ಕಪ್ಪತ್ತಗುಡ್ಡಕ್ಕೆ ಬೆಂಕಿ ಹಲವಾರು ಗಿಡಗಳ ಹಾನಿ!

ಉತ್ತರ ಕರ್ನಾಟಕದ ಹಸಿರು ಕಾಶಿ ಎಂದೇ ಖ್ಯಾತಿ ಪಡೆದಿದ್ದ ಗದಗ ಜಿಲ್ಲೆಯ ಕಪ್ಪತ್ತಗುಡ್ಡಕ್ಕೆ ಶುಕ್ರವಾರ ರಾತ್ರಿ ಬೆಂಕಿ ಬಿದ್ದಿದ್ದು ಹಲವಾರು ಔಷಧೀಯ ಗಿಡಮೂಲಿಕೆ ಸಸ್ಯಗಳು ಹಾನಿಯುತ್ತಿದೆ.

 ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರ, ಹಾರೋಗೇರಿ ಹಾಗೂ ಕೆಲೂರ ಗ್ರಾಮಗಳ ಮಧ್ಯದಲ್ಲಿ ಈ ಬೆಂಕಿ ಕಾಣಿಸಿಕೊಂಡಿದೆ.  ಇದರಿಂದ ಅಪಾರ ಪ್ರಮಾಣದ ಔಷಧಿ ಸಸ್ಯಗಳು ಹಾಗೂ ಸಾಲು ಸಾಲು ಮರಗಳು ಬೆಂಕಿಗೆ ಆಹುತಿಯಾಗಿವೆ. ಇನ್ನು ಪದೇ ಪದೇ ಇಂಥಹ ಅವಘಡ ಮರುಕಳಿಸುತ್ತಲೇ ಇರುತ್ತಿರುವದಕ್ಕೆ ಹಾಗೂ ಬೆಂಕಿ ಹತ್ತಿರುವ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಬಾರದಿರುವದು ಕಪ್ಪತ್ತಗುಡ್ಡದ ಅಪಾರ ಸಸ್ಯ ಸಂಕುಲ  ನಾಶಕ್ಕೆ ಕಾರಣವಾಗಿದೆ.

Comments are closed.