ಹಣ ನೀಡದ ಲಾರಿ ಚಾಲಕನಿಗೆ ಟ್ರಾಫಿಕ್ ಪೊಲೀಸ್ ಮಾಡಿದ್ದೇನು?

ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಟ್ರಾಫಿಕ್ ನ ಪೊಲೀಸ್ ಪೇದೆಯೊಬ್ಬ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

ನಗರದ ಕನಕ ದುರ್ಗಮ್ಮ ದೇವಸ್ಥಾನ ದ ವೃತ್ತದ ಬಳಿ  ಮಾಮೂಲಿ ಹಣ ನೀಡಲಿಲ್ಲ ಎಂದು ಆಂಧ್ರ ಪ್ರದೇಶದ ಲಾರಿ ಚಾಲಕನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ ನಡೆಸಿದ್ದಾರೆ. ಬಳ್ಳಾರಿಯಲ್ಲಿ ಸ್ಟೀಲ್ ಪೈಪ್ ತುಂಬಿಕೊಂಡು ಚೆನ್ನೈಗೆ  ಕಡಪದ ಕಡೆಗೆ ಹೊರಟಿದ್ದ ಚಾಲಕ ಖಾದರ್ ಬಾಷಾ ಚಲಾಯಿಸುತ್ತಿದ್ದ ಲಾರಿಯನ್ನು ತಡೆದ ಟ್ರಾಫಿಕ್ ಪೊಲೀಸ್ ಚಾಲಕನನ್ನು ಥಳಿಸಿದ್ದಾರೆ.

ಟ್ರಾಫಿಕ್ ಪೇದೆ ಪ್ರಕಾಶ್ ಮೈನಳ್ಳಿ ಅವರು ಲಾರಿಯನ್ನು ತಡೆ ಹಾಕಿ,  ಹೀಗೆ ಬರಬಾರದೆಂದು ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಎಲ್ಲಾ ದಾಖಲೆ ಸರಿಯಿದ್ದರೂ ನೂರು ರೂಪಾಯಿ ಕೊಡು ಎಂದಿದ್ದಾರೆ. ಇದಕ್ಕೆ ಚಾಲಕ ದಾಖಲೆಗಳೆಲ್ಲಾ ಸರಿ ಇದೆ ಎಂದು ಹಣ ನೀಡಲು ನಿರಾಕರಿಸಿದ್ದರಿಂದ ಪೇದೆ ಬೈದಿದ್ದಾನೆ ಅದಕ್ಕೂ ಚಾಲಕ ಬಗ್ಗದಿರುವಾಗ ಹೊಡೆದಿದ್ದಾರೆ.

ಲಾರಿ ಕೀ ಮತ್ತು ಮೊಬೈಲ್ ಅನ್ನು ಪೇದೆ ಕಸಿದಿದ್ದಾನೆ. ಇದರಿಂದ ಲಾರಿ ಚಾಲಕ ದೇವಸ್ಥಾನ ಬಳಿಯೇ ಲಾರಿ ನಿಲ್ಲಿಸಿ   ಟ್ರಾಫಿಕ್ ಪೊಲೀಸರ ವಿರುದ್ದ ಆಳುತ್ತ ತನಾಗದ ನೋವನ್ನು ಹೇಳುತ್ತ ಆಕ್ರೋಶ ವ್ಯಕ್ತ ಪಡಿಸಿದ. ಇದಕ್ಕೆ ಆಟೋ ಚಾಲಕರು. ಸಾರ್ವಜನಿಕರು ಲಾರಿ ಚಾಲಕನಿಗೆ ಬೆಂಬಲಿಸಿ ಗಲಾಟೆಗೆ ಇಳಿದರು. ಜನ ಜಮಾಯಿಸಿದಗದರಿಂದ ಹೆಚ್ಚಿನ ಪೊಲೀಸರು ಬಂದು ಜನರನ್ನು ನಿಯಂತ್ರಿಸಿದರು. ಜನ ಪೊಲೀಸರ ದೌರ್ಜನ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಹಿರಿಯ ಪೊಲೀಸರು ಸಂದಾನ  ನಡೆಸಿದರು. ಈ ವೇಳೆ ಪೇದೆ ಪ್ರಕಾಶ ಹೊಡೆದಿಲ್ಲ ಎಂದು ತಿಳಿಸಿದರು. ಕೊನೆಗೆ ಎಲ್ಲರೂ ಸೇರಿ ಲಾರಿಯನ್ನು ಆಂಧ್ರ ಪ್ರದೇಶಕ್ಕೆ ಕಳುಸಿಕೊಟ್ಟರು.

Comments are closed.