ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರದಿರುವುದೇ ಸೋಲಿಗೆ ಕಾರಣ!

ಬೆಂಗಳೂರು: ಸಾಮರ್ಥ್ಯಕ್ಕೆ ತಕ್ಕ ಆಟವನ್ನು ಆಡುವಲ್ಲಿ ವಿಫಲವಾಗಿದ್ದೆ ಮೊದಲ ಪಂದ್ಯದಲ್ಲಿ ಸೋಲಲು ಕಾರಣ ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ತಿಳಿಸಿದ್ದಾರೆ.

ಬಾರ್ಡರ್ ಗವಾಸ್ಕರ್ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 333 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಸೋಲು ಅನುಭವಿಸಿತು. ಅಲ್ಲದೆ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.

 

ಶನಿವಾರದಿಂದ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯುವ 2ನೇ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ. ಗುರುವಾರ ಅಭ್ಯಾಸಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಂಬೋ, ತಂಡ ಪೂರಕವಾಗಿ ಪಾತಾವರಣಕ್ಕೆ ಹೊಂದಿಕೊಂಡು ಆಡಲಿಲ್ಲ. ಇದರ ಪರಿಣಾಮ ಮೊದಲ ಟೆಸ್ಟ್‌ನಲ್ಲಿ ಸೋಲು ಅನುಭವಿಸ ಬೇಕಾಯಿತು.
ಮೊದಲ ಪಂದ್ಯದಲ್ಲಿ ನಮ್ಮ ಆಟಗಾರರು ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಪಂದ್ಯದ ಸಾಧಕ ಹಾಗೂ ಬಾಧಕಗಳ ಬಗ್ಗೆ ತಂಡ ಗಮನ ಹರಿಸಿದೆ. ಪ್ರವಾಸಿ ತಂಡ ಉತ್ತಮವಾಗಿ ಆಡಿದ ಪರಿಣಾಮ ಮೊದಲ ಪಂದ್ಯದಲ್ಲಿ ಜಯ ಸಾಧಿಸಿತು ಎಂದು ತಿಳಿಸಿದ್ದಾರೆ.
ಪುಣೆ ಸೋಲಿಗೆ ತಂಡದ ಪ್ರತಿ ಆಟಗಾರರನು ಕಾರಣ. ನಾವು ಒಬ್ಬ ಆಟಗಾರನಿಗೆ ಬೆರಳು ತೋರಿಸಿ ಹೇಳುವುದು ತಪ್ಪಾಗುತ್ತದೆ. ಎರಡನೇ ಟೆಸ್ಟ್‌ನಲ್ಲಿ ಕಳೆದ ಪಂದ್ಯದಲ್ಲಿ ಮಾಡಿದ ತಪ್ಪಿನಿಂದ ಪಾಠ ಕಲಿತು, ಆಡಬೇಕು. ಎಲ್ಲರ ತಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶವನ್ನು ನೀಡಿದರೆ ಗೆಲುವು ಸಾಧಿಸಬಹುದು. ಇನ್ನು ನಾವು ಹಿನ್ನಡೆ ಅನುಭವಿಸಿದ ಕ್ಷೇತ್ರದಲ್ಲಿ ಈಬಾರಿ ಹೆಚ್ಚು ತಾಲೀಮು ನಡೆಸಲಾಗಿದೆ. ಅಲ್ಲದೆ ತಂಡದ ಆಟಗಾರರು ಮಾನಸಿಕವಾಗಿ ಕುಗ್ಗದಂತೆ ನೋಡಿಕೊಳ್ಳಲು ಟ್ರ್ಯಾಕಿಂಗ್ ಸಹ ನಡೆಸಲಾಯಿತು ಎಂದು ಹೇಳಿದ್ದಾರೆ.
ಇನ್ನು ಡಿಆರ್‌ಎಸ್ ಸರಿಯಾಗಿ ಉಪಯೋಗಿಸಿಕೊಳ್ಳದ ಬಗ್ಗೆ ಕೇಳದ ಪ್ರಶ್ನೆಗೆ, ಇಂಗ್ಲೆಂಡ್ ಹಾಗೂ ಬಾಂಗ್ಲಾ ವಿರುದ್ಧ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ. ಡಿಆರ್‌ಎಸ್ ಬಗ್ಗೆ ತಂಡ ಚಿಂತೆ ಮಾಡುತ್ತಿಲ್ಲ ಎಂದು ತಿಳಿಸಿದ್ದಾರೆ.
ಅಜಿಂಕ್ಯ ರಹಾನೆ ಅವರನ್ನು ಕೈ ಬಿಡುತ್ತೀರಾ ಎಂಬ ಪ್ರಶ್ನೆಗೆ, ಅವರನ್ನು ಬಿಡುವ ಪ್ರಶ್ನೆ ಇಲ್ಲ. ಇತ್ತೀಚೀನ ದಿನಗಳಲ್ಲಿ ಸ್ಥಿರವಾಗಿ ರನ್ ಕಲೆ ಹಾಕಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ತ್ರಿಶತಕದ ಬಳಿಕ ಕರುಣ್ ತಂಡದಿಂದ ಹೊರಗಳಿದಿದ್ದು ದುರಾದೃಷ್ಠಕರ ಎಂದು ಹೇಳಿದ್ದಾರೆ.
ರೋಹಿತ್, ಶಮಿ ಅಭ್ಯಾಸ:ಟೆಸ್ಟ್ ಹಾಗೂ ಏಕದಿನ ಪಂದ್ಯಗಳಿಂದ ದೂರ ಉಳಿದಿದ್ದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ಗುರುವಾರ ಅಂಗಳದಲ್ಲಿ ಕಾಣಿಸಿಕೊಂಡರು.
ಭಾರತದ ಸ್ಟಾರ್ ಆಟಗಾರರೆನ್ನಾಲ್ಲಾ ಬಿಟ್ಟು ಉಳಿದ ಆಟಗಾರರು ಮೈದಾನದಲ್ಲಿ ಕಸರತ್ತು ನಡೆಸಿದರು. ಕನ್ನಡಿಗರಾದ ಕೆ.ಎಲ್ ರಾಹುಲ್ ಹಾಗೂ ಕರುಣ್ ನಾಯರ್ ಹೆಚ್ಚು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಕರುಣ್ ಸ್ಪಿನ್ ಹಾಗೂ ವೇಗದ ಬೌಲಿಂಗ್‌ಗೆ ಹೆಚ್ಚು ಒತ್ತು ನೀಡಿದಂತೆ ಕಂಡು ಬಂದರೆ, ರಾಹುಲ್ ವೇಗದ ಬೌಲಿಂಗ್ ಎದುರಿಸುವ ಕಲೆಯ ಬಗ್ಗೆ ಅಭ್ಯಾಸ ನಡೆಸಿದರು.
ಅಲ್‌ರೌಂಡರ್ ಆಟಗಾರ ಜಯಂತ್ ಯಾದವ್ ಸಹ ಬ್ಯಾಟಿಂಗ್‌ನಲ್ಲಿ ಮಿಂಚು ಹರಿಸಿದರು. ಇವರಿಗೆ ಮೊಹಮ್ಮದ್ ಶಮಿ ಬೌಲಿಂಗ್ ಮಾಡಿ ಗಮನ ಸೆಳೆದರು. ಇನ್ನು ಕರುಣ್ ನಾಯರ್ ಸಹ ಬೌಲಿಂಗ್ ಅಭ್ಯಾಸ ನಡೆಸಿದರು.
ಬುಧವಾರವಷ್ಟೇ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುವುದಾಗಿ ತಿಳಿಸಿದ್ದ ರೋಹಿತ್ ಎನ್‌ಸಿಎ ಅಂಗಳದಲ್ಲಿ ಕಾಣಿಸಿಕೊಂಡರು. ಕಿಟ್ ಸಮೇತ ಆಗಮಿಸಿದ ಮುಂಬೈ ಆಟಗಾರ, ಎಲ್ಲರ ಆಕರ್ಷಣೆಯನ್ನು ಕದ್ದರು.
ರೋಹಿತ್ ನ್ಯೂಜಿಲೆಂಡ್ ವಿರುದ್ಧ ವಿಶಾಖಾಪಟ್ಟಣದಲ್ಲಿ ನಡೆದ ಏಕದಿನ ಪಂದ್ಯದ ವೇಳೆ ಕ್ರೀಸ್ ಮುಟ್ಟುವ ಭರಾಟೆಯಲ್ಲಿ ಕಾಲಿಗೆ ಏಟು ಮಾಡಿಕೊಂಡಿದ್ದರು.
ಮುಂಬೈ ಪರ ವಿಜಯ್ ಹಜಾರೆ ಟೂರ್ನಿಯಲ್ಲಿ ಆಡುವುದಾಗಿ ರೋಹಿತ್ ಶರ್ಮಾ ತಿಳಿಸಿದ್ದರು. ಇವರು ಪರ ಮಾ.೪ ಹಾಗೂ ೬ ರಂದು ನಡೆಯುವ ಪಂದ್ಯದಲ್ಲಿ ಮೈದಾನ ಪ್ರವೇಶಿಸಲಿದ್ದಾರೆ.

3 thoughts on “ಸಾಮರ್ಥ್ಯಕ್ಕೆ ತಕ್ಕ ಆಟ ಮೂಡಿಬರದಿರುವುದೇ ಸೋಲಿಗೆ ಕಾರಣ!

 • October 21, 2017 at 4:30 AM
  Permalink

  whoah this weblog is magnificent i love studying your articles.
  Stay up the great work! You realize, many persons are looking round for this info, you
  could help them greatly.

 • October 24, 2017 at 3:23 PM
  Permalink

  I’m really enjoying the design and layout of your site.
  It’s a very easy on the eyes which makes it much more pleasant
  for me to come here and visit more often. Did you hire out a developer
  to create your theme? Exceptional work!

Comments are closed.