯಾಜಿಕ್ ಬೇಕಾದ್ರು ಮಾಡಬಲ್ಲೇ ಎಂಬ ಸೂಚನೆ ನೀಡಿದ್ದಾರೆ. ಜೊತೆಗೆ ಉತ್ತರಾಖಂಡ ಗೆಲುವು ಕೂಡಾ ಬಿಜೆಪಿ ಹುಮ್ಮಸ್ಸನ್ನ ಇಮ್ಮಡಿಗೊಳಿಸಿದೆ. ಸಧ್ಯ ಬಿಜೆಪಿ ನೆಕ್ಸ್ಟ್ ಟಾರ್ಗೆಟ್ ಏನಿದ್ರು ಕರ್ನಾಟಕವೇ!

3 thoughts on “ಬಹುಸಂಖ್ಯಾತರ ದ್ರುವೀಕರಣದಲ್ಲಿ ಅರಳಿದ ಕಮಲ!

 • October 21, 2017 at 2:56 AM
  Permalink

  There are certainly many details like this to take into consideration. It really is a excellent specify bring up. I provide the thoughts above as general inspiration but clearly there are actually questions just like the one you bring up where the most important factor might be doing work in honest good faith. I don?t know if best practices have emerged around items like that, but I know that the job is clearly referred to as a good game. Both boys and girls notice the impact of just a moment’s pleasure, throughout their lives.

 • October 24, 2017 at 2:42 PM
  Permalink

  I’ll machines this analyze to 2 designs of people today: existing Zune homeowners who are contemplating an enhance, and men and women making an attempt toward choose between a Zune and an iPod. (There are other players truly worth thinking about out there, including the Sony Walkman X, nonetheless I be expecting this delivers yourself sufficient info toward deliver an knowledgeable final decision of the Zune vs avid gamers other than the iPod line as well.)

 • October 25, 2017 at 10:45 AM
  Permalink

  That is a smart way of thinking about it. Well written! Great tips and very easy to understand.

Comments are closed.

Social Media Auto Publish Powered By : XYZScripts.com