ಬ್ಯಾಂಕ್‌ಗಳೊಂದಿಗೆ ಒನ್‌ ಟೈಮ್‌ ಸೆಟಲ್‌ಮೆಂಟ್‌ಗೆ ಸಿದ್ಧನಿದ್ದೇನೆ:  ವಿಜಯ್‌ ಮಲ್ಯ!

ಮದ್ಯದ ದೊರೆ ವಿಜಯ ಮಲ್ಯ ತಾನು ಭಾರತೀಯ ಬ್ಯಾಂಕ್‌ಗಳೊಂದಿಗೆ ಒನ್‌ ಟೈಮ್‌ ಸೆಟಲ್‌ಮೆಂಟ್‌ ಮಾಡಿಕೊಳ್ಳಲು ಸಿದ್ಧನಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ. 9ಸಾವಿರ ಕೋಟಿ ರೂಪಾಯಿಗಳನ್ನ ಒಂದೇ ಕಂತಿನಲ್ಲಿ ತುಂಬಿ ಸಾಲ ಚುಕ್ತಾ ಮಾಡಲು ತಾನು ತಯಾರಿದ್ದೇನೆ ಎಂದಿದ್ದಾರೆ.

ಸರ್ಕಾರಿ ಬ್ಯಾಂಕ್‌ಗಳು ಒನ್‌ ಟೈಮ್‌ ಸೆಟಲ್‌ಮೆಂಟ್‌ ನೀತಿಯನ್ನ ಹೊಂದಿವೆ. ಇದರಿಂದ ಅನೇಕ ಸಾಲಗಾರರು ತಮ್ಮ ಸಾಲದಿಂದ ಮುಕ್ತಿ ಹೊಂದಿದ್ದಾರೆ ಕೂಡ. ನನ್ನ ವಿಷಯದಲ್ಲಿ ಈ ನೀತಿ ಏಕೆ ಹೊಂದಾಣಿಕೆಯಾಗುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ತನ್ನ ಮತ್ತು ಬ್ಯಾಂಕ್‌ಗಳ ಮಧ್ಯೆ ಸುಪ್ರೀಂ ಕೋರ್ಟ್‌ ಮಧ್ಯಸ್ಥಿಕೆ ವಹಿಸಿ, ಒನ್‌ಟೈಮ್‌ ಸೆಟಲ್‌ಮೆಂಟ್‌ಗೆ ಅವಕಾಶ ಕಲ್ಪಿಸಿಕೊಡುವುದಾದರೆ ತಾನು ಸಾಲ ತುಂಬಲು ಸಿದ್ಧನಿದ್ದೇನೆ ಎಂದಿದ್ದಾರೆ ಮದ್ಯದೊರೆ.

ಕಳೆದ ವರ್ಷದ ಫೆಬ್ರವರಿಯಲ್ಲಿ ಮಲ್ಯ ಅವರು ಬ್ರಿಟನ್‌ನ ಡಿಯಾಜಿಯೋ ಕಂಪೆ‌ನಿಯಿಂದ 267 ಕೋಟಿ ರೂ. ಪಡೆದುಕೊಂಡು, ತಮ್ಮ ಮಕ್ಕಳ ಖಾತೆಗಳಿಗೆ ವರ್ಗಾಯಿಸುವ ಮೂಲಕ ಕರ್ನಾಟಕ ಹೈಕೋರ್ಟ್‌ ಮತ್ತು ಸಾಲ ಮರು ವಸೂಲಿ ನ್ಯಾಯಾಧಿಕರಣ ಸೇರಿದಂತೆ ವಿವಿಧ ನ್ಯಾಯಾಂಗ ಆದೇಶಗಳನ್ನು ಉಲ್ಲಂಘಿಸಿದ್ದರು.

ವಿಜಯ ಮಲ್ಯ ಅವರು ತಮ್ಮ ಮಕ್ಕಳ ಹೆಸರಿಗೆ ವರ್ಗಾಯಿಸಿರುವ 40 ದಶಲಕ್ಷ ಡಾಲರ್‌ (267 ಕೋಟಿ ರೂ.) ಅನ್ನು ವಾಪಸ್‌ ಪಡೆಯುವಂತೆ ಬ್ಯಾಂಕುಗಳ ಒಕ್ಕೂಟವು ಸುಪ್ರೀಂಕೋರ್ಟ್‌ ಮೊರೆ­ಹೋಗಿದ್ದವು, ಈ ಅರ್ಜಿಯನ್ನು ಮಾ.9ರಂದು ವಿಚಾರಣೆ ನಡೆಸಿ, ಮಲ್ಯ ಅವರ ಸತ್ಯಸಂಧತೆಯನ್ನ ಸುಪ್ರೀಂ ಕೋರ್ಟ್‌ ಪ್ರಶ್ನಿಸಿತ್ತು.

ಕೋಟಿಗಟ್ಟಲೆ ಸಾಲ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ, ಉದ್ಯಮಿ ವಿಜಯ ಮಲ್ಯ ಅವರನ್ನು ಹಸ್ತಾಂತರಿಸುವಂತೆ ಕೋರಿ ಯುಕೆಗೆ ಭಾರತ ಸರ್ಕಾರ ಮನವಿ ಸಲ್ಲಿಸಿದೆ.

ಭಾರತದ ಹಲವಾರು ಬ್ಯಾಂಕ್‌ಗಳಲ್ಲಿ 9 ಸಾವಿರ ಕೋಟಿ ಸಾಲ ಮಾಡಿದ್ದ ಕಿಂಗ್‌ಫಿಷರ್‌ ಏರ್‌ಲೈನ್ಸ್‌ ಮಾಲಿಕ ಮಲ್ಯ 2016ರ ಮಾರ್ಚ್‌2 ರಂದು ಭಾರತದಿಂದ ಪರಾರಿಯಾಗಿದ್ದರು.

One thought on “ಬ್ಯಾಂಕ್‌ಗಳೊಂದಿಗೆ ಒನ್‌ ಟೈಮ್‌ ಸೆಟಲ್‌ಮೆಂಟ್‌ಗೆ ಸಿದ್ಧನಿದ್ದೇನೆ:  ವಿಜಯ್‌ ಮಲ್ಯ!

  • October 21, 2017 at 1:16 AM
    Permalink

    I all the time used to study article in news papers but now
    as I am a user of internet therefore from now I am using net
    for content, thanks to web.

Comments are closed.