ರಿಲೀಸ್ ಗೂ ಮೊದಲೇ ಬರ್ತಿದೆ ೧೦ ನಿಮಿಷದ ಬಾಹುಬಲಿ ಸಿನಿಮಾ !

ಬಾಹುಬಲಿ ದಿ ಕನ್ ಕ್ಲೂಷನ್ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬಾಹುಬಲಿ ಪ್ರೀಕ್ವೆಲ್ ನೋಡಿರೋರು, ನೋಡದೇ ಇರೋರು ಸೀಕ್ವೆಲ್ ಚಿತ್ರಕ್ಕೋಸ್ಕರ ಚಾತಕ ಪಕ್ಷಿಗಳಂತೆ ಕಾಯ್ತಿದ್ದಾರೆ. ಪ್ರಭಾಸ್, ರಾಣಾ, ಅನುಷ್ಕಾ ಶೆಟ್ಟಿ, ತಮನ್ನಾ, ರಮ್ಯಕೃಷ್ಣ ಸೇರಿ ಭಾರಿ ತಾರಾಗಣದ ಬಾಹುಬಲಿ ೨ ಚಿತ್ರ ಏಪ್ರಿಲ್ ೨೮ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ. ಆದ್ರೆ ಅದಕ್ಕೂ ಮೊದ್ಲೆ ೧೦ ನಿಮಿಷಗಳ ಬಾಹುಬಲಿ ಸಿನಿಮಾ ತೋರ್ಸೋ ಪ್ಲಾನ್ ಮಾಡ್ಕೊಂಡಿದ್ದಾರೆ ನಿರ್ದೇಶಕರು.

ಬಾಹುಬಲಿ ದಿ ಕನ್ ಕ್ಲೂಷನ್ ಚಿತ್ರದ ಟ್ರೇಲರ್ ರಿಲೀಸ್ ಮಾಡೋಕೆ ರಾಜಮೌಳಿ ಪ್ಲಾನ್ ಮಾಡ್ತಿದ್ದಾರೆ. ವಿಶೇಷ ಅಂದ್ರೆ ಬಾಹುಬಲಿ ಸೀಕ್ವೆಲ್ ಚಿತ್ರದ ೧೦ ನಿಮಿಷದ ಸ್ಪೆಷಲ್ ಟ್ರೇಲರ್ ಬಿಡುಗಡೆ ಮಾಡ್ತಾರಂತೆ ರಾಜಮೌಳಿ. ಸಾಮಾನ್ಯವಾಗಿ ೨,೩ ನಿಮಿಷಗಳ ಸ್ಯಾಂಪಲ್ ರಿಲೀಸ್ ಮಾಡಿ ಚಿತ್ರದ ಕುರಿತು ಕುತೂಹಲ ಹೆಚ್ಚಿಸೋದು ಮಾಮೂಲು. ಆದರೆ ಬಾಹುಬಲಿ ೨ ಚಿತ್ರದ ೧೦ ನಿಮಿಷಗಳ ವಿಡೀಯೋ ರಿಲೀಸ್ ಮಾಡ್ತಿರೋದು ವಿಶೇಷ. ಈ ಟ್ರೇಲರ್ ಮೂಲಕ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸೋದು ಚಿತ್ರತಂಡದ ಐಡಿಯಾ.

ಬಹುನಿರೀಕ್ಷಿತ ಬಾಹುಬಲಿ ಸೀಕ್ವೆಲ್ ಕುರಿತು ಭಾರಿ ರಹಸ್ಯ ಕಾಯ್ದುಕೊಂಡಿದೆ ಚಿತ್ರತಂಡ. ಎಲ್ಲರ ಸಿನಿಮಾವನ್ನ ಚಿತ್ರಾಮಂದರದಲ್ಲೇ ನೋಡ್ಬೇಕು, ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ ? ಅನ್ನೋ ಪ್ರಶ್ನೆಗೆ ಏಪ್ರಿಲ್ ೨೮ಕ್ಕೆ ಉತ್ತರ ಗೊತ್ತಾಗಬೇಕು ಅನ್ನೋದು ರಾಜಮೌಳಿ ಆಸೆ. ಅದೇ ಕಾರಣಕ್ಕೆ ವಿತರಕರಿಗೂ ಸಿನಿಮಾ ತೋರಿಸಲ್ಲ ಅಂತಿದ್ದಾರೆ ನಿರ್ದೇಶಕರು. ೧೦ ನಿಮಿಷಗಳ ಟ್ರೇಲರ್ ನೋಡಿ ವಿತರಕರು ಚಿತ್ರವನ್ನು ಕೊಂಡುಕೊಳ್ಳಬೇಕು ಅನ್ನೋದು ಅವರ ಷರತ್ತು. ಐಡಿಯಾ ಚೆನ್ನಾಗಿದೆ, ಆದರೆ ಪೂರ್ತಿ ಸಿನಿಮಾ ನೋಡ್ದೆ ಕೋಟಿ ಕೋಟಿ ಸುರಿದು ಯಾವ ಧೈರ್ಯದ ಮೇಲೆ ಚಿತ್ರದ ವಿತರಣೆ ಹಕ್ಕು ಕಂಡುಕೊಳ್ಳೊದು ಅಂತ ವಿತರಕರು ತಲೆ ಕೆಡಿಸಿಕೊಂಡಿದ್ದಾರೆ.

Comments are closed.