ವಿರಾಟ್ ಕೊಹ್ಲಿಗೆ ಪಾಲಿ ಉಮ್ರಿಗಾರ್ ಪ್ರಶಸ್ತಿ!

ಭರ್ಜರಿ ಪ್ರದರ್ಶನವನ್ನು ನೀಡುತ್ತಾ ತಂಡದ ಜಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಭಾರತದ ನಾಯಕ ವಿರಾಟ್ ಕೊಹ್ಲಿಗೆ ಪಾಲಿ ಉಮ್ರಿಗಾರ್ ಪ್ರಶಸ್ತಿ ಹಾಗೂ ಸ್ಪಿನ್ ಮಾಂತ್ರಿಕ ಅಶ್ವಿನ್ ಗೆ ದಿಲೀಪ್ ಸರ್ ದೇಸಾಯಿ ಪ್ರಶಸ್ತಿ ಘೋಷಿಸಿದೆ.

ಬೆಂಗಳೂರಿನಲ್ಲಿ ಮಾ.8 ರಂದು ನಡೆಯುವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ನೀಡಲಾಗುವುದು. ಕೊಹ್ಲಿ 2011-12 ಹಾಗೂ 2014-15 ರಲ್ಲಿ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಮೂರನೇ ಬಾರಿಗೆ ಈ ಪ್ರಶಸ್ತಿಯನ್ನು ಪಡೆಯುತ್ತಿರುವ ಹೆಗ್ಗಳಿಕೆ ಕೊಹ್ಲಿ ಅವರದ್ದಾಗಿದೆ.

ಚೆನ್ನೈನ ಸ್ಪಿನ್ ಬೌಲರ್ ಆರ್.ಅಶ್ವಿನ್ ಅವರು ದಿಲೀಪ್ ಸರ್ ದೇಸಾಯಿ ಪ್ರಶಸ್ತಿಯನ್ನು ಎರಡನೇ ಬಾರಿಗೆ ಪಡೆಯಲಿದ್ದಾರೆ. ಅಶ್ವಿನ್ 2011ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಕಳೆದ ವರ್ಷ ಅಶ್ವಿನ್ ವಿಂಡೀಸ್ ಪ್ರವಾಸದಲ್ಲಿ ಆಡಿದ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ 17 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ ಐದು ವಿಕೆಟ್ ಒಂದೇ ಇನಿಂಗ್ಸ್‌ ನಲ್ಲೂ ಕಬಳಿಸಿ ಸಾಧನೆ ಮಾಡಿದ್ದಾರೆ.

ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಿತಿಯಲ್ಲಿ ಎನ್.ರಾಮ್, ರಾಮಚಂದ್ರ ಗುಹಾ, ದಿನಾ ಎಡ್ಜು ಆಯ್ಕೆ ಸಮಿತಿಯಲ್ಲಿದ್ದ ಪ್ರಮುಖರು.

ಮಾ.8 ರಂದು ನಡೆಯುವ ಸಮಾರಂಭದಲ್ಲಿ ವಮಾನ್ ಕುಮಾರ್ ಹಾಗೂ ರಮಾಕಾಂತ್ ದೇಸಾಯಿ ಅವರಿಗೆ ಬಿಸಿಸಿಐ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸಲು ತೀರ್ಮಾನಿಸಿದೆ.

ರಣಜಿಯಲ್ಲಿ ಆಲ್‌ರೌಂಡರ್ ಪ್ರದರ್ಶನ ನೀಡಿದ ಮಧ್ಯಪ್ರದೇಶದ ಜಲಜ್ ಸಕ್ಸೇನಾ, ಅಕ್ಷರ್ ಪಟೇಲ್, ರಣಜಿಯಲ್ಲಿ ಹೆಚ್ಚು ವಿಕೆಟ್ ಪಡೆದ ಶಹಬಾಜ್ ನದೀಮ್, ಸಿ.ಕೆ ನಾಯ್ಡು ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಜಯ್ ಬಿ ಬಿಸ್ಟ, ಕೋಚ್ ಬೀಹಾರಿ ಟೂರ್ನಿಯಲ್ಲಿ ಶ್ರೇಷ್ಠ ಪ್ರದರ್ಶನ ನೀಡಿದ ಅರ್ಮನ್ ಜಾಫರ್ ಸೇರಿದಂತೆ ಇನ್ನು ಹಲವರಿಗೆ ಪ್ರಶಸ್ತಿಯ ಗರಿ ಸಂದಿದೆ.

Comments are closed.