Cricket Ind vs Aus – ಪಿಚ್ ಕ್ಯೂರಿಯೆಟರ್ ಆದ ರಾಂಚಿ Rambo…

ರಾಂಚಿ: ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಅಂಗಳಕ್ಕೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಆತೀಥ್ಯ ನೀಡಲಿರುವ ತವರಿನ ಪಿಚ್‌ನ ಪರಿಶೀಲನೆ ನಡೆಸಿದ್ದಾರೆ.
ರಾಂಚಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಣ ಮೂರನೇ ಟೆಸ್ಟ್ ಪಂದ್ಯ ಮಾ.೧೬ ರಂದು ನಡೆಯಲಿದೆ. ತಮಗೆ ಸಿಕ್ಕ ಕೆಲವೇ ಸಮಯದಲ್ಲಿ ಉತ್ತಮ ಮೈದಾನ ನಿರ್ಮಿಸುವ ಜವಾಬ್ದಾರಿ ಜಾರ್ಖಂಡ್ ತಂಡದ ಮೇಲಿದೆ. ಧೋನಿ ಮೈದಾನಕ್ಕೆ ಭೇಟಿ ನೀಡಿ ಪಿಚ್ ಪರಿಶೀಲನೆ ನಡೆಸಿದರು.
ಬಿಸಿಸಿಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ ಧೋನಿ ಜಾರ್ಖಂಡ್‌ಗೆ ತೆರಳಿ, ಕುಟುಂಬಸ್ಥರೊಂದಿಗೆ ಸಮಯ ಕಳೆಯಲಿದ್ದಾರೆ. ಧೋನಿ ಸದ್ಯ ವಿಜಯ್ ಹಜಾರೆ ಟೂರ್ನಿಯಲ್ಲಿ ಜಾರ್ಖಂಡ್ ತಂಡದ ಪರ ಆಡುತ್ತಿದ್ದು, ಜಾರ್ಖಂಡ್ ಕ್ವಾರ್ಟರ್ ಫೈನಲ್‌ಗೆ ಅರ್ಹತೆಯನ್ನು ಪಡೆದುಕೊಂಡಿದೆ.
ಧೋನಿ ಅವರು ಮೈದಾನಕ್ಕೆ ತಮ್ಮ ಬಿಡುವಿನ ಸಂದರ್ಭದಲ್ಲಿ ಭೇಟಿ ನೀಡುತ್ತಾರೆ. ಅವರ ಭೇಟಿ ಹಾಗೂ ಮುಂದಿನ ಪಂದ್ಯಕ್ಕೆ ಸಂಬಂಧವಿಲ್ಲ. ರಾಂಚಿಯಲ್ಲಿ ಧೋನಿ ಇದ್ದರೆ, ಫಿಟ್‌ನೆಸ್ ಹಾಗೂ ಜಿಮ್‌ಗಾಗಿ ಅಂಗಳಕ್ಕೆ ಬರುತ್ತಲೇ ಇರುತ್ತಾರೆ. ಅಲ್ಲದೆ ಪಿಚ್‌ಗೆ ತೆರಳಿ ನೋಡಿದ್ದು ವಿಶೇಷತೆ ಏನು ಇಲ್ಲ ಎಂದು ಪಿಚ್ ಕ್ಯೂರಿಯೆಟರ್ ಎಸ್‌ಬಿ ಸಿಂಗ್ ತಿಳಿಸಿದ್ದಾರೆ.

2 thoughts on “Cricket Ind vs Aus – ಪಿಚ್ ಕ್ಯೂರಿಯೆಟರ್ ಆದ ರಾಂಚಿ Rambo…

  • October 20, 2017 at 10:14 PM
    Permalink

    Your means of telling all in this piece of writing is truly pleasant, every one
    be able to simply understand it, Thanks a lot.

  • October 21, 2017 at 12:49 AM
    Permalink

    Thanks designed for sharing such a pleasant thought, post is good, thats why i have
    read it entirely

Comments are closed.

Social Media Auto Publish Powered By : XYZScripts.com