ಅತ್ತೆ, ಮಾವ, ಹೆಂಡತಿಗೆ ಚಾಕುವಿನಿಂದ ಇರಿದು ಅಳಿಯ ಪರಾರಿ!

ಅತ್ತೆ, ಮಾವ, ಹೆಂಡತಿಗೆ ಅಳಿಯನು ಚಾಕು ಇರಿಯುತ್ತಿರುವುದನ್ನು ಕಂಡು ಬಿಡಿಸಲು ಬಂದ ಪಕ್ಕದ ಮನೆಯ ಯುವಕನಿಗೂ ಚಾಕು ಇರಿದು ಪರಾರಿಯಾದ ಘಟನೆ ಬೆಂಗಳೂರಿನ ಕೋಣಮ ಕುಂಟೆ ಬಳಿ ಇರುವ ಅನ್ನಪೂರ್ಣೇಶ್ವರಿ ಲೇಔಟ್‌ನಲ್ಲಿ ನಡೆದಿದೆ.

ಅತ್ತೆ, ಮಾವ, ಹೆಂಡತಿ ಮತ್ತು ಪಕ್ಕದ ಮನೆಯ ಯುವಕ ಸೇರಿ ನಾಲ್ವರಿಗೆ ಅಳಿಯನು ಚಾಕು ಇರಿದಿದ್ದಾನೆ. ಇದರಿಂದ ಅತ್ತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಮಾವ, ಹೆಂಡತಿ ಹಾಗೂ ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮುರುಗಮ್ಮ (42) ಸಾವನ್ನಪ್ಪಿರುವ ಮಹಿಳೆ. ಮಾವ ಕುಮಾರ್‌, ಪತ್ನಿ ಸತ್ಯಾ, ಅರುಣ್ ಚಾಕು ಇರಿತಕ್ಕೆ ಒಳಗಾದವರು. ಪಕ್ಕದ ಮನೆ ನಿವಾಸಿ ಅರುಣ್ ಗೂ ಚಾಕುವಿನಿಂದ ಇರಿಯಲಾಗಿದೆ. ಸೆಂಥಿಲ್ ಕುಮಾರ್ ನಾಲ್ಕು ಜನರಿಗೆ ಚಾಕು ಇರಿದ ವ್ಯಕ್ತಿ. ಚಾಕು ಇರಿಯುತ್ತಿದ್ದನ್ನು ಕಂಡು ತಡೆಯಲು ಬಂದಿದ್ದ ಅರುಣ್ ಗೂ ಸಹ ಪಾಪಿ ಸೆಂಥಿಲ್ ಚಾಕುವಿನಿಂದ ಹಿರಿದು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಕೋಣನಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಕಾರಣ ಏನು ಎಂದು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

One thought on “ಅತ್ತೆ, ಮಾವ, ಹೆಂಡತಿಗೆ ಚಾಕುವಿನಿಂದ ಇರಿದು ಅಳಿಯ ಪರಾರಿ!

 • October 20, 2017 at 6:31 PM
  Permalink

  Hey there! This is kind of off topic but I need some guidance from
  an established blog. Is it tough to set up your own blog?
  I’m not very techincal but I can figure things out pretty quick.
  I’m thinking about setting up my own but I’m not sure where to
  begin. Do you have any tips or suggestions? Thank you

Comments are closed.

Social Media Auto Publish Powered By : XYZScripts.com