ಬ್ಯಾಂಕ್ ಗಳಲ್ಲಿ ಇನ್ಮುಂದೆ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತ ವಿನಿಮಯ!

ನೋಟು ಬದಲಾವಣೆ ಬಳಿಕ ಹಲವಾರು ರೀತಿಯ ಬದಲಾವಣೆ ಮಾಡಿದ ಆರ್ ಬಿಐ ಇದೀಗ ಎಟಿಎಂಗಳಲ್ಲಿ ತಿಂಗಳಿಗೆ ನಾಲ್ಕು ಬಾರಿ ಮಾತ್ರ ಉಚಿತವಾಗಿ ಹಣ ಡ್ರಾ ಮಾಡಲು ಅವಕಾಶ ನೀಡಿದೆ.

ಕೇಂದ್ರ ಸರ್ಕಾರದ ನಗದು ರಹಿತ ವ್ಯವಹಾರಕ್ಕೆ ಸಾಥ್ ನೀಡಿರುವ ಕೆಲವು ಖಾಸಗಿ ಬ್ಯಾಂಕ್ ಗಳು ತಿಂಗಳಿಗೆ 4 ನಗದು ವ್ಯವಹಾರ ಮಾತ್ರವೇ ಉಚಿತವಾಗಿರಲಿದೆ ಎಂದು ತಿಳಿಸಿವೆ. ಇದರ ಜತೆಗೆ ಬ್ಯಾಂಕ್ ನಿಂದ ನಗದು ಹಣ ವಿನಿಮಯದ ಮೇಲೂ ಕೆಲ ನಿರ್ಬಂಧಗಳನ್ನು ಹೇರಿವೆ.

ಖಾಸಗಿ ಬ್ಯಾಂಕ್ ಗಳಲ್ಲಿ 5ನೇ ನಗದು ವಹಿವಾಟಿನ ಮೇಲೆ ರೂ.150 ಶುಲ್ಕವನ್ನು ವಿಧಿಸಲಿವೆ. ಆದರೆ, ಎಟಿಎಂಗಳಲ್ಲಿ ಮಾತ್ರ ಈ ಹಿಂದಿನಂತೆಯೇ ಮಾಸಿಕ 5ರ ಉಚಿತ ವಹಿವಾಟು (ಮಹಾನಗರಗಳಲ್ಲಿ ಇತರೆ ಬ್ಯಾಂಕ್ ಎಟಿಎಂ ಬಳಸಿದರೆ 3ಮಾತ್ರ ಉಚಿತ) ಮಿತಿ ಮುಂದುವರೆಯಲಿದೆ. ಕೆಲವು ದಿನಗಳ ಕಾಲ ಈ ನೀತಿಯನ್ನು ಖಾಸಗಿ ಬ್ಯಾಂಕ್ ಗಳು ಪಾಲಿಸುತ್ತಿದ್ದು ಕೆಲ ದಿನಗಳ ನಂತರ ಸರ್ಕಾರಿ ಬ್ಯಾಂಕ್ ಗಳು ಪಾಲಿಸಲಿವೆ.

ಖಾಸಗಿ ವಲಯದ ಹೆಚ್’ಡಿಎಫ್’ಸಿ, ಎಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ ಗಳು ಮಾರ್ಚ್ 1 ರಿಂದಲೇ ಜಾರಿಗೆ ಬರುವಂತೆ ನಗದು ವ್ಯವಹಾರದ ಮೇಲೆ ಹೊಸ ನಿಯಮವನ್ನು ಹೇರಿದೆ. ಅಂದರೆ, ಗ್ರಾಹಕರು ಇನ್ನು ಮುಂದೆ ತಿಂಗಳೊಂದರಲ್ಲಿ ಬ್ಯಾಂಕ್ ನಲ್ಲಿ ಗರಿಷ್ಠ 4 ಬಾರಿ ಮಾತ್ರ ನಗರು ವ್ಯವಹಾರ ನಡೆಸಬಹುದಾಗಿದೆ. ಇದರ ನಂತರದ ಅಂದರೆ 5ನೇ ವಹಿವಾಟಿಗೆ ರೂ.150 ದಂಡವನ್ನು ಬ್ಯಾಂಕ್ ವಿಧಿಸಲಿವೆ.

Comments are closed.

Social Media Auto Publish Powered By : XYZScripts.com