ಮಹಿಳಾ ದಿನಾಚರಣೆ ಆಚರಿಸುವ ಅವಶ್ಯಕತೆ ಏನು ?

ಸಮಾಜದಲ್ಲಿ ಸಂಸಾರ ಒಂದು ಪ್ರಮುಖ ಘಟ್ಟ. ಸಂಸಾರವೆಂಬುದು ಒಂದು ರಥ ಎಂದುಕೊಂಡರೆ, ಅದರ ಎರಡು ಚಕ್ರ ಏರಿದ್ದಂತೆ ಅಲ್ಲಿ ಗಂಡು ಹೆಣ್ಣಿನ ಪಾತ್ರ ಪ್ರಮುಖವಾಗುತ್ತದೆ.

ಆದರೆ ಪುರುಷ ಪ್ರಧಾನ ಎಂದೇ ಕರೆಯಬಹುದಾದ ನಮ್ಮ ಸಮಾಜದಲ್ಲಿ ಗಂಡು ಹೆಣ್ಣನ್ನು ಗುರುತಿಸುವ ರೀತಿ ಬೇರೆಯೇ ಆಗಿದೆ. ಆಕೆ ಎಂದೆಂದಿಗೂ ಪುರುಷನ ದಾಸಿ, ಅವನ ಭೋಗದ ವಸ್ತು ಎನ್ನುವ ಭಾವನೆಯ ಹೆಚ್ಚು.

ಅದನ್ನೆ ವಚನಕಾರ ಜೇಡರ ದಾಸಿಮಯ್ಯ ಈ ರೀತಿ ಹೇಳುತ್ತಾರೆ

ಮೊಲೆ ಮೂಡಿ ಬಂದಡೆ ಹೆಣ್ಣೆಂಬರು ಮೀಸೆ ಮೂಡಿ ಬಂದಡೆ ಗಂಡೆಂಬರು

ನಡುವೆ ಸುಳಿವ ಆತ್ಮ  ಹೆಣ್ಣು ಅಲ್ಲ, ಗಂಡೂ ಅಲ್ಲ ರಾಣಾ ರಾಮನಾಥ.

ಹಾಗೆ ನೋಡಿದರೆ ನನ್ನಲ್ಲಿ ಒಮ್ಮೆಮ್ಮ ಒಂದು ಪ್ರಶ್ನೆ ಏಳುತ್ತದೆ ನಾವೇಕೆ ನಮ್ಮ ಅಸ್ಮಿತೆಯನ್ನು ಕಾಪಾಡಿಕೊಳ್ಳಲು ಹೋರಾಡಬೇಕು. ಆದರೆ  ಈ ಪ್ರಶ್ನೆ ಈಗಿನದೇ ಅಲ್ಲ

ಶತ-ಶತ ಮಾನಗಳಿಂದಲೂ ನಾಗರೀಕ ಮೆಟ್ಟಲನ್ನೇರಿದ ಮಾನವ ಭೌತಿತ-ಬೌದ್ಧಿಕ ಅಭಿವೃದ್ಧಿ

ಹೊಂದಿದ ಆದರೆ, ಸ್ತ್ರೀ ಪುರುಷನಿಂದ ರ್ಬೇಪಟ್ಟ ಅವಳು ಜೀವಿಸುವ ರೀತಿಗಳೆಲ್ಲಾ ಪುರುಷಾಧಿಸವಾದವು ಆದರೂ ಅವಳಿಗೂ ತನ್ನದೇ ಅನುಭವ ವಿಶಿಷ್ಟತೆಯನ್ನು ಪಡೆದುಕೊಳ್ಳುವುದು.

ಏನೆಂದರೆ ಅವಳನ್ನು  ಅತೀ ಕೀಳು  ಅತೀ ಶ್ರೇಷ್ಠ ಎಂಬಲ್ಲಿಗೆ ಅವಳನ್ನು ಭಾವುಕಲಾಗಿಸಿರಿನಿವರು

ಇದು ಈಗಿನ ಕಾಲಕ ಹೊರತಾಗಿಲ್ಲ ಏಕೆಂದರೆ ಸ್ತ್ರೀ ತಾನು ತನ್ನ ಪಡೆದುಕೊಳ್ಳುವ ನಿಟ್ಟಿನಲ್ಲಿ ಆರ್ಥಿಕವಾಗಿ

ಸಾಮಾಜಿಕವಾಗಿ ಸ್ವತಂತವಾಗಬಯಸಿದಳು ಏಕೆಂದರೆ

“She Wants her identity with an unique way” ಅದರ ಫಲವೇ ಅವಳು ತಾನು

ಪುರುಷನಿಗಿಂತ ಬೌದ್ಧಿಕವಾಗಿ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದನ್ನು ಸಾಧಿಸಿ ತೋರಿಸ ಹೊರಟಳು

 ಹೀಗಾಗಿ ಎಲ್ಲ ಕ್ಷೇತ್ರಗಳಲ್ಲೂ ಅವಳು ತನ್ನ ತನವನ್ನು ಮೆರೆದಳು. ಆದರೂ-ಆದರೂ ಅವಳು ಪುರುಷನಂತೆ ಎಲ್ಲ ಕ್ಷೇತ್ರಗಳಲ್ಲಿ ಸ್ವತಂತ್ರಗಳೇ ಎಂಬ ಪ್ರಶ್ನೆ ನಾನೊಬ್ಬ ಸ್ತ್ರೀಯಾಗಿ ಆಲೋಚಿಸಿದಾಗ……. ಬರುವ ಉತ್ತರ ಇಲ್ಲ ಎಂದೇ ಹೇಳಬಹುದು ಏಕೆಂದರೆ ಸ್ತ್ರೀಯನ್ನು ಸದಾ ಶುದ್ಧದ ನಿರ್ಬಂಧತೆಯಲ್ಲಿಯೇ ಕಟ್ಟಿಹಾಕಲಾಗಿದೆ. ತಾಯ್ತನ, ಪಾತಿವ್ರತ್ಯ, ಮಕ್ಕಳ ಲಾಲನೆ-ಪಾಲನಗಳೇ ಹೆಣ್ಣಿನ ಅತ್ಯಮೂಲ್ಯ ಮೌಲ್ಯಗಳೆಂದು, ತ್ಯಾಗ, ಸಹನೆ, ಆದರ್ಶ, ಸೃಷ್ಟಿ ಶಕ್ತಿಯ ಪ್ರತಿಬಿಂಬ ಎನ್ನುವಂತೆ ಬಿಂಬಿಸಲಾಗಿದೆ. ಅಂದರೆ ಆರ್ಥಿಕವಾಗಿ ಸಾಮಾಜಿಕವಾಗಿ ಸ್ವತಂತ್ರಗಳು, ಸಬಲಳೊ ಆಗಿದ್ದರೂ ಅವಳ ಸ್ಥಿತಿ ಹಿಂದಿನಗಿಂತ ಕಡಿಮೆ ಏನಿಲ್ಲ ಅವಳ ಜವಾಬ್ದಾರಿ ಇನ್ನೂ ಹೆಚ್ಚಿವೆ ಮನೆಯ ಒಳಗೂ ಹೊರಗು ಎರೆಡೆರಡು ಕಡೆ ಅವಳ ಜವಾಬ್ದಾರಿ.

ಪುರುಷರ ಹೊರಗಡೆ ದುಡಿದು ಮನೆಗೆ ಬರುವದಕ್ಕು ಸ್ತ್ರೀ ಹೊರಗಡೆ ದುಡಿದು ಮನೆಗೆ ಬರುವದಕ್ಕೂ ವಿಭಿನ್ನ ಅಂತರವಿದೆ ಹೊರಗಿನಿಂದ ಬಂ ಪುರುಷನಿಗೆ ಖಟಚಿ ಬೇಕು ಕಾಫಿ, ಟೀ ತಿಂಡಿಗಳು ಬೇಕು. ಆದರೆ ಅದೇ ಸ್ತ್ರೀ ತನ್ನ ಕೆಲಸದಿಂದ ಮನೆಗೆ ಬಂದ ಸ್ತ್ರೀಗೆ ಗಂಡ ಮಕ್ಕಳ ಅತ್ತೆ-ಮಾವ ಇವರಿಂದ ವಿವಿಧ ಬೇಡಿಕೆಗಳ ಮಹಾ ಪೂರವೇ ಇರಬಹುದು ಆದರೆ ಈ ಪರಿಸ್ಥಿಯನ್ನು ಎಲ್ಲ ಕಡೆಯೂ ಕಾಣುತ್ತೆದೆಂದಲ್ಲ ಹೆಂಡತಿಯ ಪರಿಸ್ಥಿತಿ ಅರಿತು ಅವಳ ಕೆಲಸದಲ್ಲಿ ಅರ್ಧದಷ್ಟನ್ನು ಹಂಚಿಕೊಳ್ಳುವವರಿದ್ದಾರೆ ಆದರೆ ಅವರ ಸಂಖ್ಯೆ 10% ರಷ್ಟು ಮಾತ್ರ ಅವರ ಸಂಖ್ಯೆ ಹೆಚ್ಚಲೆಂಬುದೇ ನನ್ನ ಆಶಯ ಇನ್ನೊಂದು ವರ್ಗದ ಸ್ತ್ರೀ ಗೃಹಿಣಿ ಇದೇನೆಂದರೆ ಞ-ಜಿಜಿ   ಇಲ್ಲದ, ರವಿವಾರ ರಜೆಯೂ ಇಲ್ಲದ, ಹಬ್ಬ ಹರಿದಿನಗಳಲ್ಲಿ ಇನ್ನಷ್ಟು ಕೆಲಸ ಹೆಚ್ಚಾಗುವ ತನ್ನ ವ್ಯಕ್ತಿತ್ವಕ್ಕೆ ಹೆಚ್ಚು ಒತ್ತುಕೊಡದೆ ಮನೆ, ಗಂಡ, ಮಕ್ಕಳ ಜವಾಬ್ದಾರಿ ಹೊತ್ತು ಸಾಗುವ ನಿವೃತ್ತಿಯ ಇಲ್ಲದ ಕೆಲಸ.

ಇಷ್ಟೇಲ್ಲಾ ಇದ್ದರೂ ಸ್ತ್ರೀ ಹುಟ್ಟಿದೊಡನೆ ಅಯ್ಯೂ ಎನ್ನುವವರ ಸಂಖ್ಯೆಯೆ ಹೆಚ್ಚು. ಅದನ್ನೆ 

ಸಂಚಿ ಹೊನ್ನಮ್ಮ ಈ ರೀತಿ ಹೇಳುತ್ತಾಳೆ.

ಪೆಣ್ಣಲ್ಲವೇ ತಮ್ಮನ್ನೆಲ್ಲ ಪಡೆದ ತಾಯಿ

ಪಣ್ಣಲ್ಲವೇ ನಮ್ಮನ್ನೆಲ್ಲ ಪೊಡೆದವಳು

ಪೆಣ್ಣು-ಪೆಣ್ಣೆಂದೇತಕೆ ಬೀಳಗಳಿವರು

ಕಣ್ಣು ಕಾಣದಗಾವಿಲರು

ಕುವರನಾದೊಡೆ ಬಂದ ಗುಣವೇನದರಿಂದ

ಕುವರಿಯಾದೊಡೆ ಕುಂದೇನು?

ಅದನ್ನೇ ಜನಪದದಲ್ಲಿ

ಹೆಣ್ಣು ಹುಟ್ಟಿದ ಮನಿ ಹೆಗ್ಗಣತ್ತಿದಾಂಗ

ಗಂಡಸು ಮಗ ಗಜ ಭೀಮ ಹುಟ್ಟದರೆ

ಚಿಲಕ ಚಿತ್ತಾರ ನಗತಾವ

ಆದರೆ ಅದೇ ಜನಪದ ಮಹಿಳೆ ತನ್ನ ಸ್ಥಿತಿಗೆ ಒಮ್ಮಮ್ಮೆ ಪ್ರತಿಭಟಿಸಿಯೂ ನಿಲ್ಲೂತ್ತಾಳೆ,

ಉಪ್ಪಿಲ್ದ ಊಟವ ಒಪ್ಪೊತ್ತಿಗುಣಲಾರೆ

ಒಪ್ಪದ ಸೀರೆ ಉಡಲಾರೆ  ಭಾವಯ್ಯ

ತಪ್ಪಿಲ್ದೆ ಪಾದ ಹಿಡಿಲಾರೆ

ಅಂಜಿಕೆ ಮಾತಿಗೆ ನಾನಂಜೂ ಮಗಳಲ್ಲ

ಚಿತ್ತಗಳಲ್ಲ ಚಡಿಯಲ್ಲ  ಇನ್ನೊಬ್ಬ

ಅಟ್ಟಾಸಿಗಂಜೂ ಮಗಳಲ್ಲ

ಕನ್ನ ಸಾಹಿತ್ಯ ಅಲ್ಲಲ್ಲಿ ನನ್ನ ಮೇಲೆ ಪ್ರಭಾವ ಬೀರಿದ ಸ್ತ್ರೀ ಪಾತ್ರಗಳ ಕುರಿತಿ ಹೇಳಬೇಕೆಂದರೆ, ಅಕ್ಕ-ಮಹಾದೇವಿ ಜಗತ್ತಿನಲ್ಲಿ ಎಲ್ಲೂ ಕಂಡು ಬರದ ವಿಶಿಷ್ಟ ಪಾತ್ರ ಸುಮಾರು 8 ಶತಮಾನಗಳಷ್ಟು ಹಿಂದೆಯೇ ಪುರುಷನ ಅಧಿಕಾರವನ್ನು ನಿರ್ಭಡೆಯಿಂದ ಕಿತ್ತೆಸೆದು ಸಮಾಜವನ್ನೇ ಪ್ರಶ್ನಿಸುತ್ತ ಹೀಗೆನ್ನುತ್ತಾಳೆ.

ಹೆಣ್ಣು-ಹೆಣ್ಣಾದಡೆ ಗಂಡಿನ ಸೂತಕ

ಗಂಡು ಗಂಡಾದಡೆ ಹೆಣ್ಣನ ಸೂತಕ

ಮನಸ ಸೂತಕ ಹಿಂಗಿದಡೆ ತನುವಿನ

ಸೂತಕಕೈ ತೆರಹುಂಟೆ ?

ಅಯ್ಯೊ ಮೊದಲಿಲ್ಲದ ಸೂತಕಕ್ಕೆ ಮರುಳಾಯುತ್ತ

ಎನ್ನದೇವ ಚನ್ನ ಮಲ್ಲಿಕಾರ್ಜುನನೆಂಬ ಗುರುವಿಂಗೆ

ಜಗವೆಲ್ಲಾ ಹೆಣ್ಣು ನೋಡಾ ಅಯ್ಯೊ

ನಾವಿಲ್ಲಿ ಸ್ತ್ರೀಯರು ಸಮಾನತೆ-ಸಮಾನತೆ ಬೇಕು ಎನ್ನುತ್ತೇವೆ ಹಾಗಾದರೆ ಏನಿದು ಸಮಾನತೆ ಸಮಾನತೆ ಎಂದರೆ ಸ್ತ್ರೀಯ ಪುರುಷನ ಸ್ಥಾನವನ್ನು ಆಕ್ರಮಿಸುವುದು ಎಂದರ್ಥವಲ್ಲ ಬದಲಾಗಿ ಸ್ತ್ರೀಯು ತನ್ನ ಸ್ವಂತ ಅನುಭವಗಳನ್ನು ತನ್ನದೇ ದೃಷ್ಠಿಕೊನದಿಂದ ನೋಡುವದು ಸಮಾಜದಲ್ಲಿ ಶ್ರಿ ಪುರುಷರಿಬ್ಬರದೂ ಸಮಾನ ಪಾತ್ರವಿದ್ದು ಅವಳನ್ನು ಎರಡನೇ ದರ್ಜೆಗೆ ಕೆಳಗಿಳಿಸುವುದನ್ನು ಸ್ತ್ರೀಯು ನಿರಾಕರಸಿ ಅವಳಿಗೆ ಮಹತ್ವಸ್ಥಾನ ನೀಡಬೇಕಾಗಿದೆ. ಜಗತ್ತು ಬದಲಾದಂತೆ ಮಾನವನ ಮನಸ್ಥಿತಿ ಬದಲಾಗುತ್ತದೆ. ಸ್ತ್ರೀಯ ಬಗ್ಗೆ ದೃಷ್ಠಿಕೋನ ಬದಲಾಗುತ್ತದೆ. ಕೆಲ ಪುರುಷರು ತಮ್ಮ ಜೀವನದಲ್ಲಿ ಸ್ತ್ರೀಗೆ ಇನ್ನಿಲ್ಲದ ಪ್ರೋತ್ಸಾ ನೀಡಿ ಸ್ಪೂರ್ತಿಯಾಗಿರುತ್ತಾರೆ.

ಮಹಿಳೆಯ ಅಸ್ಮಿತೆ, ಅಸ್ತಿತ್ವಗಳನ್ನು ಗುರುತಿಸುವ ಅವಳ ಬದುಕನ್ನು ಸುಗಮವಾಗಿಸುವ ದಿಸೆಯಲ್ಲಿ ಚಿಂತನೆ ನಡೆಸುವ ಮಾಧ್ಯಮ ಅವಶ್ಯಕ. ಏಕೆಂದರೆ ಈವರಿಗೂ ಈ ಪುರುಷ ಪ್ರಧಾನ ಸಮಾಜಕ್ಕೆ ಮಹಿಳೆಯನ್ನು ದುಡಿಸಿಕೊಳ್ಳುವದು ಹೀಗೆ ಎಂಬುದು ಚಿಂತೆಯಾಗಿದೆಯೇ ಹೊರತು ಅವಳ ಅಗತ್ಯಗಳನ್ನು ಗಮನಿಸಬೇಕೆಂದು ಅನಿಸಿದ್ದಿಲ್ಲ ಇಂದಿನ ಜಾಗ್ರತ ಮಹಿಳೆ ತನ್ನ ವರ್ತಮಾನ, ಭವಿಷ್ಯಗಳನ್ನು ತಿದ್ದಿ ರೂಪಿಸುವ ಸಾಮರ್ಥ್ಯವನ್ನು ಕ್ರಮೇಣ ಪಡೆಯುತ್ತಿದ್ದಾಳೆ. ಇನ್ನು ಪಡೆಯಬೇಕಾಗಿದೆ.

4 thoughts on “ಮಹಿಳಾ ದಿನಾಚರಣೆ ಆಚರಿಸುವ ಅವಶ್ಯಕತೆ ಏನು ?

 • October 20, 2017 at 6:05 PM
  Permalink

  I’m gone to convey my little brother, that he should also visit this weblog on regular basis to get updated from most recent news update.|

 • October 20, 2017 at 11:54 PM
  Permalink

  This design is wicked! You most certainly know how to keep a reader entertained. Between your wit and your videos, I was almost moved to start my own blog (well, almost…HaHa!) Fantastic job. I really loved what you had to say, and more than that, how you presented it. Too cool!|

 • October 24, 2017 at 1:50 PM
  Permalink

  Thankfulness to my father who informed me on the topic of this web site, this web site is really amazing.

 • October 24, 2017 at 4:25 PM
  Permalink

  It’s a shame you don’t have a donate button!
  I’d certainly donate to this brilliant blog! I suppose for now i’ll settle for bookmarking and adding
  your RSS feed to my Google account. I look forward to new updates and will talk about this site with my Facebook group.
  Chat soon!

Comments are closed.

Social Media Auto Publish Powered By : XYZScripts.com