ಮದುವೆಯಾಗದೆ ಅಪ್ಪನಾದ ಕರಣ್ ಜೋಹರ್!

ಬಾಲಿವುಡ್ ನ ಖ್ಯಾತ ನಿರ್ದೇಶಕ ನಿರ್ಮಾಪಕ ಕರಣ್ ಜೋಹರ್ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಮದುವೆಗೆ ಮೊದಲೇ ಅದೇಗಪ್ಪಾ ಮಕ್ಕಳು ಆಯ್ತು ಅಂತಾ ಆಶ್ಚರ್ಯ ಪಡ್ತಿದೀರಾ…..

 

ಕರಣ್ ಜೋಹರ್ ಮದುವೆಯಾಗದಿದ್ದರೂ ಬಾಡಿಗೆ ತಾಯಿಯ ಸಹಾಯ ಪಡೆದು ಅವಳಿ ಮಕ್ಕಳ ತಂದೆಯ ಪಟ್ಟವನ್ನು ಪಡೆದಿದ್ದಾರೆ. ಬಾಡಿಗೆ ತಾಯಿಯು ಒಂದು ಗಂಡು ಮತ್ತು ಹೆಣ್ಣು ಮಗು ಜನ್ಮ ನೀಡಿದ್ದಾರೆ. ಡಾ.ಜತಿನ್ ಷಾ ನೇತೃತ್ವದಲ್ಲಿ ಎರಡು ಮಕ್ಕಳು ಜನಿಸಿದ್ದು ಎರಡೂ ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ವಿದೇಶಿ ಪ್ರವಾಸದಲ್ಲಿದ್ದ ಕರಣ್ ಅವರಿಗೆ ಮಾದ್ಯಮದಲ್ಲಿ ತಂದೆಯಾದ ವಿಚಾರ ತಿಳಿದ ಕೂಡಲೇ, ಪ್ರತಿಕ್ರಿಯೆ ನೀಡಿದ್ದು, ನನ್ನ ಜೀವನದಲ್ಲಿ ಎರಡು ಹೊಸ ಜೀವಗಳು ಪ್ರವೇಶ ಮಾಡಿದ್ದು ನನ್ನ ಸಂತಸಕ್ಕೆ ಪಾರವೇ ಇಲ್ಲದಾಗಿದೆ. ಹೆಣ್ಣು ಮಗುವಿಗೆ ರೂಹಿ ಎಂದು ಗಂಡು ಮಗುವಿಗೆ ತಂದೆಯ ಹೆಸರಾದ ಯಶ್ ಎಂದು ನಾಮಕರಣ ಮಾಡಲಾಗಿದ್ದು, ಅವರ ತಂದೆಯ ಹೆಸರು ಯಶ್ ಜೋಹರ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಖಾಲಿಯಾಗಿದ್ದ ನನ್ನ ಜೀವನದಲ್ಲಿ ಸಂತಸ ತುಂಬಲು ಬಂದ ಈ ಮಕ್ಕಳ ಜವಾಬ್ದಾರಿ ಹೊರಲು ನಾನು ಮಾನಸಿಕ, ಆರ್ಥಿಕ ಮತ್ತು ದೈಹಿಕವಾಗಿ ಸಿದ್ಧನಾಗಿದ್ದೇನೆ. ಇನ್ಮುಂದೆ ನನ್ನ ಮೊದಲ ಆದ್ಯತೆ ಮಕ್ಕಳಿಗಾಗಿ. ಪ್ರವಾಸ, ಸಾಮಾಜಿಕ ಬದ್ದತೆ, ಕೆಲಸ ಹಿಂದಕ್ಕೆ ಸರಿಯಲಿದೆ ಎಂದಿದ್ದಾರೆ.

ಇದೇ ವೇಳೆ ಪಿತೃತ್ವದ ಕೊಡುಗೆ ನೀಡಿದ ಬಾಡಿಗೆ ತಾಯಿಯನ್ನು ಸ್ಮರಿಸಿದ ಕರಣ್ ಜೀವನ ಪೂರ್ತಿ ಅವರಿಗೆ ಅಬಾರಿಯಾಗಿರುತ್ತೇನೆ ಎಂದು ತಿಳಿಸಿದ್ದಾರೆ. ಈ ಮೊದಲು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಪತ್ನಿ ಗೌರಿ, ಮಿಸ್ಟರ್ ಪರ್ಪೆಕ್ಷನಿಸ್ಟ್ ಅಮಿರ್ ಖಾನ್ ಮತ್ತು ಕಿರಣ್ ರಾವ್ ಬಾಡಿಗೆ ತಾಯ್ತನದಿಂದ ಮಗುವನ್ನು ಪಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಇದೇ ವೇಳೆ ತುಷಾರ್ ಕಪೂರ್ ಸಿಂಗಲ್ ಪೇರೆಂಟ್ ಆಗಿ ಗಂಡು ಮಗುವಿನ ತಂದೆಯಾಗಿದ್ದಾರೆ.

One thought on “ಮದುವೆಯಾಗದೆ ಅಪ್ಪನಾದ ಕರಣ್ ಜೋಹರ್!

 • October 24, 2017 at 1:33 PM
  Permalink

  Tһanks for your personal marvelous posting! I seriousⅼy enjoyеd
  reаding it, you could be a greatt author. I will make surе tto booҝmark your blog and will eventually comе back
  in the foreseeable futսre. I want to encourage that yoou continue you
  great posts, have a nice evening! http://produktiensherbal.com/

Comments are closed.

Social Media Auto Publish Powered By : XYZScripts.com