ದಿನಕರ್ ಶೆಟ್ಟಿ ಮತ್ತು ಪ್ರಮೋದ್ ಹೆಗಡೆ ಬಿಜೆಪಿಗೆ ಸೇರ್ಪಡೆ!

ಜೆಡಿಎಸ್ ನ ಮಾಜಿ ಶಾಸಕ ದಿನಕರ್ ಶೆಟ್ಟಿ ಮತ್ತು ಕಾಂಗ್ರೆಸ್ ಮುಖಂಡ ಪ್ರಮೋದ್ ಹೆಗಡೆಯವರು ಇಂದು ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಇಬ್ಬರು ಮುಖಂಡರನ್ನೂ ಪಕ್ಷದ ಧ್ವಜ ನೀಡುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸ್ವಾಗತಿಸಿದರು. ಬಿಜೆಪಿ ಸೇರ್ಪಡೆ ಆದ ಬಳಿಕ ದಿನಕರ ಶೆಟ್ಟಿ, ಒಂದು ಪಕ್ಷ ಬಿಟ್ಟು ಮತ್ತೊಂದು ಪಕ್ಷಕ್ಕೆ ಬರುವುದು ತುಂಬ ಕಷ್ಟ. 15 ದಿನಗಳಿಂದ ನನಗೆ ನೋವು ತಂದಿತ್ತು. ರಾಮಕೃಷ್ಣ ಹೆಗ್ಡೆಯವರ ಜೊತೆ ಗುರ್ತಿಸಿಕೊಂಡವನು ನಾನು. 2004 ರಲ್ಲಿ ಸೋಲನ್ನಪ್ಪಿದ್ದೆ. 2008 ರಲ್ಲಿ ಗೆಲುವು ಸಾದಿಸಿದ್ದೆ. 2013 ರಲ್ಲಿ ಅಲ್ಪ ಮತಗಳಿಂದ ಸೋತಿದ್ದೆ. ಮೋದಿ ಬೆಂಬಲಿಸಿ ಬಿಜೆಪಿ ಸೇರಿದ್ದೇನೆ. ಬಿಎಸ್ ವೈ ಮುಖ್ಯಮಂತ್ರಿ ಮಾಡುವುದೇ ನಮ್ಮ ಉದ್ದೇಶ ಎಂದು ತಿಳಿಸಿದರು.

ಇದೇ ವೇಳೆ ಮಾತನಾಡಿದ ಬಿಎಸ್ ವೈ ಅವರು, ಎಮ್ಮೆಲ್ಸಿ ಗೋವಿಂದರಾಜು ಬಿಜೆಪಿಗೆ ದೊಡ್ಡ ಸಹಾಯ ಮಾಡಿದ್ದಾರೆ. ಐಟಿ ದಾಳಿ ವೇಳೆ ಸಿಕ್ಕಿದ ಡೈರಿ ತಮ್ಮದೇ ಅಂತ ಗೋವಿಂದರಾಜು ಒಪ್ಪಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲಿ. ಮುಖ್ಯಮಂತ್ರಿಗಳ ಮೇಲೆ ನನಗೆ ಕರುಣೆ ಬರ್ತಿದೆ. ಡೈರಿ ಹೊರಬಂದ ಮೇಲೆ ಮೂರು ದಿನ ಅವ್ರು ಮೌನವಾಗಿದ್ದರು. ಆಮೇಲೆ ನಮ್ಮ ವಿರುದ್ಧ ನಕಲಿ ಡೈರಿ ಬಿಡುಗಡೆ ಮಾಡಿಸಿ ನಗೆ ಪಾಟಲಿಗೀಡಾದರು. ಸ್ಟೀಲ್ ಬ್ರಿಜ್ ಕಮಿಷನ್ 65 ಕೋಟಿ ಕೊಟ್ಟಿದ್ದಾರೆ. ಅದನ್ನು ಸಿಎಂ ಸಿದ್ದರಾಮಯ್ಯ ಕುಟುಂಬದವರಿಗೆ ಕೊಡಲಾಗಿದೆ. ಎಲ್ಲವೂ ಸಿಎಂ ಉರುಳಿಗೆ ಸುತ್ತಿಕೊಳ್ಳಲಿದೆ ಎಂದು ತಿಳಿಸಿದ ಅವರು ಸದ್ಯದಲ್ಲೇ ಕುಮಾರ ಬಂಗಾರಪ್ಪ ಮತ್ತು ಪರಿಮಳಾ ನಾಗಪ್ಪ ಕೂಡ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಭಟ್ಕಳದ ಮಾಜಿ ಶಾಸಕ ಜೆಡಿ ನಾಯ್ಕ ಬಿಜೆಪಿಗೆ ಸೇರಲಿದ್ದಾರೆ ಎಂದರು.

Comments are closed.