All England Badminton – ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಭಾರತದ ಭರವಸೆ

ಲಂಡನ್:  ಪ್ರತಿಷ್ಠಿತ ಬ್ಯಾಡ್ಮಿಂಟನ್ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ನಲ್ಲಿ  ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಭಾರತದ ಭರವಸೆಯಾಗಿದ್ದಾರೆ.  ಮಂಗಳವಾರದಿಂದ ಆರಂಭವಾಗಲಿರುವ  ಟೂರ್ನಿಯಲ್ಲಿ  ವಿಶ್ವದ ಶ್ರೇಷ್ಠ ಆಟಗಾರರು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿದ್ದಾರೆ.
ಒಲಿಂಪಿಕ್‌ನಲ್ಲಿ ಪದಕ ಪಡೆದ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಸೂಪರ್ ಸಿರೀಸ್‌ನಲ್ಲಿ ಭಾಗವಹಿಸುತ್ತಿರುವ ಭಾರತದ ಪ್ರಮುಖ ಆಟಗಾರ್ತಿಯರೆನಿಸಿದ್ದು, ಪ್ರಶಸ್ತಿ ಗೆಲ್ಲುವ ಮೂಲಕ ನೂತನ ಇತಿಹಾಸ ನಿರ್ಮಿಸುವರೇ ಎಂಬುದನ್ನು ಕಾದು ನೋಡಬೇಕಿದೆ.
೧೯೮೦ ರಲ್ಲಿ ಕನ್ನಡ ನಾಡಿನ ಹೆಮ್ಮೆಯ ಪುತ್ರ ಪ್ರಕಾಶ ಪಡುಕೋಣಿ ಮೊಟ್ಟ ಮೊದಲ ಬಾರಿ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನ ಸಿಂಗಲ್ಸ್ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಪ್ರತಿಷ್ಠಿತ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದಾದ ಎರಡು ದಶಕಗಳ ಕಾಲ ಯಾವ ಭಾರತೀಯ ಆಟಗಾರರು ಆಲ್ ಇಂಗ್ಲೆಂಡ್‌ನಲ್ಲಿ ಮಿಂಚಲಿಲ್ಲ. ೨೦೦೧ ರಲ್ಲಿ ಪುಲ್ಲೆಲ್ ಗೋಪಿಚಂದ್ ಪ್ರಶಸ್ತಿ ಬಾಚಿಕೊಳ್ಳುವ ಮೂಲಕ ಮತ್ತೋಮ್ಮೆ  ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದರು.
ಆ ಮಾತಿಗೆ ಈಗ ೧೬ ವರ್ಷ ಉರುಳಿವೆ. ಈ ಬಾರಿಯಾದರೂ ಭಾರತೀಯ ಸ್ಪರ್ಧಿಗಳು ಮಿಂಚಿ ಭಾರತಕ್ಕೆ  ಕೀರ್ತಿ ತರುವರೇ ಎಂಬ ಪ್ರಶ್ನೆ ಈಗ ಎದುರಾಗಿದೆ. ೨೦೧೫ ರಲ್ಲಿ ಸೈನಾ ನೆಹ್ವಾಲ್, ಮಹಿಳಾ ವಿಭಾಗದ ಸಿಂಗಲ್ಸ್‌ನ ಫೈನಲ್ಸ್ ಹಂತ ಕಂಡಿದ್ದರು. ಆದರೆ ಪ್ರಶಸ್ತಿ ಹೋರಾಟದಲ್ಲಿ ಸ್ಪೇನ್‌ನ ಕಾರೋಲಿನ್ ಮರಿನ್ ಕೈಯಲ್ಲಿ ಸೋಲು ಅನುಭವಿಸಿದ ಸೈನಾ ರನ್ನರ್ ಅಪ್‌ಗೆ ತೃಪ್ತಿಪಟ್ಟಿದ್ದರು.
ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸೈನಾ, ಮೊಣಕಾಲು ನೋವಿಗಾಗಿ ಶಸ್ರ್ತ ಚಿಕಿತ್ಸೆಗೆ ಒಳಗಾಗಿ ಸಧ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಈಗಾಗಲೇ ಬ್ಯಾಡ್ಮಿಂಟನ್ ಅಂಕಣಕ್ಕೆ ಇಳಿದಿದ್ದಾರೆ.
ಸೈನಾ ಅಲ್ಲದೇ ರಿಯೋದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ  ಪಿ.ವಿ.ಸಿಂಧು ಕೂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ಕೆ. ಶ್ರೀಕಾಂತ್, ಎರಡು ಬಾರಿ ಡಚ್ ಓಪನ್ ವಿಜೇತ ಅಜಯ್ ಜೈರಾಮ್ ಹಾಗೂ ಸ್ಪಿಸ್ ಓಪನ್ ಚಾಂಪಿಯನ್ ಎಚ್.ಎಸ್.ಪ್ರಣಯ್ ಸೆಣಸಾಟ ನಡೆಸಲಿದ್ದಾರೆ.
ವಿಶ್ವ ರ‍್ಯಾಂಕಿಂಗ್‌ನಲ್ಲಿ ೧೩ ನೇ ಸ್ಥಾನದಲ್ಲಿರುವ ಪ್ರಣವ್ ಚೋಪ್ರಾ ಹಾಗೂ ಎನ್.ಸಿಕ್ಕಿ ರೆಡ್ಡಿ ಹಾಗೂ ಮನು ಅತ್ರಿ ಹಾಗೂ ಬಿ ಸುಮೀತ್ ರೆಡ್ಡಿ ಜೋಡಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಡಬಲ್ಸ್‌ನಲ್ಲಿ ಹೋರಾಟ ನಡೆಸಲಿದ್ದಾರೆ.

4 thoughts on “All England Badminton – ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಭಾರತದ ಭರವಸೆ

 • October 20, 2017 at 7:05 PM
  Permalink

  I couldn’t resist commenting. Exceptionally well written!

 • October 21, 2017 at 4:31 AM
  Permalink

  If you wish for to grow your know-how only keep visiting this web page and be updated with the most up-to-date news posted here.

 • October 25, 2017 at 9:09 AM
  Permalink

  Pretty! This was an extremely wonderful post.
  Thanks for providing this information.

Comments are closed.