ಸ್ನೇಹಿತನ ಹೆಂಡತಿಯ ಅಶ್ಲೀಲ ವೀಡಿಯೋ ತೆಗೆದವನು ಮಾಡಿದ್ದೇನು?.

ವಿವಾಹಿತ ಮಹಿಳೆಯ ಅಶ್ಲೀಲ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದನ್ನು ಕಂಡು ಮನನೊಂದ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದದೆ.

ಸಂಗೀತಾ (25) ಆತ್ಮಹತ್ಯೆಗೆ ಶರಣಾದ ಗೃಹಿಣಿ. ಇವರು ಮದ್ದೂರು ತಾಲ್ಲೂಕಿನ ಸೋಮನಹಳ್ಳಿಯ ನಿವಾಸಿಯಾಗಿದ್ದರು. ನವೀನ್ ಎಂಬುವರ ಜತೆಯಲ್ಲಿ ಪ್ರೀತಿಸಿ ವಿವಾಹವಾಗಿದ್ದರು. ಸಂಗೀತಳ ಅಶ್ಲೀಲ ದೃಶ್ಯವನ್ನು ನವೀನ್ ಸ್ನೇಹಿತ ಅನಿಲ್ ಸೆರೆಹಿಡಿದಿದ್ದನು. ಈ ಅಶ್ಲೀಲ ವೀಡಿಯೋ ಇಟ್ಟುಕೊಂಡು ಅನಿಲ್ ಗೃಹಿಣಿಯನ್ನು ಬ್ಲಾಕ್ ಮೇಲ್ ಮಾಡುತ್ತಿದ್ದನು.

ಗಂಡನ ಸ್ನೇಹಿತನ ಕಿರುಕುಳದಿಂದ ಸಂಗೀತ ಮನನೊಂದಿದ್ದರು. ಅನಿಲ್ ಹತ್ತಿರ ಇದ್ದ ಅಶ್ಲೀಲ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ. ಗಂಡನ ಗೆಳೆಯ ಅನಿಲ್ ಹಾಕಿದ ವಿಡಿಯೋ ನೋಡಿ ಆಘಾತಕ್ಕೆ ಒಳಗಾದ ಸಂಗೀತ. ಮನನೊಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಡೆರ್ ನೋಟ್ ನಲ್ಲಿ ನನ್ನ ಸಾವಿಗೆ ಅನಿಲ್ ಕಾರಣ ಎಂದು ಸಂಗೀತ ತಿಳಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಡೆತ್ ನೋಟನ್ನು ಪರಿಶೀಲಿಸಿ ಆರೋಪಿಗಾಗಿ ಬಲೆ ಬೀಸಿದ್ದಾರೆ. ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

One thought on “ಸ್ನೇಹಿತನ ಹೆಂಡತಿಯ ಅಶ್ಲೀಲ ವೀಡಿಯೋ ತೆಗೆದವನು ಮಾಡಿದ್ದೇನು?.

Comments are closed.