ನಟ ಯಶ್ ಕೈ ಮುಗಿದು ಯುವಕರಲ್ಲಿ ಮನವಿ ಮಾಡಿದ್ದೇನು?.

ರಾಜ್ಯಾದ್ಯಂತ ಕೆರೆ ಹೂಳೆತ್ತುವುದು ನನ್ನ ಕನಸಾಗಿದೆ. ಇದಕ್ಕಾಗಿ 28 ಜಲಯೋಧರಿಂದ ಈ ಕೆಲಸ ನಡೆಯುತ್ತಿದೆ ಎಂದು ಚಿತ್ರನಟ ರಾಕಿಂಗ್ ಸ್ಟಾರ್ ಯಶ್ ತಿಳಿಸಿದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಕೆರೆಯ ಬಳಿ ಮಾತನಾಡಿದ ಅವರು, ಸಮಾಜ ರೈತರನ್ನು ಭಾವನಾತ್ಮಕವಾಗಿ ಬಳಸಿಕೊಳ್ಳುತ್ತಿದೆ. ಅಲ್ಲದೆ ಎಲ್ಲರೂ ರೈತರನ್ನು ಬಳಸಿಕೊಳ್ಳುತ್ತಿದ್ದಾರೆ. ಈಡೀ ರಾಜ್ಯದಲ್ಲಿ ಕೆಲಸ ಮಾಡಿಸುವಷ್ಟು ದುಡ್ಡು ನನ್ನಲ್ಲಿ ಇಲ್ಲ. ಇದು ಕೇವಲ ಆರಂಭವಾಗಿದೆ ಎಂದು ತಿಳಿಸಿದರು.

ಕೆರೆ ಸೇರಿದಂತೆ ಎಲ್ಲಾ ಕಾರ್ಯಗಳಿಗೂ ಸರ್ಕಾರದಿಂದ ಅನುದಾನ ಇದೆ. ನಂಬಿಕೆಯೇ ಜೀವನ, ನಾನು ಮಾಡಿದ ಕೆಲಸ 3 ರಿಂದ 4 ವರ್ಷ ಫಲ ಕೊಡುತ್ತದೆ. ನೀರಿನ ಉಳಿತಾಯ, ಶೇಖರಣೆಗೆ ಗಮನ ಕೋಡುತ್ತಿದ್ದೇನೆ. ಇದು ನಾನು ಆತ್ಮ ತೃಪ್ತಿಗಾಗಿ ಮಾಡುತ್ತಿದ್ದೇನೆ. ಅಭಿಮಾನಿಗಳು ನನ್ನನ್ನು ಚೆನ್ನಾಗಿ ಇಟ್ಟಿದ್ದಾರೆ. 96 ಎಕರೆ ಪ್ರದೇಶದ ತಲ್ಲೂರು ಕೆರೆಯ ಕೆಲಸಕ್ಕೆ ಸ್ಥಳೀಯ ಯುವಕರು ಭಾಗವಹಿಸಲು ಯಶ್ ಕರೆ ನೀಡಿದರು.

ನಿಮ್ಮ ಊರು, ನಾಡು ನುಡಿಗಾಗಿ ಸೇವೆ ಮಾಡಲು ಯುವಕರಿಗೆ ಕೈ ಮುಗಿದು ಮನವಿ ಮಾಡಿದ ಅವರು, ಜನರಿಗೆ ಯಶ್ ಬಗ್ಗೆ ಚೆನ್ನಾಗೊ ಗೊತ್ತಿದೆ. ಯಶ್ ಗೆ ಏನೂ ಮಾಡೋಲ್ಲ ಅಂತಾ ಎಲ್ಲರಿಗೂ ಗೊತ್ತಿದೆ. ಅಭಿಮಾನಿಗಳ ಸಲುವಾಗಿ ನಿನ್ನೆಯ ಕಾರ್ಯಕ್ರಮ ವಿಳಂಬವಾಯಿತು. ನಾನು ಮಾತನಾಡಲು ಏನೂ ಉಳಿದಿಲ್ಲ, ಎಲ್ಲಾ ನೀವು ಮಾಡಬೇಕು ಎಂದು ಹೇಳಿ ಕಾರ್ಯಕ್ರಮದಲ್ಲಿ ಕೆಲವು ಸಿನಿಮಾಗಳ ಡೈಲಾಗ್ ಹೊಡೆದು ರಂಜಿಸಿದರು.

Comments are closed.

Social Media Auto Publish Powered By : XYZScripts.com