ರಾಯಣ್ಣ ಬ್ರಿಗೇಡ್ ಎಂದಿಗೂ ನಿಲ್ಲುವುದಿಲ್ಲ!

ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಯಣ್ಣ ಬ್ರಿಗೇಡ್ ನಡೆಸುವಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ ಅದನ್ನು ರಾಜಕೀಯ ಸಮಾವೇಶವಾಗಿ ನಡೆಸುವುದಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಬೆಂಗಳೂರಿನಲ್ಲಿ ಸಂಗೊಳ್ಳಿರಾಯಣ್ಣ ರಾಯಣ್ಣ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ಅಮಿತ್ ಷಾ ಸೂಚನೆಯಂತೆ ರಾಯಣ್ಣ ಬ್ರಿಗೇಡ್ ರಾಜಕೀಯ ಸಮಾವೇಶ ನಡೆಸುವುದಿಲ್ಲ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಯಣ್ಣ ಬ್ರಿಗೇಡ್ ಮೂಲಕ ಸನ್ಮಾನಿಸಲಾಗುವುದು. ಅಮಿತ್ ಷಾ ಅವರು ಸಂಗೊಳ್ಳಿರಾಯಣ್ಣ ಬ್ರಿಗೇಡ್ ಸಂಘಟನೆ ನಿಲ್ಲಿಸದಂತೆ ಹೇಳಿದ್ದಾರೆ.. ಬ್ರಿಗೇಡ್ ಯಾವುದೇ ಕಾರಣಕ್ಕೂ ನಿಲ್ಲಲ್ಲ. ಸಂಘಟನಾತ್ಮಕವಾಗಿ ರಾಯಣ್ಣ ಬ್ರಿಗೇಡ್ ಮುಂದುವರೆಯಲಿದೆ ಎಂದು ತಿಳಿಸಿದರು.

ಹಿಂದುಳಿದ ವರ್ಗಗಳ ಧ್ವನಿಯಾಗಿ ಬ್ರಿಗೇಡ್ ಕೆಲಸ ಮಾಡಲಿದೆ. ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿ ಬ್ರಿಗೇಡ್ ಪದಾಧಿಕಾರಿಗಳ ಪದಗ್ರಹಣ ಆಗಬೇಕು. ಪ್ರತಿಯೊಂದು ಜಿಲ್ಲೆಯಲ್ಲಿ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮ ಮಾಡಬೇಕು. ಅಧಿಕಾರ ಸ್ವೀಕಾರ ಸಮಾರಂಭ ಕಾರ್ಯಕ್ರಮಕ್ಕೆ ನಾನೇ ಬರುತ್ತೇನೆ ಎಂದು ತಿಳಿಸಿದರು.

ಮಾಜಿ ಸಚಿವ ಸೊಗಡು ಶಿವಣ್ಣ ನಿವಾಸದಲ್ಲಿ ಅತೃಪ್ತರ ಸಭೆ ವಿಚಾರ ತಿಳಿದಿದೆ. ಸಭೆಯಲ್ಲಿ ಕೆಲವು ಜಿಲ್ಲೆಗಳ ಪದಾಧಿಕಾರಿಗಳ ಬದಲಾವಣೆ ವಿಳಂಬ ಬಗ್ಗೆ ಚರ್ಚೆ ನಡೆದಿದೆ. ಜಿಲ್ಲಾ ಪದಾಧಿಕಾರಿಗಳ ಬದಲಾವಣೆಯಲ್ಲಿ ವಿಳಂಬ ಆಗಿರುವುದು ನಿಜ. ಸಭೆಯಲ್ಲಿ ಚರ್ಚೆ ನಡೆಸಿರುವ ಅಷ್ಟೂ ವಿಷಯಗಳೂ ಸತ್ಯ. ನಾನು ಯಾವುದನ್ನೂ ಅಲ್ಲಗಳೆಯುವುದಿಲ್ಲ. ನಾನು ಶೀಘ್ರದಲ್ಲೇ ಯಡಿಯೂರಪ್ಪ ಜೊತೆ ಚರ್ಚೆ ನಡೆಸುತ್ತೇನೆ. ಜಿಲ್ಲಾ ಪದಾಧಿಕಾರಿಗಳ ಬದಲಾವಣೆ ಬಗ್ಗೆ ಮಾತಾಡುತ್ತೇನೆ. ವೆಂಕಟೇಶ ಮೂರ್ತಿ ಸೇರಿ ಕೆಲವು ಮುಖಂಡರನ್ನು ಅಮಾನತು ಮಾಡಲಾಗಿದೆ. ಅಮಾನತು ವಾಪಸ್ ಪಡೆಯುವ ಬಗ್ಗೆಯೂ ಒತ್ತಾಯಿಸುತ್ತೇನೆ ಎಂದರು.

4 thoughts on “ರಾಯಣ್ಣ ಬ್ರಿಗೇಡ್ ಎಂದಿಗೂ ನಿಲ್ಲುವುದಿಲ್ಲ!

 • October 18, 2017 at 1:39 PM
  Permalink

  I was suggested this blog by my cousin. I am not sure whether this post is written by him as nobody else know such detailed about my problem. You are wonderful! Thanks!|

 • October 18, 2017 at 1:46 PM
  Permalink

  Having read this I believed it was very enlightening. I appreciate you taking the time and effort to put this information together. I once again find myself spending way too much time both reading and leaving comments. But so what, it was still worth it!|

 • October 18, 2017 at 3:21 PM
  Permalink

  Hi there, You have done an incredible job. I’ll definitely digg it and personally recommend to my friends. I am confident they’ll be benefited from this web site.|

 • October 20, 2017 at 7:48 PM
  Permalink

  I enjoy looking through a post that will make men and women think. Also, thanks for permitting me to comment!|

Comments are closed.

Social Media Auto Publish Powered By : XYZScripts.com