ಡೈರಿ ವಿಚಾರ ತನಿಖೆ ನಡೆಸುವಂತೆ ಶೆಟ್ಟರ್ ಆಗ್ರಹ!

ಗೋವಿಂದ ರಾಜು ಡೈರಿ ವಿಚಾರ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಇದರಿಂದ ಕಾಂಗ್ರೆಸ್ ನಾಯಕರು ತಳಮಳಗೊಂಡು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಜಗಧೀಶ್ ಶೆಟ್ಟರ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡೈರಿಯಲ್ಲಿ ಬರೆದಿರುವುದು ನಿಜವಾಗಿದೆ. ಸ್ಟೀಲ್ ಬ್ರಿಡ್ಜ್ ಬಗ್ಗೆ 65 ಕೋಟಿ ಕಿಕ್ ಬ್ಯಾಕ್ ಮಾಡಿರುವುದು ಡೈರಿಯಲ್ಲಿ ನಮೂದಾಗಿದೆ. ಕೆಲವು ನಾಯಕರ ಹೆಸರೂ ನಮೂದಾಗಿದೆ ಎಂದು ಆರೋಪಿಸಿದರು.

ಡೈರಿ ಬಗ್ಗೆ ಸಮಗ್ರ ತನಿಖೆ ಆಗಬೇಕು. ಗೋವಿಂದರಾಜು ಮಂಪರು ಪರೀಕ್ಷೆಗೆ  ಒಳಪಡಿಸಬೇಕು ಎಂದು ತ್ರಿಪುರಾಂತಕ ಮೂರ್ತಿ, ರೇಣುಕಪ್ಪ ಅವರಿಂದ ಗಂಗಾನಗರದ ಸಿಬಿಐಗೆ ದೂರು ನೀಡಿದ್ದಾರೆ. ಇಬ್ಬರೂ ಬೆಂಗಳೂರಿನ ನಾಗರಿಕರು ಶೆಟ್ಟರ್ ಹೇಳಿಕೆ ಡೈರಿ ಹಗರಣದಲ್ಲಿ ನಮೂದಿಸಿರುವ ಇನಿಶಿಯಲ್ ನ ಹೆಸರುಗಳು ಮತ್ತು ಇವರ ಮೇಲೆ ತನಿಖೆ ನಡೆಸುವಂತೆ ದೂರು ದಾಖಲಿಸಿದ್ದಾರೆ.

ಎಂ.ವೋರಾ- ಮೋತಿಲಾಲ್ ವೋರಾ

ಎಸ್ ಜಿ ಆಫೀಸ್- ಸೋನಿಯಾ ಗಾಂಧಿ ಕಚೇರಿ

ಆರ್.ಜಿ.ಆಫೀಸ್- ರಾಹುಲ್ ಗಾಂಧಿ ಕಚೇರಿ

ಡಿಜಿಎಸ್- ದಿಗ್ವಿಜಯ್ ಸಿಂಗ್

ಎಪಿ- ಅಹಮದ್ ಪಾಟೇಲ್

ಕೆಜಿಜೆ- ಕೆ.ಜೆ.ಜಾರ್ಜ್

ಎಂಬಿಪಿ- ಎಂ.ಬಿ.ಪಾಟೀಲ್

ರಾಘು- ಬಿಡಿಎ ಚೀಫ್ ಎಂಜಿನಿಯರ್

ಕೆಂಪ್- ಕೆಂಪಯ್ಯ

ಆರ್ ಎಲ್ ಆರ್- ರಾಮಲಿಂಗಾರೆಡ್ಡಿ

ಆರ್ ವಿ ಡಿ- ಆರ್.ವಿ.ದೇವರಾಜು

ಆರ್ ವಿಡಿ- ಆರ್.ವಿ.ದೇಶಪಾಂಡೆ

ಡಿಕೆಎಸ್- ಡಿ.ಕೆ.ಶಿವಕುಮಾರ್

ಎಸ್ ಬಿ – ಶ್ಯಾಂ ಭಟ್

ಹೆಚ್ ಆರ್ ಬಿ- ಹೆಚ್.ಆರ್.ಭಾರಧ್ವಾಜ್

ಮೀಡಿಯಾ- ನ್ಯೂಸ್ ಚಾನಲ್ ಓನರ್

ಗೋವಿಂದ ರಾಜು ಡೈರಿಯಲ್ಲಿ ನಮೂದಾಗಿರುವ ಇನಿಶಿಯಲ್ಗಳ ಬಗ್ಗೆ ತನಿಖೆ ನಡೆಸುವಂತೆ ದೂರು ನೀಡಲಾಗಿದೆ.

Comments are closed.