ಗಲಾಟೆ ವೇಳೆ ಗನ್ ತೆಗೆದ ಪಿಎಸ್ಐಗೆ ಕಪಾಳ ಮೋಕ್ಷ!

ಕಾರು ಅಪಘಾತವಾಗಿ ಗಲಾಟೆ ವೇಳೆ ಪಿಎಸ್ ಐ ಗನ್ ಹೊರತೆಗೆದರೆ ಗುಂಪು ಗೂಡಿದ್ದ ಜನರು ಪಿಎಸ್ಐ ಮೇಲೆ ಹಲ್ಲೆಗೆ ಮುಂದಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮೂಗ್ತಿಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೂಗ್ತಿಹಳ್ಳಿ ಗ್ರಾಮದ ಬಳಿ ಗ್ರಾಮಾಂತರ ಪಿಎಸ್‌ಐ ಗವಿರಾಜ್ ತೆರಳುತ್ತಿದ್ದ ಕಾರಿಗೂ ಮತ್ತೊಂದು ಕಾರಿಗೂ ಲಗು ಅಪಘಾತ ಸಂಭವಿಸಿದೆ. ಈ ಸಂದರ್ಭ ಪಿಎಸ್‌ಐ ಗವಿರಾಜ್ ಹಾಗೂ ಸ್ಥಳೀಯರ ನಡುವೆ ಗಲಾಟೆ ಸಂಭವಿಸಿದೆ. ಈ ವೇಳೆ ಸ್ಥಳೀಯರು ಗವಿರಾಜ್ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪಿಎಸ್‌ಐ ಗವಿರಾಜ್ ಆತ್ಮರಕ್ಷಣೆಗಾಗಿ ತಮ್ಮ ಗನ್ ಹೊರಕ್ಕೆ ತೆಗೆದಿದ್ದಾರೆ. ಆಗ ಅಲ್ಲಿದ್ದ ಓರ್ವ ವ್ಯಕ್ತಿ ಗವಿರಾಜ್ ಕಪಾಳಕ್ಕೆ ಹೊಡೆದಿದ್ದಾನೆ.

ಘಟನೆ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಈ ವೇಳೆ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸ್ಥಳಕ್ಕೆ ಎಸ್‌ಪಿ ಅಣ್ಣಾಮಲೈ ಪ್ರತಿಭಟನಾ ಕಾರರನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಎಸ್ ಪಿ ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆಗೆ ಮುಂದಾಗಿ ರಸ್ತೆಯನ್ನು ಅಡ್ಡಗಟ್ಟಿದ್ದ ಪ್ರತಿಭಟನಾಕಾರರನ್ನು ಅಣ್ಣಾಮಲೈ ತರಾಟೆಗೆ ತೆಗೆದುಕೊಂಡರು. ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Comments are closed.

Social Media Auto Publish Powered By : XYZScripts.com