Cricket Ind vs Aus 2test – ಭಾರತ ತಲಪುತ್ತಾ ಸವಾಲಿನ ‘ಬಾರ್ಡರ್

ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ ಮನಮೋಹಕ ಜೊತೆಯಾಟದ ನೆರವಿನಿಂದ ಭಾರತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಗೆಲುವಿನ ಬೀಜ ಬಿತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಸೋಮವಾರ, ಕಲಾತ್ಮಕ ಆಟಗಾರರಾದ ರಹಾನೆ-ಪೂಜಾರ ಆಟಕ್ಕೆ ಆಸೀಸ್ ಬೌಲರ್‌ಗಳು ಕಕ್ಕಾಬಿಕ್ಕಿಯಾಗಿದ್ದಾರೆ. ೪ ವಿಕೆಟ್‌ಗೆ ೧೨೦ ರನ್ ಕಳೆದುಕೊಂಡ ಭಾರತ ತಂಡವನ್ನು ಬೇಗನೆ ಕಟ್ಟಿ ಹಾಕಿ ಸುಲಭ ಗೆಲುವು ದಾಖಲಿಸಬೇಕೆಂಬ ಸ್ಮಿತ್ ಪಡೆಯ ಆಸೆಗೆ ತಣ್ಣೀರು ಎರಚಿದ್ದಾರೆ. ಈ ಜೋಡಿ ಈ ಸರಣಿಯಲ್ಲೇ (ಅಜೇಯ ೯೩ ರನ್) ಗರಿಷ್ಠ ರನ್‌ಗಳ ಜೊತೆಯಾಟವನ್ನು ನೀಡಿ ತಂಡಕ್ಕೆ ನೆರವಾಯಿತು.
೬ ವಿಕೆಟ್‌ಗೆ ೨೩೭ ರನ್‌ಗಳಿಂದ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ೨೭೬ ರನ್‌ಗಳಿಗೆ ಸರ್ವ ಪತನ ಹೊಂದಿತು. ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ ದಿನದಾಟದ ಅಂತ್ಯಕ್ಕೆ ೭೨ ಓವರ್‌ಗಳಲ್ಲಿ ೩ ವಿಕೆಟ್‌ಗೆ ೨೧೩ ರನ್ ಸೇರಿಸಿದೆ. ಪೂಜಾರ (೭೯), ರಹಾನೆ (೪೦) ಮಂಗಳವಾರಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಎರಡನೇ ಇನಿಂಗ್ಸ್‌ನಲ್ಲೂ ಚೆನ್ನೈನ ಅಭಿನವ್ ಮುಕುಂದ್ ನಿರಾಸೆ ಅನುಭವಿಸಿದರು. ಮೂರನೇ ದಿನ ತವರಿನ ಅಂಗಳದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ ರಾಹುಲ್, ಅಭಿಮಾನಿಗಳನ್ನು ರಂಜಿಸಿದರು. ಅಲ್ಲದೆ ಅರ್ಧಶತಕ ಬಾರಿಸಿ ಭಾರತಕ್ಕೆ ಆಧಾರವಾದರು. ಈ ಮೂಲಕ ಬೆಂಗಳೂರಿನ ಅಂಗಳದಲ್ಲಿ ಎರಡೂ ಇನಿಂಗ್ಸ್‌ಗಳಲ್ಲೂ ಅರ್ಧಶತಕ ಬಾರಿಸಿದ ಭಾರತದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ರಾಹುಲ್  ಪಾತ್ರರಾದರು. ಇದಕ್ಕೂ ಮೊದಲು ಅಜಯ್ ಜಡೇಜಾ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು.
ಪೂಜಾರ ೧೭೩ ಎಸೆತಗಳಲ್ಲಿ ೬ ಬೌಂಡರಿ ಸೇರಿದಂತೆ ೭೯ ರನ್ ಬಾರಿಸಿದರೆ, ರಹಾನೆ ೩ ಬೌಂಡರಿ ಸೇರಿದಂತೆ ೪೦ ರನ್ ಕಲೆ ಹಾಕಿದ್ದಾರೆ.
ಇದಕ್ಕೂ ಮೊದಲು ಇನಿಂಗ್ಸ್ ಮುಂದುವರಿಸಿದ  ಆಸ್ಟ್ರೇಲಿಯಾ ಪರ ಸಮಯೋಚಿತ ಬ್ಯಾಟಿಂಗ್ ಮಾಡುವ ಸೂಚನೆ ನೀಡಿದ್ದ ಮಿಷೆಲ್ ಸ್ಟಾರ್ಕ್ (೨೬) ಅಶ್ವಿನ್ ಅವರ ಎಸೆತದಲ್ಲಿ ಜಡೇಜಾಗೆ ಕ್ಯಾಚ್ ನೀಡಿದರು. ಇವರ ಬಳಿಕ ಮ್ಯಾಥ್ಯೂ ವೇಡ್ (೪೦) ಸಹ ಪೆವಿಲಿಯನ್ ಸೇರಿದರು. ಕೆಳ ಕ್ರಮಾಂಕದ ಸ್ಟೀವ್ ಓಕೆಫ್ (೪), ನಾಥನ್ ಲಿಯಾನ್ (೦), ಜೋಶ್ ಹ್ಯಾಜಲ್‌ವುಡ್ (೧), ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಜಡೇಜಾ ಮೂರನೇ ಸ್ಮಿತ್ ಪಡೆಯ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು. ಟೆಸ್ಟ್ ವೃತ್ತಿ ಜೀವನದಲ್ಲಿ ಇವರು ಮೂರನೇ ಬಾರಿ ಆರು ವಿಕೆಟ್ ಪಡೆದರು. ಇದಕ್ಕೂ ಈ ಅಂಗಳದಲ್ಲಿ ಆರು ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರರಾದರು.

7 thoughts on “Cricket Ind vs Aus 2test – ಭಾರತ ತಲಪುತ್ತಾ ಸವಾಲಿನ ‘ಬಾರ್ಡರ್

 • October 16, 2017 at 4:49 PM
  Permalink

  I was talking to a buddy of mine around this info and also about omega xl consumer reviews as well. I feel you made a lot of very good points on this page, we’re also looking forward to read more information from you.

 • October 20, 2017 at 11:18 PM
  Permalink

  If some one needs expert view about running a blog afterward i propose him/her to pay a
  visit this blog, Keep up the fastidious work.

 • October 20, 2017 at 11:47 PM
  Permalink

  I’m impressed, I must say. Seldom do I come across a blog that’s both equally educative and entertaining, and let me tell
  you, you have hit the nail on the head. The problem is something that too few men and women are speaking intelligently about.
  Now i’m very happy I stumbled across this during my hunt
  for something concerning this.

 • October 21, 2017 at 2:19 AM
  Permalink

  Howdy excellent blog! Does running a blog such as this take a great deal
  of work? I have very little expertise in programming but I was hoping to start my own blog soon. Anyway, if you have any recommendations or tips for new blog owners please share.
  I understand this is off topic nevertheless I simply wanted to
  ask. Kudos!

 • October 21, 2017 at 4:28 AM
  Permalink

  If some one desires expert view about running a blog afterward i suggest him/her to
  pay a visit this weblog, Keep up the nice job.

 • October 24, 2017 at 12:27 PM
  Permalink

  Greetings! Very helpful advice within this post! It’s the little changes that will make the most significant changes.
  Many thanks for sharing!

Comments are closed.