ಡೈರಿ ಪ್ರಕರಣ- ಎಸ್ಐಟಿಗೆ ವಹಿಸಲು ಹೈಕೋರ್ಟ್ ನಕಾರ!

ರಾಜ್ಯ ರಾಜಕೀಯದಲ್ಲಿ ಸುದ್ದಿ ಮಾಡುತ್ತಿರುವ ಗೋವಿಂದ ರಾಜು ಡೈರಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ಬಹಿಸುವಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾ ಮಾಡಿದೆ.

ಸಿಎಂ ಸಿದ್ದರಾಮಯ್ಯ ತನ್ನ ಮುಖ್ಯಮಂತ್ರಿ ಹುದ್ದೆಯನ್ನುಳಿಸಿಕೊಳ್ಳಲು ಕಾಂಗ್ರೆಸ್ ಹೈ ಕಮಾಂಡ್ ಗೆ ಒಂದು ಸಾವಿರ ಕೋಟಿ ರೂ ಲಂಚ ಪಡೆದಿದ್ದಾರೆ. ಈ ಬಗ್ಗೆ ಸಿಎಂ ಆಪ್ತ ಗೋವಿಂದರಾಜು ಡೈರಿಯಲ್ಲಿ ನಮೂದಾಗಿದೆ ಎಂದು ಹೇಳಿ ಕೆಲವೊಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದರು. ಇದನ್ನು ಎಸ್ಐಟಿ ತನಿಖೆಗೆ ವಹಿಸುವಂತೆ ಪತ್ರಕರ್ತ ಹಮ್ಮೀದ್ ಪಾಳ್ಯ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇದನ್ನು ಹೈಕೋರ್ಟ್ ವಜಾ ಮಾಡಿದೆ.

ಪಿಐಎಲ್ ಗೆ ಎಎಜಿ ಪೊನ್ನಣ್ಣ ಅವರು ಆಕ್ಷೇಪಿಸಿದ್ದು ಅರ್ಜಿಯನ್ನು  ವಜಾಗೊಳಿಸುವಂತೆ ಹೈಕೋರ್ಟ್ ಗೆ ಮನವಿ ಮಾಡಿ ದರು. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿ ವಜಾ ಗೊಳಿಸಿ, ಐಟಿ ಇಲಾಖೆಯಲ್ಲಿ ಪ್ರಕರಣ ಬಾಕಿ ಇರುವ ಹಿನ್ನೆಲೆ ಎಸ್ ಐಟಿ ತನಿಖೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

One thought on “ಡೈರಿ ಪ್ರಕರಣ- ಎಸ್ಐಟಿಗೆ ವಹಿಸಲು ಹೈಕೋರ್ಟ್ ನಕಾರ!

 • October 24, 2017 at 12:09 PM
  Permalink

  Excеllent bⅼog here! Also your site loaɗs
  up very fаst! What host are yoou using?Caan I get
  your affiliate link to yоuг host? I wish my site loaded
  up as quickly as yours lol http://sbobetscore.com/

Comments are closed.

Social Media Auto Publish Powered By : XYZScripts.com