ಅಭಿಯಾನದಿಂದ ಹಿಂದೆ ಸರಿದ ಯೋಧನ ಪುತ್ರಿ!

ಸಾಮಾಜಿಕ ತಾಣದಲ್ಲಿ ತೀವ್ರ ಸಂಚಲನ ಉಂಟು ಮಾಡಿದ್ದ ಕಾರ್ಗಿಲ್ ಹುತಾತ್ಮ ಮನ್​ದೀಪ್ ಸಿಂಗ್ ರವರ ಪುತ್ರಿ ಗುರ್​ ವೆುಹರ್ ಕೌರ್  ಅಭಿಯಾನದಿಂದ ಹಿಂದೆ ಸರಿಯುವುದಾಗಿ ಟ್ವೀಟರ್​ನಲ್ಲಿ ತಿಳಿಸಿದ್ದಾರೆ.

ರಾಷ್ಟ್ರದ್ರೋಹ ಪ್ರಕರಣದಡಿ ಶಿಕ್ಷೆಗೆ ಒಳಗಾಗಿದ್ದ ಜೆಎನ್​ಯು ವಿದ್ಯಾರ್ಥಿ ಉಮರ್ ಖಾಲಿದ್ ಆಹ್ವಾನ ಹಿನ್ನೆಲೆ ದೆಹಲಿ ವಿವಿಯಲ್ಲಿ ಉಂಟಾಗಿದ್ದ ಘರ್ಷಣೆಯನ್ನು ವಿರೋಧಿಸಿ ಎಬಿವಿಪಿ ವಿರುದ್ಧ ಗುರ್ ಮೇಹರ್ ಆನ್​ಲೈನ್ ಅಭಿಯಾನ ಕೈಗೊಂಡಿದ್ದರು. ಇದಕ್ಕೆ ದೇಶಾದ್ಯಂತ ಪರ ವಿರೋಧಗಳು ವ್ಯಕ್ತವಾಗಿದ್ದವು. ಆದ್ದರಿಂದ ಅವರು ಅಭಿಯಾನದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ಅತ್ಯಾಚಾರ ಬೆದರಿಕೆಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಗುರ್​ವೆುಹರ್ ಕೌರ್, ದೆಹಲಿ ಮಹಿಳಾ ಆಯೋಗಕ್ಕೆ ದೂರು ನೀಡಿ ರಕ್ಷಣೆ ಕೋರಿದ್ದರು. ಪ್ರಕರಣ ಸಂಬಂಧ ಕೂಡಲೇ ಸ್ಪಂದನೆ ನೀಡಿದ್ದ ದೆಹಲಿ ಮಹಿಳಾ ಆಯೋಗ ದೆಹಲಿ ಆಯುಕ್ತರಿಗೆ ಪತ್ರ ಬರೆದು, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು.

ಅಲ್ಲದೇ ಟ್ವಿಟರ್ ನಲ್ಲಿ ಹೇಳಿಕೆ ನೀಡಿರುವ ಅವರು, ಅಭಿಯಾನವನ್ನು ಕೈಬಿಡುತ್ತಿದ್ದೇನೆ. ಈ ಮೂಲಕ ಎಲ್ಲರಿಗೂ ಶುಭಾಶಯಗಳನ್ನು ಕೋರುತ್ತಿದ್ದೇನೆ. ನಾನು ಏಕಾಂಗಿಯಾಗಿರಲು ಬಯಸಿದ್ದೇನೆ ಎಂದು ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

Comments are closed.

Social Media Auto Publish Powered By : XYZScripts.com