ನಾ ಕಂಡಂತೆ ಗೆಳತಿ ರಂಗಕಲಾವಿದೆ, ಹಾಡುಗಾರ್ತಿ ಸುಹಾನ

ಅಜಯ್ ನೀನಾಸಂ

ಏಳು ವರ್ಷದ ಹಿಂದೆ ಮೊದಲು ಸುಹಾನಾಳನ್ನ ನೋಡಿದ್ದೇ ನಟಿಯಾಗಿ ರಂಗದ ಮೇಲೆ ರತಿ ಪಾತ್ರದಲ್ಲಿ ಅಬ್ಬಾ ಎನಿಸುವಂತ ತುಂಬಿದ ನಟನೆ. ರತಿಯ ಅಳಲನ್ನ ಸುಹಾನ ಮತ್ತು ಮಧುನಿಶಾ ನಮ್ಮೆಲ್ಲರ ಎದೆಯಾಳಕ್ಕೆ ಇಳಿಸಿದ್ದರು ನಾಲ್ಕೈದು ಶೋ ನೋಡಿದೆ ಸಮಾಧಾನವಾಗಲೇ ಇಲ್ಲ ಇದಾದ ಸುಮಾರು ಮೂರು ತಿಂಗಳ ನಂತರವೇ ಇವರಿಬ್ಬರ ಹೆಸರು ನನಗೆ ಗೊತ್ತಾದದ್ದು ಸುಹಾನ ತಹ್ರೀಮ್ ಎಂದು ಗೊತ್ತಾದಾಗಲು ಅಂಥಾ ಆಶ್ಚರ್ಯವೇನು ಆಗಲಿಲ್ಲ ಯಾಕೆಂದ್ರೆ ರಂಗಭೂಮಿಯಲ್ಲಿನ ನಮ್ಮ ಅನೇಕ ಗೆಳೆಯರು . ಗೆಳತಿಯರು ಯಾವ ಜಾತಿ ಯಾವ ಧರ್ಮ ಎಂದು ಇಂದಿಗೂ ನಮಗೆ ಸರಿಯಾಗಿ ಗೊತ್ತಿಲ್ಲ ಅದು ನಮಗೆ ಬೇಕಾಗಿಯೂ ಇರಲಿಲ್ಲ ಇನ್ನೂ  ಮುಂದೂ ಇಲ್ಲ ಯಾಕೆಂದ್ರೆ ನಮ್ದೆಲ್ಲ ಒಂದೇ ಜಾತಿ ನಾವು ಕಲಾವಿದರು, ಅಥವಾ ಮನುಷ್ಯರು ಸುಹಾನಳನ್ನ ಅನೇಕ ನಾಟಕಗಳಲ್ಲ ವಿಭಿನ್ನ ಪಾತ್ರಗಳಲ್ಲಿ ಯಕ್ಷಗಾನದ ಪಾತ್ರಗಳಲ್ಲಿ ನೋಡಿ ಆಕೆಯ ಪ್ರತಿಭೆಯನ್ನ ಮೆಚ್ಚಿದ್ದೇವೆ ಆ ಕುರಿತು ಒಟ್ಟಿಗೆ ಕೂತು ಚರ್ಚಿಸಿದ್ದೇವೆ ಆದರೆ ಮೊದಲ ಬಾರಿ ಅಘಾತವಾದದ್ದು ಸರಿಗಮಪ ದ ವೇದಿಕೆಯಲ್ಲಿ ಹಾಡಿದ ನಂತರ ಆ ನಿರೂಪಕಿ , ಮತ್ತು ತೀರ್ಪುಗಾರರ ಮಾತುಗಳು. ಬೆಂಕಿ ಹಚ್ಚುವ ಕೆಲಸವನ್ನ ಮೊದಲು ಮಾಡಿದರು.  ಆಕೆ ಅದ್ಭುತ ಗಾಯಕಿ ಅದನ್ನ ಮಾತಾಡುವುದನ್ನ ಬಿಟ್ಟು ಅದರೊಟ್ಟಿಗೆ ಅವಳು ಹುಟ್ಟಿದ ಧರ್ಮ, ಕಟ್ಟುಪಾಡು , ಬಿಡುಗಡೆ , ಮುಕ್ತಿ, ಇಂಥವೆಲ್ಲಾ ಅನಗತ್ಯ ಬೆಂಕಿ ಹಚ್ಚುವ ಪದಗಳನ್ನ ಬಳಸಿದ್ದು ಅವರ ಹೇಸಿಗೆ ಟಿ ಆರ್ ಪಿ ಯ ದಾಹಕ್ಕಾಗಿ. ಇ ವಿಷಯ ಇಷ್ಟರಮಟ್ಟಿಗೆ ಬೆಳೆಯಲಿ ಎಂಬುದೆ ಅವರ ಉದ್ದೇಶ ಅದು ಈಡೇರಿದೆ. ಇನ್ಫ್ಯಾಕ್ಟ್ ಅದೇ ಕಾರ್ಯಕ್ರಮದಲ್ಲಿ ಸುಹಾನಾಳನ್ನ ಒಂದು ಧಾರ್ಮಿಕ ಉಡುಗೆಯಲ್ಲಿ ಮೊದಲ ಬಾರಿ ನಾನು ನೋಡಿದ್ದು ಆ ಕಾರ್ಯಕ್ರಮದಲ್ಲಿರುವ ತೀರ್ಪುಗಾರರಿಗಿಂತಲೂ ಹೆಚ್ಚು ಪ್ರೌಢಿಮೆ ಈಕೆಗಿದೆ (ಲೋಕಜ್ಞಾನದಲ್ಲಿ) .

ಅವಳ ವಿರುದ್ದ ಫೇಸ್ಬುಕ್ ಗಳಲ್ಲಿ ಬರೆಯುತ್ತಿರುವ ಮೂರ್ಖರಿಗೆ ಕಲಾ ಜಗತ್ತಿನ ವಾಸನೆಯೂ ಗೊತ್ತಿಲ್ಲ ಎಂಬುದು ಸಾಬೀತಾಗುತ್ತದೆ ಮತ್ತು ಅಂಥವರಿಗೆ ಆಕೆ ಎಂದೂ ಹೆದರದ ದಿಟ್ಟೆ. ಇನ್ನು ನ್ಯೂಸ್ ಚಾನೆಲ್ ಗಳಲ್ಲಿ ಸುಹಾನಾಳನ್ನ ಗಾಯಕಿ ಎನ್ನುವ ಬದಲು ಮುಸ್ಲಿಂ ಗಾಯಕಿ ಎಂದು ಪದೇ ಪದೇ ಹೇಳಿ ಬೆಂಕಿ ಹಚ್ಚುತ್ತಿರುವವರು ಆಕೆಯ ಪ್ರತಿಭೆಗೆ ಧರ್ಮದ ನೆರಳು ಸೋಕಿಸುತ್ತಿರುವವರು ಹೊಟ್ಟೆಗೆ ಅದೇನು ತಿನ್ತಾರೊ. ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಬೇಕಾದ ಈ ಜನಗಳು ಬೆಂಕಿ ಹತ್ತಿ ಉರಿಯಲಿ ಎಂದು ಬಕ ಪಕ್ಷಿಗಳಂತೆ ಕಾಯುವುದನ್ನೇ ಜರ್ನಲಿಸಂನಲ್ಲಿ ಕಲಿತಿದ್ದಾರಾ. ಪ್ರಾಮಾಣಿಕ ಪತ್ರಕರ್ತರಿಗೂ ಕೆಟ್ಟ ಹೆಸರು ತರುವ ಇವರ ಜನ್ಮಕ್ಕಿಷ್ಟು……

ಯಾರು ಏನೇ ಹೇಳಲಿ . ಒದರಲಿ.. ಕಿರುಚಲಿ .. ನಾನು ಕಂಡ ಗೆಳತಿ ಸುಹಾನ ಮೊದಲಿನಂತೆಯೇ ಇದ್ದಾಳೆ ಹಾಗೇ ಇರಲಿ . ತನ್ನ ಹಾಡುಗಾರಿಕೆಯಿಂದಲೆ ಹೆಸರು ಕೀರ್ತಿ, ಪ್ರೀತಿ ಗಳಿಸಲಿ ನಾನಂತು ಸಂಪೂರ್ಣ ಬೆಂಬಲಿಸುತ್ತೇನೆ. ಯಾರೇನೇ ಅನ್ನಲಿ ಸುಹಾನಾ ನೀನು ಹಾಡು. ನಾವಿದ್ದೇವೆ ನಿನ್ನ ಜೊತೆ……..

2 thoughts on “ನಾ ಕಂಡಂತೆ ಗೆಳತಿ ರಂಗಕಲಾವಿದೆ, ಹಾಡುಗಾರ್ತಿ ಸುಹಾನ

 • October 18, 2017 at 2:34 PM
  Permalink

  ABCsoa ABCDyWiH ABCDVwpqX fodboldtrøjer børn ABNGq ABCNjn ABCwKOV ABCDAWXV

  ABCKcz ABCDWvzx ABCDFASmY fodboldtrøjer ABOxf ABCcGD ABCfoMa ABCDJaBM

  ABCpHK ABCDYkHq ABCDUyFZs billige fodboldtrøjer børn ABMEP ABCAJT ABCZzVx ABCDEgJR

  ABCMnf ABCDyAhH ABCDQlOyN billige fodboldtrøjer ABTRV ABCrAM ABCQGIk ABCDlUaH

  ABCbYt ABCDBvoZ ABCDCmcaz billige fodboldtrøjer børn ABGzB
  ABCmWv ABCLJim ABCDftbN

  ABCRWz ABCDrLdR ABCDqThau billige fodboldtrøjer
  børn ABmMH ABCwvH ABChBGp ABCDkxHW

  ABCAyJ ABCDTiNR ABCDSnYzx billige fodboldtrøjer børn ABERP ABCftU ABCJeAS
  ABCDFbQs

  ABCIJS ABCDbAps ABCDRnMsQ fodboldtrøjer ABRxk ABCmdY ABCXckM ABCDDsVC

  ABCXFo ABCDeaKR ABCDZOzLU fodboldtrøjer ABwiA ABCekz ABCOlDK ABCDXpRA

  ABCCme ABCDhIgs ABCDGmCxM fodboldtrøjer ABpMy ABCgYI ABCjLZc ABCDauNr

  ABCchS ABCDFlXi ABCDMUlro billige fodboldtrøjer børn ABCtS ABCIQK ABCIoEy
  ABCDoUwL

  ABCYFL ABCDjiND ABCDyPdCt fodboldtrøjer ABVto ABCKTb ABCKuEf
  ABCDGADp

  ABCeGm ABCDdneE ABCDNXHOI fodboldtrøjer ABNXy ABCAkg ABCMaGK ABCDgLiQ

  ABCJch ABCDhtuE ABCDoKCti fodboldtrøjer børn ABzla ABCqaP ABCmZzo ABCDOiUH

  ABCqKr ABCDUiwd ABCDykRon fodboldtrøjer ABASs ABCdHN ABCzcBr
  ABCDVkON

 • October 21, 2017 at 2:09 AM
  Permalink

  Do you have a spam issue on this website; I also am a blogger, and I wanted to know your situation; many of us have developed some nice methods, and we are looking to trade methods with others, why not shoot me an e-mail if interested.

Comments are closed.