ಸಖೀಗೀತ 9- ನನ್ನೊಳಗಿನ ಹೆಣ್ಣನ್ನು ಹುಡುಕುತ್ತಾ……..

ಹೆಣ್ಣಾಗಿರುವುದರಿಂದಲೇ ಇರುವ ಖುಷಿ, ಸಂಭ್ರಮಗಳು ಇವೆಯಾ? ಎಂಬ ಪ್ರಶ್ನೆ ಎದುರಾದಾಗ ನಿಜಕ್ಕೂ ತಬ್ಬಿಬ್ಬಾದೆ. ಹೆಣ್ಣಿನ ಕುರಿತು ಎಷ್ಟೊಂದು ಮಾತುಗಳು, ವಾದಗಳು, ಸಿದ್ಧಾಂತಗಳು! ಅಂತರ್ ಶಿಸ್ತೀಯ, ಬಹುಶಿಸ್ತೀಯ ಅಧ್ಯಯನಗಳು…. ಇವೆಲ್ಲದರ ಜೊತೆಗೆ ಜೈವಿಕ ಹೆಣ್ಣು, ಸಾಂಸ್ಕತಿಕ ರಚನೆಯಾದ ‘ಹೆಣ್ತನ’, ಸಾಮಾಜಿಕ ಅರಿವಿನಲ್ಲಿ ಮೂಡಿದ ಮಹಿಳೆ ಎಂಬ ಪರಿಕಲ್ಪನೆ…. ಅದರಲ್ಲೂ, ಮೇಲ್ವರ್ಗದ, ಮೇಲ್ಜಾತಿಯ ಮಹಿಳೆ, ದಲಿತ ಮಹಿಳೆ, ಮುಸ್ಲಿಂ ಮಹಿಳೆ, ಶೋಷಕ ಮಹಿಳೆ, ಶೋಷಿತ ಮಹಿಳೆ, ತೃತೀಯ ಜಗತ್ತಿನ ಮಹಿಳೆ, ಹುಸಿ ಬೌದ್ಧಿಕತೆಯ ಸುಶಿಕ್ಷಿತ ಮದ್ಯಮವರ್ಗದ ಮಹಿಳೆ… ಒಂದೇ ಎರಡೇ?! ಈ ಎಲ್ಲ ರಚನೆಗಳಲ್ಲಿ ಹುದುಗಿಹೋದ ನನ್ನೊಳಗಿನ ನಿಜದ ಹೆಣ್ಣಿಗೆ ಏನನಿಸುತ್ತಿದೆಯೆಂದು ಕೇಳಿಕೊಂಡೇ ಇಲ್ಲವಲ್ಲಾ ಎಂದು ಕಳವಳವಾಯ್ತು.

ನಾನು ಹೆಣ್ಣೆಂಬ ಅರಿವು ಯಾವಾಗ ಉಂಟಾಯ್ತೆಂದು ಪ್ರಾಮಾಣಿಕವಾಗಿ ಯೋಚಿಸಲು ತೊಡಗುತ್ತೇನೆ. ಬಾಲ್ಯದಿಂದಲೂ ಇಂಥ ಅರಿವಾಗಲು ಅವಕಾಶವೇ ಆಗದಂತೆ ‘ಹೆಣ್ಣಾಗಲು’ ನಿರಂತರ ತರಬೇತಿ ನಡೆದಿತ್ತು.  ಜಗುಲಿಯಲ್ಲಿ ಬಂದು ಕೂರಬಾರದು, ದೊಡ್ಡದಾಗಿ ನಗಬಾರದು, ಪ್ರಶ್ನೆ ಕೇಳಬಾರದು, ತಿರುಗುತ್ತರ ನೀಡಬಾರದು ಇಂಥ ನೂರಾರು ‘ಬಾರದು’, ‘ಕೂಡದು’ ಎಂಬ ನಿಷೇಧಗಳ ಚೌಕಟ್ಟು. ಅಡುಗೆ ಮಾಡುವ, ರಂಗೋಲಿ ರಚಿಸುವ, ಕಸೂತಿ ಮಾಡುವ, ಹೂಮಾಲೆ ಕಟ್ಟುವ ನಾಜೂಕು ಕಲಿಯಬೇಕು ಎಂಬ ಉಪದೇಶ. ಮಡಿ, ಮೈಲಿಗೆ ಪಾಲಿಸುತ್ತ ಸಂಸ್ಕತಿಯನ್ನು ಮುಂದುವರೆಸುವ ಜವಾಬ್ದಾರಿಯ ಬೋಧನೆ. ಕನ್ನಡಿ ಮುಂದೆ ನಿಲ್ಲುವ ಹಂಬಲವಾದರೂ ಭಯ! ಕನ್ನಡಿ ಮುಂದೆ ನಿಂತರೆ, ಕಣ್ಣಿಗೆ ಕಾಡಿಗೆ ಹಚ್ಚಿದರೆ ‘ಸೂಳೆ’ಯರ ಥರಾ ಎಂದು ಅಮ್ಮ ಚಿವುಟಿ ಹೇಳಿದ್ದು ಇನ್ನೂ ಥರಥರ. ದೇಹವನ್ನು ಪ್ರೀತಿಸುವುದು ಅಪರಾಧವೆಂಬ ಭಾವ ಬಲಿಯುತ್ತ ‘ಹೆಣ್ಣಾಗುವ’ ಘಟನೆಯ ಬಗ್ಗೆ ಅವ್ಯಕ್ತ ಭೀತಿ ತುಂಬಿತ್ತು.

ಮನೆಯ ಹೊಸಿಲು ದಾಟಿ ಆಚೆ ಜಿಗಿದರೆ ಇಂಥ ಹಳವಂಡಗಳೊಂದೂ ಇಲ್ಲ. ತೆರೆದ ಬಾನು, ಚಲಿಸುವ ಮೋಡ, ಉನ್ಮಾದ ತುಂಬಿ ಧುಮುಕುವ ತೊರೆ, ಜಿಗಿಯುವ ಜೀವಪ್ರಪಂಚ… ಬೆತ್ತಲಾಗಿ ಮೀಯುವಾಗ, ಹುಣಸೆ ಬೀಜಕ್ಕಾಗಿ ಗಂಡುಹುಡುಗರೊಂದಿಗೆ ಸೆಣಸುವಾಗ ಹೆಣ್ಣೆಂಬ ಲಜ್ಜೆಯೇ ಕಾಡಿದ್ದಿಲ್ಲ. ಶಾಲೆಗೆ ಹೋಗುವ ಆ ದಾರಿಯಲ್ಲಿ ನಾನು ಹೆಣ್ಣೂ ಅಲ್ಲ, ಗಂಡೂ ಅಲ್ಲ… ಪ್ರಕೃತಿಯ ಲಯದೊಂದಿಗೆ ಬೆರೆತು ಮಿಡಿಯುವ ಚೇತನ ಮಾತ್ರ! ಅದೇ ಶಾಲೆಗೆ ಹೋದರೆ ಮತ್ತೆ ಅಲ್ಲಿ ಹೆಣ್ಣು. ನಮಗೆಂದೇ ಬೇರೆ ಸಾಲು. ಶಾಲೆಯ ದಾಖಲೆಗಳಲ್ಲಿ ಮೂಡಿದ ಹೆಸರು ‘ಹೆಣ್ಣು’.

ಅವತ್ತು ದೇಹದಲ್ಲೇನೋ ಕಿರಿಕಿರಿ. ಕಿಬ್ಬೊಟ್ಟೆಯಲ್ಲಿ ಅಸಾಧ್ಯ ನೋವು. ಬೆನ್ನಹುರಿ ಹಿಂಡಿದಂತೆ ಸೊಂಟದ ಸುತ್ತಲೂ ಅಲೆಅಲೆಯಾಗಿ ಎದ್ದ ನೋವು. ಘಟಿಸದಿರಲೆಂದು ಅಂದುಕೊಂಡ ಘಳಿಗೆ ಘಟಿಸಿಯೇಬಿಟ್ಟಿತು ಕೊನೆಗೂ. ಆ ಘಳಿಗೆಯಿಂದಲೇ ಅಸ್ಪಶ್ಯಳಾಗಿಬಿಟ್ಟೆ! ಮನೆಯ ಭಾವವಲಯದಿಂದ ‘ಹೊರಗಾದೆ’. ತಟ್ಟೆ, ಲೋಟ, ಚೊಂಬು ಹಿಡಿದು ಮನೆಯ ಹೊರಸುತ್ತಿನಲ್ಲೇ ನಾಯಿಯೊಂದಿಗೆ ಸುತ್ತಾಟ. ಹಚಾಹಚಾ ಎಂದಾಗ ಮನಸ್ಸೇಕೋ ಉದ್ವಿಗ್ನ. ಹೆಣ್ಣಾಗುವ ಹಿಂಸೆಗೆ ಮನಸ್ಸು ವಿಲಿವಿಲಿ. ಹಾಗಾದರೆ ಹೆಣ್ಣಾದ ಸಂಭ್ರಮ ಎಲ್ಲಿ ಹುಟ್ಟಿತು ಎಂಬುದು ಅಚ್ಚರಿ. ಗಂಡೆಂಬ ಭಿನ್ನ ಅನುಭವಕ್ಕೆ ಎದುರಾದಾಗಲೇ ಹೆಣ್ಣು ಎಂಬ ಅನುಭವ ಎಚ್ಚರವಾಯಿತಾ? ಹೌದು ಎನಿಸುತ್ತದೆ. ಇಲ್ಲವಾದರೆ ಅನುಭವದ ಅನನ್ಯತೆ ಎಲ್ಲಿರುತ್ತಿತ್ತು? ಈ ಭಿನ್ನ ದೇಹಗಳ, ಭಿನ್ನ ಭಾವವಲಯಗಳ ಮುಖಾಮುಖಿ ತನ್ನಷ್ಟಕ್ಕೇ ತಾನು ಉಂಟುಮಾಡುವ ಗಾಢ ಸೆಳೆತವಿದೆಯಲ್ಲ ಅದು ನಿಧಾನಕ್ಕೆ ಸಂಭ್ರಮದ ಅಲೆಗಳಂತೆ ಆವರಿಸಿಕೊಳ್ಳುತ್ತ ಹೋಯಿತು. ಅವನು ಗಮನಿಸುತ್ತಾನೆಂಬ ಕಾರಣಕ್ಕೇ ದೇಹದ ತಿರುವುಗಳಲ್ಲಿ ಅಕಾರಣ ನವಿರು. ಹೆಣ್ಣುದೇಹದ ಕುರಿತು ಹೆಮ್ಮೆ. ಅವನ ಮೆಚ್ಚುಗೆಯ ಮಾತುಗಳು ಕಿವಿಯಲ್ಲಿ ಗುಂಯ್‍ಗುಡುತ್ತ ಅದೇ ನಾದವೇ ಎದೆಗಿಳಿದು ಎದೆಬಡಿತದಲ್ಲಿ ಸೇರಿಹೋದ ದಿವ್ಯಭಾವ. ಮೋಹಕ ಸುಳಿಗಳಲ್ಲಿ ಸುಳಿಯುವಾಗ ಗರತಿ, ಸೂಳೆ, ನೈತಿಕ, ಅನೈತಿಕ ಎಂಬ ಚೌಕಟ್ಟುಗಳೆಲ್ಲ ಛಿದ್ರಛಿದ್ರ.

ಕೊಟ್ಟುಕೊಳ್ಳುವ, ಕರಗುವ ಭಾವದಲ್ಲಿ ಅಧಿಕಾರ ಸಂಬಂಧದ ಚಿಂತನಾ ವಿನ್ಯಾಸವಿದೆಯಾ? ಎಂಬರ್ಥದ ಪ್ರಶ್ನೆಗಳನ್ನು ಸೆಮಿನಾರುಗಳು ಕೇಳುತ್ತವೆ. ಪುರುಷನೂ ಭಕ್ತಿಯಲ್ಲಿ ಹೆಣ್ಣಾಗಬಯಸುವುದು ಏಕೆಂದು ಉತ್ತರಿಸಲು ಯಾವ ಜ್ಞಾನಮಾದರಿಯ ಮೊರೆಹೋಗಬೇಕೋ ಇಂದಿಗೂ ಸ್ಪಷ್ಟವಿಲ್ಲ. ತರ್ಕಗಳಿಂದ ಕಟ್ಟಿದ ಎಲ್ಲ ಮಾದರಿಯ ಆಚೆ ನಿಂತ ಆಧ್ಯಾತ್ಮದ ತಿಳಿವು ಹೆಣ್ತನದ ಕುರಿತು ಗ್ರಹಿಸುವುದೇ ಬೇರೆ. ಸಾಧಕ ಗಂಡಾದಾಗ ‘ಅಹಂ’ ನಿರಸನಗೊಳಿಸುತ್ತ ಅವನು ಕರಗಲು ಕಲಿಯುವುದೇ ದೊಡ್ಡ ಸಾಧನೆ. ಆದರೆ ಅದು ಹೆಣ್ಣಿಗಿರುವ ಸಹಜಸ್ಥಿತಿ. ಪ್ರಕೃತಿಯ ಲಯಕ್ಕೆ ಒಂದಾಗಿ ಮಿಡಿಯುವ ಸಹಜ ನಿರಾಳತೆ ಅವಳ ಒಳಗಿನ ಅಂತರ್ಜಲ. ಶಾವಂತಿಗೆ ಗಿಡದಲ್ಲಿ ಮೊಗ್ಗೊಡೆದು ಹೂಬಿಟ್ಟಾಗ ಅಮ್ಮನ ಕಣ್ಣರಳುವುದು…. ಕೊಟ್ಟಿಗೆಯಲ್ಲಿ ದನ ಕರುಹಾಕಿದಾಗ ಅವಳಲ್ಲಿ ವಾತ್ಸಲ್ಯ ತುಳುಕುವುದು…. ಯಾರೋ ಉಂಡು ಸಂತೃಪ್ತಿಪಟ್ಟಾಗ ಅವಳ ಚಿತ್ತ ಪ್ರಸನ್ನಗೊಳ್ಳುವುದು…. ಇವೆಲ್ಲ ಏನು? ಎಂದು ಯೋಚಿಸುತ್ತೇನೆ. ಈ ಜೀವಪರತೆ, ಪೋಷಕಭಾವ, ಸೃಷ್ಟಿಸ್ಥಿತಿಯ ವಿಕಾಸ ಭಾವದಲ್ಲಿ ಅವಳ ಚಿತ್ತನೆಟ್ಟಿದೆಯಾ? ಅದಕ್ಕೆ ತಾಯಿಯಾಗಲೆಂದೇ ರೂಪುಗೊಂಡ ಅವಳ ಜೈವಿಕ ಸತ್ಯ ಕಾರಣವಾ? ಎಂದು ಕೇಳಿಕೊಳ್ಳುತ್ತೇನೆ.

ಮರದೊಳಗೆ ಮರಹುಟ್ಟಿ ಮರಚಕ್ರ ಕಾಯಾಗಿ….. ಅಜ್ಜಿ, ಅಮ್ಮ ಹೇಳುತ್ತಿದ್ದ ಒಗಟು ನೆನಪಾಗುತ್ತದೆ. ಒಡಲಲ್ಲೊಂದು ಜೀವ ಅರಳಿದಾಗ ವಿಚಿತ್ರ ಸಂಚಲನ. ದೇಹ, ಮನಸ್ಸು, ಪ್ರಜ್ಞೆ ಹೀಗೆ ಇಡಿಯಾಗಿ ಆವರಿಸಿಕೊಂಡ ಸೃಜನಭಾವ. ‘ಕರುಳಬಳ್ಳಿಯ ಸೊಲ್ಲು’ ಕೇಳತೊಡಗುತ್ತದೆ. ಮಗುವನ್ನು ರಕ್ತಲೋಳೆಗಳ ಮಡುವಿನಿಂದೆತ್ತಿ ಹಿಡಿವಾಗ ಉಂಟಾದ ಉನ್ಮಾದಕ್ಕೆ ಭಾಷೆಯೇ ಇಲ್ಲ! ಕೊಸರಿಕೊಳ್ಳುತ್ತಾ ಹಾಲು ಹೀರುವ ಮಗು ಅದರ ಬೆಚ್ಚನೆ ಸ್ಪರ್ಷ…. ಇವೆಲ್ಲ ಜೀವದ, ಭಾವದ ವಿಸ್ತರಣೆಯಾಗಿ ಬೆಳೆಯುತ್ತ ಹೋಗುವುದೇ ಒಂದು ಪರಮ ರಹಸ್ಯ. ಇದ್ಯಾವುದನ್ನೂ ಅರಿಯದ ಬೆತ್ತಲು ಸ್ಥಿತಿಯಲ್ಲಿ ಮುಗ್ಧವಾಗಿ ನಗುವ ಮಗು…. ನಿದ್ದೆಯಲ್ಲಿ ತುಟಿವಕ್ರಮಾಡಿ ಅಳುವಾಗ ಕರುಳು ಚುರಕ್ಕೆನ್ನುವುದೆಂದರೇನು ಎಂಬುದು ಅನುಭವದ ಭಾಗವಾಗುತ್ತದೆ. ಮೊಲೆಬಿಟ್ಟ ಮಗು ರಸ್ತೆಯಂಚಿನ ತಿರುವಿನಲ್ಲಿ ಕೈಬೀಸುತ್ತ ಬಯಲಿನೆಡೆ ನಡೆದಾಗ ಒಂದಳಿದು ಎರಡಾದ ಸಂಕಟ-ಸಂಭ್ರಮಗಳು ಒಟ್ಟೊಟ್ಟಿಗೆ ಹೊರಳುತ್ತವೆ. ಮಗುವನ್ನು ಅದರ ಪಾಡಿಗೆ ಅರಳಲು ಬಿಡುವ, ಮಹತ್ವಾಕಾಂಕ್ಷೆಯಿಲ್ಲದ ಮಮತೆಯ ತಾಯ್ತನ ಹಾಗೂ ‘ವಂಶದ ಕುಡಿ’ ಎಂಬ ಅಧಿಕಾರದ ತಂದೆತನಗಳಲ್ಲಿ ಸದಾ ತಾಯ್ತನ ಜೀವಪರ ಎಂಬುದು ಅರಿವಿನ ಹೆಮ್ಮೆ. ಜೀವವು ಕುಡಿಯೊಡೆವುದನ್ನು ಅನುಭವಿಸುವುದು ಅನುಭವದ ಆನಂದ. ಸಂತೈಸುವ, ಸಲಹುವ ಭಾವದ ಘನತೆಯನ್ನು ವ್ಯಕ್ತಿತ್ವದ ಭಾಗವಾಗಿಸಿಕೊಂಡು ಅರಳುತ್ತ, ಅರಳಿಸುತ್ತ ನಡೆವ ಚಲನೆಯೇ ಹೆಣ್ಣು. ಆ ಹೆಣ್ಣು ನನ್ನೊಳಗೂ ಇದ್ದಾಳೆ ಎಂಬುದೇ ತೃಪ್ತಿ. ನನ್ನೊಳಗಿನ ಹೆಣ್ಣು ಅಧಿಕಾರ ಸಂಬಂಧಗಳಿಗೆ ಅತೀತಳು, ಜ್ಞಾನಮಾದರಿಗಳಿಗೆ ಅತೀತಳು, ಭಾಷೆಯ ರಚನೆಗೂ ಮಿಗಿಲಾದವಳೆಂಬ ಅರಿವೇ ಹೆಣ್ತನವನ್ನು ಹಿಂಸೆಯ ನೆಲೆಗಳಿಂದ ಛಕ್ಕನೆ ಬಿಡುಗಡೆಮಾಡಿ ಮುಕ್ತಗೊಳಿಸುತ್ತದೆ. ಎಲ್ಲ ಬೌದ್ಧಿಕ ರಚನೆಗಳಿಂದ ಮುಕ್ತಗೊಂಡಾಗಲೇ ಸಿಗಬಹುದಾದ ನನ್ನೊಳಗಿನ ನಿಜದ ಹೆಣ್ಣಲ್ಲಿ ಕರಗುವ ಉನ್ಮಾದಕ್ಕಾಗಿ ಕಾದಿದ್ದೇನೆ.

10 thoughts on “ಸಖೀಗೀತ 9- ನನ್ನೊಳಗಿನ ಹೆಣ್ಣನ್ನು ಹುಡುಕುತ್ತಾ……..

 • October 18, 2017 at 2:42 PM
  Permalink

  Great blog here! Also your web site loads up very fast! What host are you using? Can I get your affiliate link to your host? I wish my site loaded up as fast as yours lol|

 • October 18, 2017 at 4:27 PM
  Permalink

  Hello There. I found your blog using msn. This is a really well written article. I will be sure to bookmark it and come back to read more of your useful information. Thanks for the post. I will definitely return.|

 • October 20, 2017 at 7:39 PM
  Permalink

  Very good website you have here but I was curious about if you knew of
  any message boards that cover the same topics discussed here?
  I’d really like to be a part of community where I can get feedback from other experienced individuals that share the same interest.
  If you have any recommendations, please let me know.
  Thanks!

 • October 20, 2017 at 7:55 PM
  Permalink

  Hi there to all, how is everything, I think every one is getting more from this web site, and your views are fastidious in favor of new visitors.|

 • October 20, 2017 at 8:57 PM
  Permalink

  Great goods from you, man. I have understand your stuff previous to and you are
  just extremely magnificent. I really like what you have
  acquired here, really like what you are stating and the way in which you say it.
  You make it enjoyable and you still care for to keep it smart.
  I can’t wait to read far more from you. This is really a great web site.

 • October 20, 2017 at 10:43 PM
  Permalink

  wonderful publish, very informative. I wonder why
  the opposite experts of this sector don’t understand this.
  You must proceed your writing. I am sure,
  you’ve a huge readers’ base already!

 • October 24, 2017 at 4:29 PM
  Permalink

  There are definitely loads of details like that to take into consideration. That could be a great level to bring up. I supply the ideas above as basic inspiration however clearly there are questions just like the one you bring up the place an important thing can be working in honest good faith. I don?t know if greatest practices have emerged around issues like that, however I’m certain that your job is clearly identified as a good game. Both boys and girls really feel the affect of only a moment’s pleasure, for the remainder of their lives.
  capricorn woman sagittarius man love compatibility 2018 http://www.youtube.com/watch?v=HKE3aDDj_S4

 • October 25, 2017 at 10:09 AM
  Permalink

  Excellent web site. Lots of useful info here. I’m sending it to several buddies
  ans also sharing in delicious. And obviously, thank you in your sweat!

Comments are closed.

Social Media Auto Publish Powered By : XYZScripts.com