ನಟ ಯಶ್ ಕಾರಿಗೆ ಕಲ್ಲು ತೂರಾಟ- ಕಾರು ಜಖಂ!

ಕನ್ನಡ ನಟ ರಾಕಿಂಗ್ ಸ್ಟಾರ್ ಯಶ್ ಸಂಚರಿಸುತ್ತಿದ್ದ ಕಾರಿಗೆ ಕೆಲವು ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವ ಘಟನೆ ಸೋಮವಾರ ರಾತ್ರಿ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ.

ಯಶ್ ಅವರು ಸೋಮವಾರ ರಾತ್ರಿ ಯಾದಗಿರಿ ಮೂಲಕ ಶಹಪುರಕ್ಕೆ ಚಲಿಸುತ್ತಿದ್ದರು. ಈ ವೇಳೆ ಶಹಾಪುರ ತಾಲೂಕಿನ ದೋರನಹಳ್ಳಿ ಬಳಿ ಕೆಲವು ಕಿಡಿಗೇಡಿಗಳುಕಲ್ಲು ತೂರಾಟ ನಡೆಸಿದ್ದಾರೆ. ಯಾದಗಿರಿ ಮೂಲಕ ಶಹಾಪುರಕ್ಕೆ ಹೋಗುವ ಮಾಗ೯ಮಧ್ಯದಲ್ಲಿ ಸಾವಿರಾರು ಅಭಿಮಾನಿಗಳು ಯಶ್ ಅವರಿಗೆ ನೋಡಲು ನಿಂತಿದ್ದರು. ಈ ವೇಳೆ ಪೊಲೀಸರು ಯಶ್ ಅವರನ್ನು ಭೇಟಿಯಾಗಲು ಅವಕಾಶ ನೀಡದಿರುವುದ್ದಕ್ಕೆ ಕೆಲವು ಕಿಡಿಗೇಡಿಗಳು ನಟನ ಕಾರಿಗೆ ಕಲ್ಲು ಹೊಡೆದು ಜಖಂಗೊಳಿಸಿದ್ದಾರೆ ಎನ್ನಲಾಗಿದೆ.

ಈ ಗಲಾಟೆಯಿಂದ ವಿಚಲಿತರಾದ ನಟ ಯಶ್ ಮತ್ತು ಮಾಜಿ ಸಚಿವ ರಾಜುಗೌಡ ಅವರು ಸುರಪುರದಲ್ಲಿ ಕರವೇ ನಿಗದಿಪಡಿಸಿದ ಕಾಯ೯ಕ್ರಮವನ್ನು ಮೊಟಕುಗೊಳಿಸಿ ಕೇವಲ 5 ನಿಮಿಷದಲ್ಲಿ ನಟ ಯಶ್ ಭಾಷಣ ಮುಗಿಸಿ ಹೊರಡಲು ಸಿದ್ದರಾದಾಗ ಅಭಿಮಾನಿಗಳ ನುಕ್ಕು ನುಗ್ಗಲು ಉಂಟಾಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ನಟ ಯಶ್ ಮತ್ತು ಮಾಜಿ ಸಚಿವ ರಾಜುಗೌಡ ಅವರನ್ನು ಪೊಲೀಸ್ ಜೀಪಿನಿಂದ ಬಂದೋ ಬಸ್ತ್ ನಲ್ಲಿ ಕರೆದುಕೊಂಡು ಬರಲಾಯಿತು.

Comments are closed.