ಶಾರೂಖ್ ಸಿನಿಮಾದಲ್ಲಿ ರಣ್ಬೀರ್ ಎಕ್ಸ್ ಗರ್ಲ್ ಫ್ರೆಂಡ್ಸ್!

ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅಭಿನಯದ ಮುಂದಿನ ಚಿತ್ರದಲ್ಲಿ ಕತ್ರೀನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ನಾಯಕಿಯರಾಗಿ ಅಭಿನಯಿಸ್ತಿದ್ದಾರೆ. ಈ ಹಿಂದೆ ಶಾರೂಖ್ ಖಾನ್ ಇಬ್ಬರು ನಾಯಕಿಯರ ಜೊತೆಗೂ ಡ್ಯುಯೆಟ್ ಹಾಡಿದ್ರು ಒಂದೇ ಚಿತ್ರದಲ್ಲಿ ಮೂವರು ಒಟ್ಟಿಗೆ ಕಾಣಿಸಿಕೊಳ್ತಿರೋದು ವಿಶೇಷ. ಆನಂದ್ ಎಲ್ ರಾಯ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯರಿಬ್ಬರ ಪಾತ್ರಗಳಿಗೂ ಭಾರಿ ಮಹತ್ವ ಇದೆಯಂತೆ.

ರಣ್ಬೀರ್ ಕಪೂರ್ ಕತ್ರೀನಾ ಮತ್ತು ದೀಪಿಕಾ ಇಬ್ಬರ ಜೊತೆಗೂ ಲವ್ವಿ ಡವ್ವಿ ನಡೆಸಿದ್ದು ಎಲ್ಲರಿಗೂ ಗೊತ್ತಿದೆ. ಇದೇ ಕಾರಣಕ್ಕೆ ಕ್ಯಾಟ್, ಡಿಪ್ಪಿ ನಡುವೆ ಕೋಲ್ಡ್ ವಾರ್ ನಡೀತಿದೆ ಅಂತ ಬಾಲಿವುಡ್‍ನಲ್ಲಿ ಹೇಳಲಾಗುತ್ತಿದೆ. ಇಬ್ಬರು ಒಂದೇ ವೇದಿಕೆಯಲ್ಲಿ ಎಂದೂ ಕಾಣಿಸಿಕೊಂಡಿರಲಿಲ್ಲ. ಇಂತಾ ಸಮಯದಲ್ಲಿ ಇಬ್ಬರು ಒಂದೇ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಸುದ್ದಿ ಬಿಟೌನ್ ಮಂದಿಗೆ ಆಶ್ಚರ್ಯ ತಂದಿದೆ. ಈ ಚಿತ್ರಕ್ಕೆ `ಕತ್ರೀನಾ ಮೇರಿ ಜಾನ್’ ಅನ್ನೋ ಟೈಟಲ್ ಫಿಕ್ಸ್ ಮಾಡೊ ಆಲೋಚನೆಯಲ್ಲಿದೆಯಂತೆ ಚಿತ್ರತಂಡ.

ಕತ್ರೀನಾ ಮೇರಿ ಜಾನ್ ಸಿನಿಮಾದಲ್ಲಿ ಕತ್ರೀನಾ ಕೈಫ್ ಬಾಲಿವುಡ್ ಸೂಪರ್ ಸ್ಟಾರ್ ಪಾತ್ರದಲ್ಲಿ ಕಾಣಿಸಿಕೊಂಡ್ರೆ, ದೀಪಿಕಾ ಪಡುಕೋಣೆ ಹಳ್ಳಿ ಹುಡುಗಿಯಾಗಿ ಶಾರೂಖ್ ಖಾನ್ ಪ್ರೇಯಸಿಯಾಗಿ ಬಣ್ಣ ಹಚ್ಚಲಿದ್ದಾಳೆ ಅನ್ನಲಾಗ್ತಿದೆ. ಇದೇ ಮೊದಲ ಬಾರಿಗೆ ಶಾರೂಖ್ ಸಿನಿಮಾದಲ್ಲಿ ಒಂದು ವಿಭಿನ್ನ ರೋಲನ್ನ ಪ್ಲೇ ಮಾಡ್ತಿದ್ದಾರೆ. ಸದ್ಯ ಪಾತ್ರವರ್ಗದ ಆಯ್ಕೆಯಲ್ಲಿರೋ ಆನಂದ್ ಎಲ್ ರಾಯ್ ಶೀಘ್ರದಲ್ಲೇ ಸಿನಿಮಾ ಕುರಿತು ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

Comments are closed.

Social Media Auto Publish Powered By : XYZScripts.com